ಸಾಗರದಲ್ಲಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಸ್ಥಾಪನೆ: ಸಂಸದ ಬಿವೈಆರ್

437

ಸಾಗರ : ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯನ್ನು ಸಾಗರದಲ್ಲಿ ಸ್ಥಾಪಿಸಲಾಗುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿzರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಗಾಗಿ ಸಾಗರದ ಯಲಗಳಲೆ ಗ್ರಾಮದ ಸರ್ವೇ ನಂ. ೧೦೫ರಲ್ಲಿ ೫೦ ಎಕರೆ ಜಗವನ್ನು ಗುರುತಿಸಿ ಮಂಜೂರಾತಿಗೆ ಕಳಿಸಲಾ ಗಿದೆ. ಇದರಿಂದ ಈ ಭಾಗದ ಅಭಿವದ್ದಿ ವೇಗ ಹೆಚ್ಚಾಗಲಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಹೆzರಿ ೭೬೬ ಸಿ ಹಾದು ಹೋಗುವ ನಿಟ್ಟೂರು- ಹೊಸನಗರ ಭಾಗದ ಶಿಥಿಲ ಗೊಂಡಿರುವ ಸೇತುವೆಗಳನ್ನು ಪುನರ್ ನಿರ್ಮಿಸಲು ೧೯.೭೭ ಕೋಟಿ ರೂ., ಬೈಂದೂರು-ರಾಣೆಬೆನ್ನೂರು ಮಾರ್ಗದಲ್ಲಿ ಬರುವ ಮಡೋಡಿ ಸೇತುವೆ, ಮತ್ತಿಮನೆ ಸೇತುವೆ, ನಗರ-ಚಕ್ಕೋಡಿ ಸೇತುವೆ, ಆರೋಡಿ, ಕಾರಣಗಿರಿ, ಹೊಸ್ಮನೆ, ಹೊಸನಗರ ಒಟ್ಟು ೭ ಸೇತುವೆಗಳನ್ನು ಪುನರ್ ನಿರ್ಮಿಸಲಾಗುತ್ತದೆ ಎಂದರು.
ರಾಷ್ಟ್ರೀಯ ಹೆzರಿ ೭೬೬ ಸಿ ನ ಕೊಲ್ಲೂರು-ನಗರ- ಹೊಸನಗರ- ಶಿಕಾರಿಪುರ ರಸ್ತೆ ಕಾಮಗಾರಿಗೆ ೩೦೦ ಕೋಟಿ ರೂ. ಮಂಜೂರಾಗಿದೆ. ರಾಷ್ಟ್ರೀಯ ಹೆzರಿ ೨೦೬ರಲ್ಲಿ ಬರುವ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ೬೦ ಕೋಟಿ ರೂ. ಮಂಜೂರಾಗಿದ್ದು, ಟೆಂಡರ್ ಕರೆದು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಭೂಸಾರಿಗೆ ಮಂತ್ರಾಲಯಕ್ಕೆ ಹೊಸನಗರ ತಾಲ್ಲೂಕು ಚಕ್ಕೋಡು ಬಳಿ ಶರಾವತಿ ಹಿನ್ನೀರಿನಲ್ಲಿ ಸೇತುವೆ ನಿರ್ಮಾಣಕ್ಕೆ ೫೦ ಕೋಟಿ ರೂ., ಜಯನಗರದಿಂದ ಮಳಲಿ, ಗುಡ್ಡೆಕೊಪ್ಪ, ಸಂಪೆಕಟ್ಟೆ ರಸ್ತೆ ನಿರ್ಮಾಣಕ್ಕೆ ೫೦ ಕೋಟಿ ಹಣ ಬಿಡುಗಡೆಯಾಗಿದೆ. ತುಮರಿ- ಮುಪ್ಪಾನೆ ನಡುವಿನ ರಸ್ತೆ ನಿರ್ಮಾಣಕ್ಕೆ ೨೫ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗ ಜಿಗೆ ಕೇಂದ್ರ ದಿಂದ ಒಟ್ಟು ೨೭೫ ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.
ಜಯನಗರದ ಸುತ್ತಾ ಬಳಿ ನಾಲೆಯ ಸೇತುವೆಗೆ ೨೦ ಕೋಟಿ ರೂ., ಹಳೆಸಾಗರ ರಸ್ತೆ ಸಂಪರ್ಕ ನಾಲೆಯ ಸೇತುವೆ ನಿರ್ಮಾಣಕ್ಕೆ ೧೦ ಕೋಟಿ ರೂ., ಹಳೆಸಾಗರ ರಸ್ತೆಯ ದುಮ್ಮನ ನಾಲೆಗೆ ಹೊಸ ಸೇತುವೆ ನಿರ್ಮಾಣಕ್ಕೆ ೧೦ ಕೋಟಿ ರೂ. ಹಣ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಹಣ ಮಂಜೂರಾಗುವ ಭರವಸೆ ಇದೆ. ಕೇಂದ್ರದ ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ಸಾಗರ-ತಾಳಗುಪ್ಪ ರೈಲ್ವೆ ನಿಲ್ದಾಣದ ಉನ್ನತೀಕರಣಕ್ಕೆ ಅಗತ್ಯಕ್ರಮ ಕೈಗೊಳ್ಳಲಾಗಿದೆ. ಇದರಿಂದ ಜೋಗಕ್ಕೆ ಬರುವ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.
ಶಿವಮೊಗ್ಗ-ತಾಳಗುಪ್ಪ ರೈಲ್ವೆ ಮಾರ್ಗವನ್ನು ಕೊಂಕಣ ರೈಲ್ವೆಗೆ ಸೇರಿಸುವ ಯೋಜನೆಗೆ ಹಣದ ಕೊರತೆ ಇರುವುದರಿಂದ ತಾತ್ಕಾಲಿಕವಾಗಿ ತಾಳಗುಪ್ಪ ರೈಲ್ವೆ ಮಾರ್ಗವನ್ನು ಸಿzಪುರದವರೆಗೆ ವಿಸ್ತರಿಸಲು ಸರ್ವೇ ಕಾರ್ಯಕ್ಕೆ ಹಣ ಬಿಡುಗಡೆ ಮಾಡಲಾ ಗಿದೆ. ರೈಲ್ವೆಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದಿಂದ ಕೊಡಿಸಬಹುದಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಬದ್ದ ಇರುವುದಾಗಿ ತಿಳಿಸಿದರು.
ಕೆ.ಎಫ್.ಡಿ. ಸಂಶೋಧನಾ ಕೇಂದ್ರವನ್ನು ಸಾಗರದಲ್ಲಿಯೆ ಮಾಡ ಬೇಕು. ಇದಕ್ಕಾಗಿ ಹಿಂದೆಯೆ ಮುಖ್ಯಮಂತ್ರಿಗಳು ಹಣ ಬಿಡುಗಡೆ ಮಾಡಿzರೆ. ಶಿವಮೊಗ್ಗದಲ್ಲಿ ಮಂಗನ ಕಾಯಿಲೆ ಸಂಶೋಧನಾ ಕೇಂದ್ರ ಸ್ಥಾಪಿಸುವ ಪ್ರಸ್ತಾಪ ಇಲ್ಲ. ಮಂಕಿ ಪಾರ್ಕ್ ನಿರ್ಮಾಣಕ್ಕೆ ಈಗಾಗಲೆ ಹಣ ಬಿಡುಗಡೆಯಾಗಿದೆ. ಈಗಾಗಲೆ ಹಣ ಸಹ ಬಿಡುಗಡೆಯಾಗಿದೆ. ಮಂಕಿ ಪಾರ್ಕ್ ನಿರ್ಮಾಣಕ್ಕೆ ನಿಟ್ಟೂರು ಮತ್ತು ತಲಕಳಲೆಯಲ್ಲಿ ಜಗ ಗುರುತಿಸಲಾ ಗಿತ್ತು. ಆದರೆ ವಿರೋಧ ಕೇಳಿಬಂದ ಹಿನ್ನೆಲೆಯಲ್ಲಿ ಈತನಕ ಎಲ್ಲಿ ನಿರ್ಮಾಣ ಮಾಡಬೇಕೆಂದು ನಿರ್ಧಾರ ಮಾಡಿಲ್ಲ. ಶೀಘ್ರದಲ್ಲಿಯೆ ಶಾಸಕರಾದ ಹರತಾಳು ಹಾಲಪ್ಪ, ಅರಗ eನೇಂದ್ರ ಅವರ ಜೊತೆ ಸಮಾಲೋಚಿಸಿ ಜಗ ಗುರುತಿಸಲಾಗುತ್ತದೆ ಎಂದರು.
ಕಸ್ತೂರಿ ರಂಗನ್ ವರದಿ ಶೇ. ೭೫ ಜನರ ಪರವಾಗಿದೆ. ಶೇ. ೨೫ ಪ್ರಕೃತಿ ಉಳಿಸಿಕೊಳ್ಳುವ ಪರವಾಗಿ ಇದೆ. ಪರಿಸರ ಹಾಗೂ ಜನಜೀವನ ಎರಡೂ ಇಂದಿನ ಅಗತ್ಯ. ಹಿಂದೆ ಜರಿಗೆ ಬಂದ ಬಹುತೇಕ ವರದಿಗಳು ಶೇ. ೭೫ ಪರಿಸರ ಉಳಿಸುವ ಪರವಾಗಿದ್ದರೇ, ಶೇ. ೨೫ರಷ್ಟು ಮಾತ್ರ ಜನರ ಪರವಾಗಿತ್ತು. ಪರಿಸರ ಹಾಗೂ ಜನಜೀವನ ಎರಡೂ ಉಳಿಸುವ ನಿಟ್ಟಿನಲ್ಲಿ ಕೆಲವೊಂದು ಸಲಹೆ ನೀಡಲಾಗಿದೆ. ಕಸ್ತೂರಿ ರಂಗನ್ ವರದಿಯಲ್ಲಿ ಕೆಲವೊಂದು ಬಿಗಿಯಾದ ನಿಯಮಗಳಿದ್ದು ಅದರಲ್ಲಿ ಒಂದಷ್ಟು ಸಣ್ಣಪುಟ್ಟ ಬದಲಾವಣೆ ಮಾಡಿ ಜರಿಗೆ ತರಬೇಕು ಎಂದು ಅಭಿಪ್ರಾಯಿಸಿದರು.