ಸಾಕು ಪ್ರಾಣಿ/ಪಕ್ಷಿ ಮಾರಾಟ ನಿಷೇಧ- ಜಿಲ್ಲಾಧಿಕಾರಿ

536

ಶಿವಮೊಗ್ಗ, ಮಾರ್ಚ್ ೨೪ (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ಕರೋನಾ ವೈರಸ್ ಹರಡದಂತೆ ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಾಣಿಗಳಲ್ಲಿ ಸೋಂಕುಕಾರಕ ಮತ್ತು ಸಾಂಕ್ರಾಮಿಕ ರೋಗಗಳ ಪ್ರತಿಬಂಧಕ ಮತ್ತು ನಿಯಂತ್ರಣ ಅಧಿನಿಯಮ ೨೦೦೯ರಡಿ ಸಾಕು ಪ್ರಾಣಿಗಳ ಮಾರಾಟ ಮಳಿಗೆಗಳಲ್ಲಿ ಮಾರಾಟ ಮಾಡಲ್ಪಡುವ ಗಿಳಿ, ಲವ್‌ಬರ್ಡ್ಸ್, ಪಾರಿವಾಳ ಹಾಗೂ ಇತರೆ ಪಕ್ಷಿಗಳನ್ನು ಮಾರಾಟ ಮಾಡುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರಿಗೆ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅದೇಶ ನೀಡಿದ್ದಾರೆ.