ಸಾರ್ವಜನಿಕರಿಗೆ ಅಂಚೆ ಕಚೇರಿ ಪ್ರಕಟಣೆ

454

ಶಿವಮೊಗ್ಗ : ಸರ್ಕಾರವು ೧೪ ದಿನಗಳ ಲಾಕ್‌ಡೌನ್ ಘೋಷಿಸಿರು ವುದರಿಂದ ಏ.೨೮ ರಿಂದ ಮೇ ೧೦ ರವರೆಗೆ ಶಿವಮೊಗ್ಗ ವಿಭಾಗದ ಎ ಅಂಚೆ ಕಚೇರಿಗಳು ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೧೨ ಗಂಟೆಯವರೆಗೆ ಮಾತ್ರ ಸೇವೆಯನ್ನು ಒದಗಿಸಲಾಗುವುದು.
ಸಾರ್ವಜನಿಕರು ರಿಜಿಸ್ಟರ್ ಪೋಸ್ಟ್ ಮತ್ತು ಸ್ಪೀಡ್ ಪೋಸ್ಟ್ ಗಳನ್ನು ಬುಕಿಂಗ್ ಮಾಡುವಾಗ ವಿಳಾಸದಾರರ ಮೊಬೈಲ್ ಸಂಖ್ಯೆನ್ನು ಕಡ್ಡಾಯವಾಗಿ ನಮೂದಿಸುವುದು ಹಾಗೂ ತಮಗೆ ಬಂದಿರುವ ಪತ್ರಗಳ ಖಾತರಿಯನ್ನು ಸಂಬಂಧಪಟ್ಟ ಅಂಚೆ ಕಚೇರಿಯಲ್ಲಿ ದೂರವಾಣಿ ಮೂಲಕ ಸಂಪರ್ಕಿಸಿ, ಖಚಿತಪಡಿಸಿಕೊಂಡು ನಂತರ ಭೇಟಿ ನೀಡುವಂತೆ ಅಂಚೆ ಅಧೀಕ್ಷಕ ಜಿ.ಹರೀಶ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.