ಸರ್ಕಾರಿ ನೌಕರರ ಸಮಸ್ಯೆ ಪರಿಹಾರಕ್ಕೆ ಕ್ರಮ : ಡಿಸಿ ಭರವಸೆ

479

ದಾವಣಗೆರೆ :ನೌಕರರಿಗೆ ವಿಶೇಷ ತರಬೇತಿ ಕಾರ್ಯಾಗಾರ, ಫೆಬ್ರವರಿ ಹಾಗೂ ಹಿಂದಿನ ತಿಂಗಳ ನೌಕರರ ವೇತನ, ಸ್ವಯಂ ಚಾಲಿತ ವೇತನ ಭಡ್ತಿ, ಜೇಷ್ಠತೆ, ವರ್ಗಾವಣೆ, ಗಳಿಕೆ ರಜೆ ಸೌಲಭ್ಯ, ಖಾಲಿ ಇರುವ ಹುzಗಳ ಭರ್ತಿಗೆ ಶಿಫಾರಸು, ನೌಕರರ ವಸತಿ ಗೃಹ ಸೇರಿದಂತೆ ವಿವಿಧ ಸಮಸ್ಯೆಗಳ ಬಗೆಗೆ ಚರ್ಚೆ ನಡೆಸಲಾಯಿತು.
ಡಿಸಿ ಕಛೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿ ಸರ್ಕಾರಿ ನೌಕರರ ಸಂಘದ ಜಿಮಟ್ಟದ ಜಂಟಿ ಸಮಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿ ಸರ್ಕಾರಿ ನೌಕರರರ ಸಮಸ್ಯೆಗಳಿಗೆ ಹಾಗೂ ಬೇಡಿಕೆಗಳಿಗೆ ಈ ಹಿಂದೆ ಬಹಳಷ್ಟು ಸಕಾರತ್ಮಾಕವಾಗಿ ಸ್ಪಂದಿಸಿ ದ್ದೇವೆ. ಅದರಂತೆ ಈ ಬಾರಿಯೂ ಸಮಸ್ಯೆ ಬಗೆಹರಿಸಲು ಹಾಗೂ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಲಾ ಗುವುದು ಎಂದು ಹೇಳಿದರು.
ಕ್ರೀಡಾಂಗಣ ಹಾಗೂ ಸಮುಚ್ಚಯಕ್ಕೆ ಬೇಕಾದ ಜಗಕ್ಕೆ ಸಂಬಂಧಪಟ್ಟಂತಹ ವಿಷಯದ ಕುರಿತು ನಮ್ಮ ಅಧೀನಕ್ಕೆ ಒಳಪಡುವ ಜವಾಬ್ದಾರಿ ನಿಭಾಯಿಸುತ್ತೇವೆ. ದೂಡಾ ಹಾಗೂ ಕಾರ್ಪೋರೇಷನ್ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಕೆಲವು ವಿಷಯಗಳು ಹಾಗೂ ಸಮಸ್ಯೆಗಳು ನಮ್ಮ ನಮ್ಮ ಹಂತ ದಲ್ಲಿಯೇ ಬಗೆಹರಿಸಿ ಪರಿಹಾರ ಕೊಂಡುಕೊಳ್ಳಬಹುದಾಗಿದೆ. ಬದಲಾಗಿ ಸುಖಾ ಸಮ್ಮನೆ ಮೇಲ್ಮಟ್ಟಕ್ಕೆ ಒಯ್ಯುವಂತೆ ಆಗಬಾರದು. ಸಮಾಜದ ಕಟ್ಟಕಡೆಯ ವ್ಯಕ್ತಿ ಎಂದು ಕೊಂಡು ನಾನು ನನ್ನ ಕೆಲಸ ನಿರ್ವಹಿಸುತ್ತಿರುವೆ. ಅದೇ ರೀತಿ ಎಲ್ಲರೂ ಭಾವಿಸಿಕೊಂಡು ತಮ್ಮ ಕೆಲಸ ಮಾಡಬೇಕು. ಯಾರೊಬ್ಬರು ದೂರದೇ ಹಾಗೂ ಶೋಷಣೆಗೆ ಒಳಪಡದಂತಹ ಪೂರಕ ವಾತಾವರಣ ದೊಳಗೆ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಬೇಕು ಎಂದರು.
ನೀವಿಲ್ಲದೆ ಏನೂ ಸಾಧ್ಯವಿಲ್ಲ. ಮುಂಬರುವ ಪರಿಸ್ಥಿಯಲ್ಲಿ ಇನ್ನೂ ಸಂದಿಗ್ಧ ವಾತಾವರಣ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ಎಲ್ಲರೂ ಒಟ್ಟಾಗಿ ಮುಂದೆ ಸಾಗೋಣ. ಆ ಮೂಲಕ ಜಿಯಲ್ಲಿ ಮುಂದಿನ ದಿನಗಳಲ್ಲಿ ಕೊರೊನಾ ನಿಯಂತ್ರಣ ವಿರುದ್ಧ ಹೋರಾಡಲು ಎಲ್ಲರ ಕೈ ಜೋಡಿಸಬೇಕು. ಎ ಸರ್ಕಾರಿ ನೌಕರರು ಕೊರೊನಾ ಸಂದರ್ಭದಲ್ಲಿ ಮಾರ್ಚ್ ಮೊದಲ ವಾರದಿಂದ ಇಲ್ಲಿಯವರೆಗೂ ತಮ್ಮನ್ನು ತಾವು ತೊಡಗಿಸಿಕೊಂಡು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿzರೆ. ಈ ಹಿನ್ನೆಲೆಯಲ್ಲಿ ಜಿಯ ಎ ಸರ್ಕಾರಿ ನೌಕರರಿಗೂ ಅಭಿನಂದನೆ ಸಲ್ಲಿಸಲು ಇಷ್ಟಪಡುತ್ತೇನೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿ ಅಧ್ಯಕ್ಷ ಬಿ.ಪಾಲಾಕ್ಷಿ ಮಾತನಾಡಿ, ಕೆಸಿಎಸ್‌ಆರ್, ಎಸ್‌ಆರ್ ಹಾಗೂ ಇಲಾಖೆಗಳಿಗೆ ಸಂಬಂಧಪಟ್ಟಂತಹ ಹಾಗೂ ನೌಕರರಿಗೆ ಮತ್ತು ಅಧಿಕಾರಿ ವರ್ಗದವರ ಉತ್ತಮ ಸಂಬಂಧಕ್ಕೆ ಪೂರಕವಾಗುವ ರೀತಿಯಲ್ಲಿ ನೌಕರರಿಗೆ ವಿಶೇಷ ರೀತಿಯ ತರಬೇತಿ ಕಾರ್ಯಾಗಾರ ಆಯೋಜಿಸಬೇಕು. ಕೆಲ ಇಲಾಖೆಗಳಲ್ಲಿ ನೌಕರರಿಗೆ ಡಿಸೆಂಬರ್, ಜನವರಿ, ಫೆಬ್ರವರಿ ಮಾಹೆಯ ಸಂಬಳ ಆಗಿರುವುದಿಲ್ಲ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಪ್ರಸ್ತಾವನೆ ಕಳುಹಿಸಿಕೊಡುವಂತೆ ಕೋರಿದರು.
ಜಿಯಲ್ಲಿ ಖಾಲಿ ಇರುವ ಹುz ಭರ್ತಿಗೆ ಶಿಫಾರಸ್ಸು ಮಾಡಬೇಕು. ಇಡೀ ರಾಜ್ಯದಲ್ಲಿ ೭.೪೦ ಲಕ್ಷ ಮಂಜೂರಾತಿ ಇದೆ. ಆದರೆ ೫.೪೦ ಲಕ್ಷ ಜನರು ಕೆಲಸ ಮಾಡುತ್ತಿzರೆ. ಜಿಯಲ್ಲಿ ೫ ಸಾವಿರ ಹುzಗಳು ಖಾಲಿ ಇವೆ. ನಮಗೆ ಭರ್ತಿ ಮಾಡಿಕೊಳ್ಳುವ ಅವಕಾಶವಿಲ್ಲದಿದ್ದರೂ ಕೂಡ ಹುz ಭರ್ತಿ ಮಾಡುವಂತೆ ಶಿಫಾರಸ್ಸು ಮಾಡ ಬಹುದಾಗಿದೆ ಎಂದು ತಿಳಿಸಿದರು.
ನೌಕರರ ನಡುವಿನ ವ್ಯಾಜ್ಯ ಹಾಗೂ ಇತರ ನೌಕರರಿಗೆ ನೀಡುತ್ತಿರುವ ಕಿರುಕುಳದ ಬಗ್ಗೆ ನೌಕರರ ಮನವಿ ಬಂದಿವೆ. ಈ ಹಿನ್ನೆಲೆಯಲ್ಲಿ ಅಧಿಕಾರಿ ಮತ್ತು ನೌಕರರ ನಡುವೆ ಸಾಮರಸ್ಯ, ಉತ್ತಮ ಬಾಂಧವ್ಯ ಮೂಡಿಸಲು ಜನಸ್ಪಂದನದ ರೀತಿಯಲ್ಲಿ ನೌಕರರ ಸ್ಪಂದನ ಕಾರ್ಯಕ್ರಮ ನಡೆಸಬೇಕು ಎಂದ ಅವರು ಸರ್ಕಾರಿ ನೌಕಕರಿಗೆ ಸಂಬಂಧಿಸಿದ ಹಲವಾರು ವಿಷಯಗಳ ಕುರಿತು ಸಭೆಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಿಂದ ತಾಲ್ಲೂಕಿನ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ಅಪರ ಜಿಧಿಕಾರಿ ಪೂಜರ ವೀರಮಲ್ಲಪ್ಪ, ಹೆಚ್ಚುವರಿ ಜಿ ಪೊಲೀಸ್ ಅಧೀಕ್ಷಕ ರಾಜೀವ್, ಡಿಎಚ್‌ಓ ಡಾ.ರಾಘವೇಂದ್ರ ಸ್ವಾಮಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಜಿ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.