ಸಾಗರ: ಸೀಲ್‌ಡೌನ್ ಪ್ರದೇಶದ ಕುಟುಂಬಗಳಿಗೆ ಸಮರ್ಪಕ ಆಹಾರ ಒದಗಿಸಿ: ಡಿಎಸ್‌ಎಸ್‌ಆಗ್ರಹ

512

ಸಾಗರ : ಕೊರೋನಾ ಹಿನ್ನೆಲೆ ಯಲ್ಲಿ ಸೀಲ್‌ಡೌನ್ ಪ್ರದೇಶದ ಒಳಗೆ ಇರುವ ಕುಟುಂಬಗಳಿಗೆ ಸರ್ಕಾರದಿಂದ ಆಹಾರ ಸಾಮಗ್ರಿಗಳನ್ನು ಸಮರ್ಪಕ ವಾಗಿ ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕಷ್ಣಪ್ಪ ಬಣ) ವತಿಯಿಂದ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ದೇಶಾದ್ಯಂತ ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಸಾವುನೋವಿನ ಸಂಖ್ಯೆ ಸಹ ಜಸ್ತಿಯಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಸಾಗರ ತಾಲ್ಲೂಕಿನಲ್ಲಿ ಸಹ ಕೊರೋನಾ ಪ್ರಕರಣ ಜಸ್ತಿಯಾಗುತ್ತಿದ್ದು, ಸೋಂಕಿತರ ಮನೆ ಸುತ್ತಮುತ್ತಲೂ ಸೀಲ್‌ಡೌನ್ ಪ್ರದೇಶ ಮಾಡಲಾಗುತ್ತಿದೆ. ಆದರೆ ಸೀಲ್‌ಡೌನ್ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳು ಮನೆಯಿಂದ ಹೊರಗೆ ಬರುವಂತೆ ಇರುವುದಿಲ್ಲ. ಆದರೆ ಇವರಿಗೆ ಬೇಕಾದ ದಿನನಿತ್ಯದ ವಸ್ತುಗಳು ಸಿಗದೆ ಕುಟುಂಬಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕೊರೋನಾ ಸೋಂಕು ಕಂಡು ಬಂದ ಸೀಲ್‌ಡೌನ್ ಪ್ರದೇಶದಲ್ಲಿ ಆಹಾರ ಸಾಮಗ್ರಿಗಳನ್ನು ಒದಗಿಸಲು ಕೊರೋನಾ ವಾರಿಯರ್‍ಸ್ ತಂಡ ರಚಿಸಲಾಗಿದೆ. ಈ ತಂಡ ಸೀಲ್‌ಡೌನ್ ಪ್ರದೇಶದ ಪ್ರತಿ ಮನೆಗೆ ಭೇಟಿ ನೀಡಿ ಅವರ ಅಗತ್ಯ ಪೂರೈಸುವ ಕೆಲಸ ಮಾಡುವಲ್ಲಿ ಸಂಪೂರ್ಣ ವಿಫಲ ವಾಗಿದೆ. ಅಧಿಕಾರಿಗಳು ಕಣ್ಣೊರೆಸುವ ಕೆಲಸ ಮಾಡುತ್ತಿzರೆ. ಪ್ರಾಮಾಣಿಕ ವಾಗಿ ಸೀಲ್‌ಡೌನ್ ಪ್ರದೇಶದಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.
ಸರ್ಕಾರ ಕೂಡಲೇ ಕೊರೋನಾ ವಾರಿಯರ್‍ಸ್ ತಂಡಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ನಿರ್ದೇಶನ ನೀಡಿ ಸೀಲ್‌ಡೌನ್‌ಗೆ ಒಳಪಟ್ಟ ಪ್ರತಿ ಕುಟುಂಬಗಳಿಗೆ ದಿನನಿತ್ಯದ ಆಹಾರ ಸಾಮಗ್ರಿಗಳನ್ನು ಒದಗಿಸಬೇಕು. ಇಲ್ಲವಾದಲ್ಲಿ ಸಮಿತಿ ವತಿಯಿಂದ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳ ಲಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಸಮಿತಿ ಸಂಚಾಲಕ ಲಕ್ಷ್ಮಣ ಸಾಗರ್, ಧರ್ಮರಾಜ್ ಬೆಳಲಮಕ್ಕಿ, ಎಸ್.ವಿ.ಹಿತಕರ ಜೈನ್, ರವಿ ಕುಗ್ವೆ, ನಾಗರಾಜಸ್ವಾಮಿ, ಗಣಪತಿ ಮಂಡಗಳಲೆ ಇನ್ನಿತರರಿದ್ದರು.