ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜಂಭಣೆ ಜರುಗಿದ ಶ್ರೀ ಗುರು ಗದ್ದಿಗೇಶ್ವರ ಸ್ವಾಮಿ ರಥೋತ್ಸವ

362

ಹೊನ್ನಾಳಿ: ತಾಲೂಕಿನ ಕೂಲಂಬಿ ಗ್ರಾಮದ ಶ್ರೀ ಗುರು ಗದ್ದಿಗೇಶ್ವರ ಸ್ವಾಮಿ ರಥೋತ್ಸವ ಗುರುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜಂಭಣೆಯಿಂದ ನೆರವೇರಿತು.
ದಾವಣಗೆರೆ, ಶಿವಮೊಗ್ಗ, ಹಾವೇರಿ, ಚಿತ್ರದುರ್ಗ ಮತ್ತಿತರ ಜಿಗಳಿಂದ ಸಹಸ್ರಾರು ಭಕ್ತರು ಆಗಮಿಸಿ, ರಥೋತ್ಸವದಲ್ಲಿ ಹರಕೆ, ಕಾಣಿಕೆ ಸಲ್ಲಿಸಿ ಕತಾರ್ಥರಾದರು. ಎ ಭಕ್ತರಿಗೂ ಅನ್ನದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.
ರಥೋತ್ಸವದ ಪ್ರಯುಕ್ತ ಪ್ರತಿ ವರ್ಷ ಶ್ರೀ ಗುರು ಗದ್ದಿಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಸಾಮೂಹಿಕ ವಿವಾಹ ಸಮಾರಂಭ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಸಾಮೂಹಿಕ ವಿವಾಹ ಸಮಾರಂಭ ರದ್ದುಪಡಿಸಲಾಗಿತ್ತು.
ಶ್ರೀ ಗುರು ಗದ್ದಿಗೇಶ್ವರ ಸ್ವಾಮಿ ಕಾರ್ತಿಕೋತ್ಸವದ ಪ್ರಯುಕ್ತ ಬುಧವಾರ ರಾತ್ರಿ ೮ಕ್ಕೆ ಶ್ರೀ ಬಸವೇಶ್ವರ ಸ್ವಾಮಿ, ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಿಂದ ದೀಪ ರಥೋತ್ಸವ ಕಾರ್ಯಕ್ರಮ ವೈಭವದಿಂದ ನಡೆಯಿತು.
ಶ್ರೀ ಗುರು ಗದ್ದಿಗೇಶ್ವರ ಸ್ವಾಮಿಯನ್ನು ಕೈಲಾಸ ಸಭಾ ಮಂಟಪಕ್ಕೆ ತಂದು ಪೀಠಾರೋಹಣ ಮಾಡಲಾಯಿತು.