ಸಿಎಂ ಪರಿಹಾರ ನಿಧಿಗೆ ಶಿವಸಿಂಪಿ ಸಮಾಜದಿಂದ ರೂ.೫೮,೫೦೦ ದೇಣಿಗೆ

584

ಸುದ್ದಿ ಹಾಗೂ ಜಹೀರಾತಿಗಾಗಿ ಸಂಪರ್ಕಿಸಿ: +91 948 248 2182, +91 725 971 4220 ಇ ಮೇಲ್:hosanavika@gmail.com

ದಾವಣಗೆರೆ :ಕೊರೊನಾ ವೈರಸ್ ನಿಯಂತ್ರಣ ಹಿನ್ನಲೆ ಶಿವಸಿಂಪಿ ಸಮಾಜದಿಂದ ಜಿಲ್ಲಾಡಳಿತ ಭವನದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಮೂಲಕ ರೂ.೫೮,೫೦೦ ಮೊತ್ತದ ಚೆಕ್‌ನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಶಿವಸಿಂಪಿ ಸಮಾಜದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬೂಸ್ನೂರು ಮಾತನಾಡಿ, ಪ್ರತೀ ಸಂಕಷ್ಟದ ಪರಿಸ್ಥಿತಿಯಲ್ಲೂ ಶಿವಸಿಂಪಿ ಸಮಾಜವು ತನ್ನ ಕೈಲಾದ ಸಹಾಯವನ್ನು ಮಾಡಿಕೊಂಡು ಬರುತ್ತಿದೆ. ಅದೇ ರೀತಿ ಈಗ ಸಹ ಸಮಾಜದ ಬಾಂಧವರಿಂದ ದೇಣಿಗೆ ಸಂಗ್ರಹಿಸಿ ಕೊಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಗೌರವಾಧ್ಯಕ್ಷ ಬೂಸ್ನೂರು ಗುರುಬಸಪ್ಪ, ಹೇಮಣ್ಣ ಜವಳಿ, ಕಣಕುಪ್ಪಿ ಮುರುಗೇಶಪ್ಪ, ಖಜಂಚಿ ಬಾವಿಕಟ್ಟಿ ಜಗದೀಶ್, ಸಹ ಕಾರ್ಯದರ್ಶಿಗಳಾದ ಜನೇಶ್ವರ್ ಜವಳಿ, ಮಾಧ್ಯಮ ಕಾರ್ಯದರ್ಶಿಗಳಾದ ಶಿವಕುಮಾರ್ ಬಿ.ಎಂ ಇತರರು ಹಾಜರಿದ್ದರು.