ಸಾಗರದ ಅಪ್ಪು ಡಾಕ್ಟರ್ ನಿಧನ

438

ಸಾಗರ : ಇಲ್ಲಿನ ಸೊರಬ ರಸ್ತೆಯಲ್ಲಿನ ಪ್ರಖ್ಯಾತ ವೈದ್ಯ ಡಾ. ಕಷ್ಣಮೂರ್ತಿ (೮೦) ನಿಧನರಾದರು. ಮೃತರು ಪತ್ನಿ ಹಾಗೂ ಈರ್ವ ಪುತ್ರರನ್ನು ಅಗಲಿzರೆ.
ಡಾ. ಕಷ್ಣಮೂರ್ತಿ ಅವರು ಈ ಭಾಗದಲ್ಲಿ ಅಪ್ಪು ಡಾಕ್ಟರ್ ಎಂದೇ ಪ್ರಖ್ಯಾತರಾಗಿದ್ದರು. ಭಾರತ ಮತ್ತು ಬಾಂಗ್ಲಾ ಯುದ್ದ ಸಂದರ್ಭದಲ್ಲಿ ಡಾ| ಕಷ್ಣಮೂರ್ತಿ ಅವರು ಭಾರತೀಯ ಗಾಯಾಳು ಸೈನಿಕರಿಗೆ ಚಿಕಿತ್ಸೆ ನೀಡಲು ತೆರಳಿದ್ದರು.
ಇವರ ವಿಶೇಷತೆ ಎಂದರೆ ಹಿರಿಯ ನಾಗರೀಕರು ಮತ್ತು ಬಡವರಿಗೆ ಚಿಕಿತ್ಸೆಗೆ ಯಾವುದೇ ಹಣ ಪಡೆಯುತ್ತಿರಲಿಲ್ಲ. ಇವರ ಕುರಿತಾಗಿ ಒಂದು ಅಭಿನಂದನಾ ಗ್ರಂಥವನ್ನು ಸಹ ಒಡನಾಟ ಸಂಸ್ಥೆ ಹೊರ ತಂದಿತ್ತು.
ಡಾ. ಕಷ್ಣಮೂರ್ತಿ ಅವರ ನಿಧನಕ್ಕೆ ಒಡನಾಟ ಸಂಸ್ಥೆ, ಸ್ಪಂದನಾ ರಂಗ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಅನೇಕ ಸಂಘಟನೆಗಳು ಸಂತಾಪ ಸೂಚಿಸಿದೆ.