ಸರಸ್ವತೀ ಮಂದಿರದಲ್ಲಿ ಅಮಲೇರಿಸಿಕೊಂಡ ಅನಾಗರೀಕರು

371

ನಾಗರಿಕ ಸಮಾಜದಲ್ಲಿ ಒಳ್ಳೆಯ ಸಂಸ್ಕಾರವಂತನಾಗಿ ಬದುಕಲು ಆದರ್ಶ ಪುರುಷರ ತತ್ತ್ವ ಸಿದ್ಧಾಂತಗಳ ಮೂಲಕ ಸರಸ್ವತಿಯ ನೆಲೆಯಾಗಿರುವ ಶಾಲಾ ದೇವಾಲಯದಲ್ಲಿ ಸಂಸ್ಕಾರವಂತ ಶಿಕ್ಷಣವನ್ನು ಪಡೆದು ತಮ್ಮನ್ನು ಹೆತ್ತ ತಂದೆ ತಾಯಿಗಳಿಗೂ ಹಾಗೂ ತಮ್ಮ ಮನೆಯ ಮಕ್ಕಳಿಗೂ ಆದರ್ಶವಾಗಿ ಬದುಕಿ ಉತ್ತಮ ನಾಗರಿಕ ಸಮಾಜ ನಿರ್ಮಾಣ ಮಾಡಬೇಕಾದ ಜವಾಬ್ದಾರಿ ಹೊಂದಿರುವ ಜನರು ಅದೇ ಜ್ಞಾನ ದೇಗುಲದ ಆವರಣದಲ್ಲಿ ಹೀನ ಮನಸ್ಥಿತಿಯೊಂದಿಗೆ ಅನಾಗರಿಕರಂತೆ ವರ್ತಿಸಿ ಮದ್ಯಪಾನ ಮಾಡುವವರು ನಾಗರಿಕ ಸಮಾಜಕ್ಕೇ ಅನರ್ಹರು.
ಹರಿಹರ ತಾಲೂಕಿನ ಭಾನುವಳ್ಳಿ ಸುಸಂಸ್ಕೃತ ನಾಗರೀಕರನ್ನು ಹೊಂದಿದ ಗ್ರಾಮಗಳಲ್ಲಿ ಒಂದು.
ಉತ್ತಮ ಸಂಸ್ಕಾರ, ಉತ್ತಮ ಶಿಕ್ಷಣ ಪಡೆದ ನಾಗರಿಕರ ಮುಂದೆ ಕೆಲವು ಕೊಳಕು ಮನಸ್ಸಿನ ವ್ಯಕ್ತಿಗಳು ಗ್ರಾಮದ eನ ದೇಗುಲವಾದ ಪ್ರೌಢ ಶಾಲಾ ಕಟ್ಟಡದ ಕಟ್ಟೆಯ ಮೇಲೆ ಕುಳಿತು ಮದ್ಯ ಸೇವನೆ ಮಾಡುತ್ತಾರೆ ಎಂದರೆ ಇವರು ಎಂತಹ ನೀಚ ಮನಸ್ಥಿತಿ ಹೊಂದಿದ್ದಾರೆಂಬುದನ್ನು ಒಮ್ಮೆ ಚಿಂತಿಸಬೇಕಾಗುತ್ತದೆ .
ಈ ರೀತಿಯ ನೀಚರಿಗೆ ಶಾಲೆಯು ಒಂದು ‘ಸಂಸ್ಕಾರ’ ಕಲಿಸುವ ದೇಗುಲ ಎಂಬ ಅರಿವು ಇರುವುದಿಲ್ಲ. ತಮ್ಮ ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣವಾಗುವುದು ಇಂಥ ಸರಸ್ವತಿ ಮಂದಿರದಿಂದಲೇ ಎಂಬ ಪರಿeನವೂ ಇರುವುದಿಲ್ಲ .
ನಿಶೆಯ ನಶೆಯನ್ನು ಏರಿಸಿಕೊಳ್ಳಲು ಇಂಥ ಹೀನ ಮನಸ್ತಿತಿಯ ಜನರಿಗೆ ಶಾಲೆಯ ಆದರೇನು, ತಮ್ಮ ಮನೆಯ ದೇವರ ಕೋಣೆಯೇ ಆದರೇನು ಎರಡೂ ಒಂದೇ ಎಂದು ಭಾವಿಸಿ ನಿಶೆಯ ನಶೆಯನ್ನು ಏರಿಸಿಕೊಂಡು ಅನಾಗರಿಕರಾಗಿ ಜೀವನವನ್ನು ಸಾಗಿಸುತ್ತಾರೆ. ಈ ರೀತಿಯ ವ್ಯಕ್ತಿಗಳು ಹಾಗೂ ಇಂತಹವರಿಗೆ ಪ್ರೋತ್ಸಾಹಿಸುತ್ತಿರುವ ವ್ಯಕ್ತಿಗಳಿಂದಲೇ ಸ್ವಾಸ್ಥ ಸಮಾಜ ಇಂದು ಹಾದಿತಪ್ಪುತ್ತಿರುವುದು.
ಸಮಾಜವನ್ನು ಸರಿದಾರಿಗೆ ಕೊಂಡುಯ್ಯುವ ಜವಾಬ್ದಾರಿ ಹೊಂದಿರುವ ಜನಪ್ರತಿನಿಧಿಗಳು ಚುನಾವಣೆಗಳಲ್ಲಿ ತಾವು ಹಾಗೂ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವುಗಾಗಿ ಅಮಾಯಕ ಮತದಾರನನ್ನು ಅಮಲಿನಲ್ಲಿ ಮುಳುಗಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಮತದಾರರ ಬಂಧುಗಳೂ ಕೂಡ ಇಂತಹ ಹಣ ಮತ್ತು ಹೆಂಡದ ಆಮಿಷಗಳಿಗೆ ಒಳಗಾಗದೇ, ಜಾತಿ-ಧರ್ಮ ಮತ್ತು ಪಕ್ಷ ಎಂಬ ಅಮಲಿನ ಬಲೆಗೆ ಬೀಳದೆ ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕಾಗಿರುವುದು ಇಂದಿನ ಅನಿವಾರ್ಯವಾಗಿದೆ ಎಂಬುದನ್ನೂ ಅರಿಯಬೇಕಿದೆ.
ಭಾನುವಳ್ಳಿ ಗ್ರಾಮದ ಪ್ರೌಢ ಶಾಲಾ ಆವರಣದಲ್ಲಿ ಮದ್ಯ ಸೇವನೆ ಮಾಡಿದ ಹೀನ ಮನಸ್ತಿತಿಯ ಅನಾಗರಿಕ ವ್ಯಕ್ತಿಗಳನ್ನು ಹಾಗೂ ಇವರಿಗೆ ಮದ್ಯ ಸರಬರಾಜು ಮಾಡಿದ ವ್ಯಕ್ತಿ ಅಥವಾ ತಂಡವನ್ನು ಮಲೆಬೆನ್ನೂರು ಪೊಲೀಸ್ ಠಾಣಾಧಿಕಾರಿಗಳು ಕೂಡಲೇ ಬಂಧಿಸಬೇಕು. ನಿಮ್ಮ ಲಾಠಿ ಏಟಿನ ಮೂಲಕ ಸ್ವಾಸ್ಥ ಸಮಾಜ ನಿರ್ಮಾಣ ಮಾಡುವ ಪಾಠ ಕಲಿಸಬೇಕಾಗಿದೆ. ಇಂತಹವರನ್ನು ಗ್ರಾಮದಿಂದಲೇ ಗಡಿಪಾರು ಮಾಡುವಂತಹ ಶಿಕ್ಷೆ ನೀಡಬೇಕಾಗಿದೆ.
ಸರಸ್ವತಿಯ ನೆಲೆಯಲ್ಲಿ ಮದ್ಯ ಸೇವನೆ ಮಾಡುವಂತಹ ಹೀನ ಮನಸ್ತಿತಿಯ ಜನರನ್ನು ಗ್ರಾಮದ ಜನರು ಕಂಡ ಕೂಡಲೇ ಸಂಬಂಧಿಸಿದವರ ಗಮನಕ್ಕೆ ತರುವುದು ಒಳಿತು. ಆ ಮೂಲಕ ಉತ್ತಮ ನಾಗರಿಕ ಸಮಾಜ ನಿರ್ಮಾಣ ಮಾಡುವಲ್ಲಿ ತಮ್ಮ ಜವಾಬ್ದಾರಿ ನಿಭಾಯಿಸಲಿ ಎಂಬುದು ನಮ್ಮ ಪತ್ರಿಕೆಯ ಆಶಯವಾಗಿದೆ.