ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರಿಗೆ ಅಭಿನಂದನೆ

448

ಭದ್ರಾವತಿ : ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತ ವಿಶ್ವೇಶ್ವರಯ್ಯ ವಿದ್ಯಾ ಸಂಸ್ಥೆಯ ಸಮಗ್ರ ಮೂಲಭೂತ ಸೌಕರ್‍ಯಗಳ ಅವಶ್ಯಕತೆಗಾಗಿ ರಾಜ್ಯ ಸರ್ಕಾರವು ಒಂದು ಕೋಟಿ ರೂ ಗಳ ಅನುದಾನವನ್ನು ಬಿಡುಗಡೆ ಮಾಡಿದೆ.
ಅನುದಾನ ಬಿಡಗಡೆಗೆ ಶ್ರಮಿಸಿದ ಹಾಗು ಹುಟ್ಟು ಹಬ್ಬ ಆಚರಿಸಿದ ರಾಜ್ಯ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ರವರಿಗೆ ಭದ್ರಾವತಿ ತಾಲ್ಲೂಕು ಸರ್ಕಾರದ ವಿವಿಧ ಇಲಾಖೆಯ ಸಂಘಟನೆಯ ಪದಾಧಿಕಾರಿಗಳು ಹಾಗು ನೌಕರರು ಶಿವಮೊಗ್ಗದಲ್ಲಿ ಸನ್ಮಾನಿಸಿದರು.
ಇದೇ ಸಂಧರ್ಭದಲ್ಲಿ ಸಂಸ್ಥೆಯ ಭವಿಷ್ಯದ ಶೈಕ್ಷಣಿಕ ಅಭಿವೃಧ್ಧಿಗಳಿಗೆ ಅನ್ವರ್ ಕಾಲೋನಿಯಲ್ಲಿ ಖರೀದಿಸಿದ್ದ ಮೂರು ಎಕರೆ ಜಮೀನನ್ನು ಆಕ್ರಮ ವಾಗಿ ಸುಮಾರು ಒಂದು ಕೋಟಿ ರೂಗಳಿಗೆ ಹತ್ತು ವರ್ಷಗಳ ಹಿಂದೆ ಮಾರಾಟ ಮಾಡಲು ಯತ್ನಿಸಿದ ಪ್ರಕ್ರಿಯೆಯನ್ನು ತಡೆದು ಅದನ್ನು ಸಂಸ್ಥೆಯ ವಶದ ಮುಂದುವರೆಯು ವಂತೆ ಮಾಡಿದನ್ನು ಇದೆ ಸಂಧರ್ಭದಲ್ಲಿ ಸ್ಮರಿಸಿ ಕೃತeತಾಪೂರ್ವಕವಾಗಿ ಅಭಿನಂದಿಸಿದರು.
ಈ ಕಾರ್ಯದ ನೇತೃತ್ವವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಸದಸ್ಯರುಗಳಾದ ಕೆ.ಶಾಮಣ್ಣ, ಡಾ.ಜಿ.ಎಂ.ನಟರಾಜ್, ಬಿ.ಎಲ್.ರಂಗಸ್ವಾಮಿ ಹಾಗು ವಿವಿಧ ಇಲಾಖೆಗಳ ಪದಾಧಿಕಾರಿಗಳಾದ ಎಸ್.ಕುಬ್ಯಾನ್ಯಾಕ್, ಬಿ.ಸಿದ್ದಬಸಪ್ಪ, ಲೋಹಿತೇಶ್ವರಪ್ಪ, ಬಸವಂತರಾವ್ ದಾಳೆ, ಎನ್. ಧನಂಜಯ, ಯು. ಮಹಾದೇವಪ್ಪ, ಎಂ.ಎಸ್. ಮಲ್ಲಿಕಾರ್ಜುನ , ರೇವಣಪ್ಪ, ನಿಸ್ಸಾರ್ ಖಾನ್, ಜಗದೀಶ್, ರಾಜನಾಯ್ಕ್, ದೇವೇಂದ್ರ ನಾಯ್ಕ್, ಎನ್.ಡಿ. ಮಂಜುನಾಥ್, ಶಿವಕುಮಾರ್, ಜಯಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.