ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಖಾಸಗಿ ಸಂಸ್ಥೆಗಳಿಗೆ ಜಗ: ಕರುನಾಡ ಯುವ ಶಕ್ತಿ ಸಂಘಟನೆ ಆಕ್ರೋಶ…

283

ಶಿವಮೊಗ್ಗ: ನಗರದ ಪ್ರತಿಷ್ಠಿತ ಸಹ್ಯಾದ್ರಿ ಕಾಲೇಜಿನ ಕ್ಯಾಂಪಸ್‌ನಲ್ಲಿ ಖಾಸಗಿ ಸಂಸ್ಥೆಗಳಿಗೆ ಜಗ ಕೊಡುವ ನಿರ್ಧಾರವನ್ನು ಕೂಡಲೆ ವಾಪಾಸ್ಸು ಪಡೆಯಬೇಕು ಎಂದು ಕರುನಾಡ ಯುವ ಶಕ್ತಿ ಸಂಘಟನೆ ಸರ್ಕಾರಕ್ಕೆ ಆಗ್ರಹಿಸಿದೆ.
ಸಹ್ಯಾದ್ರಿಕಾಲೇಜು ಶಿವಮೊಗ್ಗದ ಹಿರಿಮೆ. ಇಂತಹ ಕಾಲೇಜು ನಾಡಿಗೆ ಹಲವಾರು ಮಹನೀಯರನ್ನು ಕೊಡುಗೆಯಾಗಿ ನೀಡಿದೆ. ಖ್ಯಾತ ವಿeನಿ ಸಿಎನ್‌ಆರ್ ರಾವ್, eನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್. ಅನಂತಮೂರ್ತಿ, ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ, ರಂಗಕರ್ಮಿ ಕೆ.ವಿ. ಸುಬ್ಬಣ್ಣ, ಪೂರ್ಣಚಂದ್ರ ತೇಜಸ್ವಿ, ಪಿ. ಲಂಕೇಶ್, ಶಾಂತವೇರಿ ಗೋಪಾಲ ಗೌಡ, ಕಡಿದಾಳು ಶಾಮಣ್ಣ, ಕೆ.ಟಿ. ಗಂಗಾಧರ್, ಡಿ.ಹೆಚ್. ಶಂಕರಮೂರ್ತಿ, ಆಯನೂರು ಮಂಜುನಾಥ್, ಶಿವಮೊಗ್ಗ ಸುಬ್ಬಣ್ಣ, ಮಿಂಚು ಶ್ರೀನಿವಾಸ್, ಚಿತ್ರಸಾಹಿತಿ ಕವಿರಾಜ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು ಎನ್ನುವುದು ಹೆಮ್ಮೆಯ ವಿಚಾರವಾಗಿದೆ ಎಂದು ಸಂಘಟನೆ ತಿಳಿಸಿದೆ.
ಪ್ರಸ್ತುತ ಸಹ್ಯಾದ್ರಿ ಕಾಲೇಜಿನಲ್ಲಿ ೬೫೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿzರೆ. ಸಹ್ಯಾದ್ರಿ ಕಾಲೇಜಿನ ೩೦ ಎಕರೆ ಪ್ರದೇಶವನ್ನು ಸಾಯಿ ಮತ್ತು ಖೇಲೋ ಇಂಡಿಯಾಗೆ ನೀಡಲು ಒಪ್ಪಂದ ಮಾಡಿಕೊಳ್ಳಲಾ ಗಿದೆ. ಸಹ್ಯಾದ್ರಿ ಕಾಲೇಜಿನ ಹಿಂಭಾಗದಲ್ಲಿ ನಿರ್ಮಾಣ ಗೊಂಡಿರುವ ಹೊಸ ಸ್ಟೇಡಿಯಂ ಸಮೀಪದ ಸಹ್ಯಾದ್ರಿ ವಾಣಿಜ್ಯ ಕಾಲೇಜು ಕ್ರೀಡಾ ಹಾಸ್ಟೆಲ್ ಆಗಲಿದೆ. ಸಹ್ಯಾದ್ರಿ ಕಾಲೇಜ್ ಕ್ಯಾಂಪಸ್ ನ ೩೦ ಎಕರೆ ಪ್ರದೇಶದಲ್ಲಿ ಒಳಾಂಗಣ ಕ್ರೀಡಾಂಗಣ, ಸ್ವಿಮ್ಮಿಂಗ್ ಪೂಲ್, ಹಾಕಿ ಸ್ಟೇಡಿಯಂ, ಟೆನಿಸ್, ರೈಫಲ್ ಶೂಟಿಂಗ್ ಸೇರಿದಂತೆ ಅನೇಕ ಕ್ರೀಡಾ ಸಂಕೀರ್ಣ ನಿರ್ಮಾಣವಾಗಲಿದೆ. ಇದರಿಂದ ಸಹ್ಯಾದ್ರಿ ಕಾಲೇಜ್ ನಿಬಂಧಿತ ಪ್ರದೇಶವಾಗುತ್ತದೆ. ಈ ನಿರ್ಬಂಧಿತ ಪ್ರದೇಶದಲ್ಲ ಖಾಸಗಿ ಸಂಸ್ಥೆಗಳಿಗೆ ಅವಕಾಶಕೊಡುವುದು ಸರಿಯಲ್ಲ ಎಂದು ಸಂಘಟನೆ ಆರೋಪಿಸಿದೆ.
ಸಾಯಿ ಮತ್ತು ಖೇಲೋ ಇಂಡಿಯಾ ಯೋಜನೆಯಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ. ಸ್ಥಳೀಯರಿಗೆ ನಿಷೇಧ ಹೇರುವುದರಿಂದ ವಿದ್ಯಾರ್ಥಿಗಳ ಕ್ರೀಡಾ, ಶೈಕ್ಷಣಿಕ ಚಟುವಟಿಕೆಗೆ ಮತ್ತು ಸುತ್ತಲಿನ ನಿವಾಸಿಗಳ ವಾಯುವಿಹಾರಕ್ಕೆ ಸಮಸ್ಯೆಯಾಗುತ್ತದೆ. ನಗರಕ್ಕೆ ಸಾಯಿ ಮತ್ತು ಖೇಲೋ ಇಂಡಿಯಾ ಯೋಜನೆ ಬರುತ್ತಿರುವುದು ಸಂತಸದ ವಿಚಾರವೇ. ಆದರೆ, ಬೇರೆ ಕಡೆ ಇದನ್ನು ಸ್ಥಾಪಿಸಬೇಕಿದೆ ಎಂದು ತಿಳಿಸಿzರೆ.
ನಗರದ ಹದಯಭಾಗದಲ್ಲಿರುವ ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ನಲ್ಲಿ ಇಂತಹ ಯೋಜನೆಯನ್ನು ಸ್ಥಾಪಿಸಬಾರದು. ಹೊರವಲಯದ ಬೇರೆ ಜಗದಲ್ಲಿ ಸ್ಥಾಪಿಸುವುದು ಒಳ್ಳೆಯದು ಎಂದು ಕೆವೈಎಸ್‌ನ ಸಂಸ್ಥಾಪಕ ಅಧ್ಯಕ್ಷ ಎಸ್.ವಸಂತ ಕುಮಾರ್, ರಾಜ್ಯ ಯುವ ಘಟಕದ ಅಧ್ಯಕ್ಷ ಎ.ಎಸ್.ಚಿದಾನಂದ, ರಾಜಧ್ಯಕ್ಷ ಶರವಣ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಸರ್ಕಾರವನ್ನು ಆಗ್ರಹಿಸಿzರೆ.