ಸಾಗುವಳಿ ಜಮೀನಿಗೆ ಹಕ್ಕುಪತ್ರ ನೀಡಲು ಆಗ್ರಹಿಸಿ ಶರಾವತಿ ಮುಳುಗಡೆ ಸಂತ್ತಸ್ಥರಿಂದ ಡಿಸಿಗೆ ಮನವಿ

611

ಸಾಗರ : ತಾಲ್ಲೂಕಿನ ಕಸಬಾ ಹೋಬಳಿ ಪಡವಗೋಡು ಗ್ರಾಪಂ ವ್ಯಾಪ್ತಿಯ ಹಳವಗೋಡು ಗ್ರಾಮದ ಶರಾವತಿ ಮುಳುಗಡೆ ಸಂತ್ರಸ್ತರು ಮತ್ತು ತಾಲ್ಲೂಕು ಯುವ ಒಕ್ಕೂಟದಿಂದ ತಾವು ಸಾಗುವಳಿ ಮಾಡುತ್ತಿರುವ ಜಮೀನಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಶಿವಮೊಗ್ಗದಲ್ಲಿ ಜಿಧಿಕಾರಿಗಳಿಗೆ ಹಾಗೂ ಶಿವಮೊಗ್ಗ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ಭಾರಂಗಿ ಹೋಬಳಿ ಹೆಬ್ಬೂರು ಮತ್ತು ಮಲವಳ್ಳಿ, ಬನಗೋಡಿ ಹಾಗೂ ಇಂಡುವಳ್ಳಿ ಗ್ರಾಮದಲ್ಲಿ ನಾವುಗಳು ವಾಸವಾಗಿ zವು. ನಮ್ಮ ಜಮೀನು ಹಿರೇಭಾಸ್ಕರ ನಂತರ ಶರಾವತಿ ವಿದ್ಯುತ್ ಯೋಜನೆ ಯಿಂದ ಎರಡು ಬಾರಿ ಮುಳುಗಡೆ ಯಾಗಿದೆ. ಆ ಸಂದರ್ಭದಲ್ಲಿ ನಮಗೆ ಸಾಗರ ತಾಲ್ಲೂಕಿನ ಪಡವಗೋಡು ಗ್ರಾಪಂ ವ್ಯಾಪ್ತಿಯ ಹಳವಗೋಡು ಗ್ರಾಮದಲ್ಲಿ ಜಮೀನು ಸಾಗುವಳಿ ಮಾಡಿಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು ಎಂದು ಮನವಿಯಲ್ಲಿ ತಿಳಿಸಲಾಗಿದೆ.
೧೯೫೯ರಿಂದ ನಾವು ಹಳವಗೋಡು ಗ್ರಾಮದ ಸರ್ವೇ ನಂ. ೧೨ರಲ್ಲಿ ೧೯ ಕುಟುಂಬಗಳು ಸುಮಾರು ೫೨ ಎಕರೆ ಜಮೀನು ಸಾಗುವಳಿ ಮಾಡಿಕೊಂಡು ಜೀವನ ನಡೆಸಿಕೊಂಡು ಬರುತ್ತಿದ್ದೇವೆ. ೧೯೯೫-೯೬ರಲ್ಲಿ ನಮ್ಮ ಜಮೀನುಗಳನ್ನು ಅರಣ್ಯಭೂಮಿ ಯೆಂದು ಪರಿವರ್ತನೆ ಮಾಡಲಾಗಿದೆ. ಇದರಿಂದ ನಾವು ತೀವ ಸಂಕಷ್ಟಕ್ಕೆ ಒಳಗಾಗುವಂತೆ ಆಗಿದೆ ಎಂದು ಗ್ರಾಮಸ್ಥರು ಮನವಿಯಲ್ಲಿ ದೂರಿzರೆ.
ರಾಜ್ಯಕ್ಕೆ ಬೆಳಕು ನೀಡಲು ನಮ್ಮ ಮನೆ, ಆಸ್ತಿ, ಜಮೀನು ಕಳೆದುಕೊಂಡು ಒಂದರ್ಥದಲ್ಲಿ ನಮ್ಮ ಬದುಕು ನಿರಾಶ್ರಿತವಾಗಿದೆ. ಸರ್ಕಾರವೇ ನಮ್ಮನ್ನು ಮುಳುಗಡೆ ಸಂತ್ರಸ್ತರು ಎಂದು ಪುನರ್ವಸತಿ ಕಲ್ಪಿಸಿದ ಜಗವನ್ನು ಅರಣ್ಯ ಇಲಾಖೆಗೆ ಸೇರಿಸಿ ಈತನಕ ಹಕ್ಕುಪತ್ರ ನೀಡದೆ ಇರುವುದು ಬಹಳ ನೋವಿನ ಸಂಗತಿ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪಡವಗೋಡು ಗ್ರಾಪಂ ವ್ಯಾಪ್ತಿಯ ಹಳವಗೋಡು ಗ್ರಾಮದ ಸರ್ವೇ ನಂ. ೧೨ರಲ್ಲಿ ವಾಸವಿರುವ ೧೯ ಕುಟುಂಬಗಳು ಸಾಗುವಳಿ ಮಾಡಿ ಕೊಂಡು ಬಂದಿರುವ ೫೨ ಎಕರೆ ಜಮೀನನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿ ಹಕ್ಕುಪತ್ರ ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಗತಿಪರ ಯುವ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ರಮೇಶ್ ಈ. ಕೆಳದಿ, ಮುಳುಗಡೆ ಸಂತ್ರಸ್ತರಾದ (೨ನೇ ಪುಟಕ್ಕೆ)