ಸಾಂಕ್ರಾಮಿಕ ರೋಗ ಕರೊನಾದಿಂದ ಜಿಲ್ಲೆಯ ಕಟ್ಟಡ ಕಾರ್ಮಿಕರು

523

ಶಿವಮೊಗ್ಗ,ಮಾ.೨೪: ಸಾಂಕ್ರಾಮಿಕ ರೋಗ ಕರೊನಾದಿಂದ ಜಿಲ್ಲೆಯ ಕಟ್ಟಡ ಕಾರ್ಮಿಕರು, ಬಡಶ್ರಮಿಕವರ್ಗದವರು, ಆರ್ಥಿಕವಾಗಿ ಸಂಕಷ್ಟ ಅನುಭವಿಸುತ್ತಿದ್ದು, ಅವರು ಪಡೆದಿರುವ ಹಣಕಾಸು ಸಂಸ್ಥೆಗಳ ಸಾಲದ ಕಂತುಗಳನ್ನು ಸಡಿಲಗೊಳಿಸುವಂತೆ ಆಗ್ರಹಿಸಿ, ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಶಿವಮೊಗ್ಗ ಶಾಖೆಯ ಕಾರ್ಯಕರ್ತರು, ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿದರು.

ಕರೊನಾ ಭಯದಿಂದ ಜನರು ತತ್ತರಿಸಿದ್ದಾರೆ. ಅದರಲ್ಲೂ ಶ್ರಮಿಕವರ್ಗದವರಿಗೆ ಕೆಲಸವಿಲ್ಲ. ತುಂಬಾ ಕಷ್ಟವಾಗಿದೆ ದಿನಗೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ರಸ್ತೆಬದಿ ವ್ಯಾಪಾರಿಗಳು, ತುಂಬಾ ಸಂಕಷ್ಟ ಅನುಭವಿಸುತ್ತಿದ್ದು, ಕೆಲಸವಿಲ್ಲದೆ ಮನೆಯಲ್ಲಿಯೇ ಕೂರಬೇಕಾದ ಪರಿಸ್ಥಿತಿ ಬಂದಿದೆ ಎಂದು ಮನವಿದಾರರು ತಿಳಿಸಿದ್ದಾರೆ.

ಈ ಬಡ ವರ್ಗದ ಜನರು ತಮ್ಮ ಹಣಕಾಸಿನ ಅಗತ್ಯಕ್ಕೆ ಸ್ವ-ಸಹಾಯ ಸಂಘ, ಸಹಕಾರಿ ಬ್ಯಾಂಕ್, ಖಾಸಗಿ ಬ್ಯಾಂಕ್, ಖಾಸಗಿ ಹಣಕಾಸು ಸಂಸ್ಥೆ, ಮುಂತಾದ ಕಡೆ ಸಾಲ ಮಾಡಿದ್ದಾರೆ. ಬಡ್ಡಿ ಕೂಡಾ ಕಟ್ಟುತ್ತಿದ್ದಾರೆ. ಪ್ರತೀ ತಿಂಗಳು ಕಂತುಗಳನ್ನು ಕಟ್ಟಬೇಕು. ಆದರೆ ಕರೊನಾ ಹಿನ್ನಲೆಯಲ್ಲಿ ಕಂತು ಕಟ್ಟುವುದು ಕಷ್ಟವಾಗುತ್ತಿದೆ ಎಂದು ಅಳಲನ್ನು ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ಈ ಬಡವರ ಎಲ್ಲಾ ರೀತಿಯ ಸಾಲಗಳನ್ನು ತಿಂಗಳ ಕಂತುಗಳನ್ನು ಸಡಿಲಿಸಬೇಕು ಮತ್ತು ಒಂದೆರೆಡು ತಿಂಗಳು ನೆರವು ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪಿಎಫ್‌ಐನ ಜಿಲ್ಲಾಧ್ಯಕ್ಷ ಸೈಯದ್ ರಿಜ್ವಾನ್ ಸೇರಿದಂತೆ ಹಲವರು ಮನವಿ ನೀಡುವ ಸಂದರ್ಭದಲ್ಲಿ ಹಾಜರಿದ್ದರು.