ಸಮಾಜಸೇವೆ ವ್ಯಕ್ತಿತ್ವವನ್ನು ವಿಕಾಸಗೊಳಿಸುತ್ತದೆ: ಹೆಗಡೆ

321

ಸಾಗರ: ಸಮಾಜಸೇವೆ ಮನುಷ್ಯನಿಗೆ ನೆಮ್ಮದಿ ನೀಡುವ ಜತೆಗೆ ವ್ಯಕ್ತಿತ್ವವನ್ನು ವಿಕಾಸಗೊಳಿಸುತ್ತದೆ ಎಂದು ಲಯನ್ಸ್ ಜಿ ರಾಜ್ಯಪಾಲ ಎನ್.ಎಂ.ಹೆಗಡೆ ಹೇಳಿದರು.
ಇಲ್ಲಿನ ಲಯನ್ಸ್ ಮಂದಿರದಲ್ಲಿ ಲಯನ್ಸ್ ಸಂಸ್ಥೆ ಏರ್ಪಡಿಸಿದ್ದ ರಾಜ್ಯಪಾಲರ ಭೇಟಿ ಕಾರ್ಯಕ್ರಮ ದಲ್ಲಿ ಅವರು ಲಯನ್ಸ್ ಸಂಸ್ಥೆಯ ಯುವ ವಿಭಾಗ ಲಿಯೋ ಕ್ಲಬ್ ಉದ್ಘಾಟಿಸಿ, ಸ್ಥಳದ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಯುವಜನಾಂಗ ಹೆಚ್ಚು ಸಮಾಜಸೇವಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಪ್ರಸ್ತುತ ಧಾವಂತದ ಬದುಕಿನಲ್ಲಿ ಯುವಕರು ವಿದ್ಯಾಭ್ಯಾಸ, ಉದ್ಯೋಗ, ವ್ಯವಹಾರ ಎಂಬ ಜಂಜಟದಲ್ಲಿ ಮುಳುಗಿಹೋಗಿ zರೆ. ಅವರಿಗೆ ಸಮಾಜಸೇವಾ ಕಾರ್ಯದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಲಯನ್ಸ್ ಕ್ಲಬ್ ಸೇವಾ ಮನೋಭಾವದ ಯುವಕರನ್ನು ಗುರುತಿಸಿ ಅವರು ಲಿಯೋ ಕ್ಲಬ್ ಮೂಲಕ ಸಮಾಜಸೇವೆಗೆ ತೊಡಗಿಕೊಳ್ಳಲು ಅವಕಾಶ ಕಲ್ಪಿಸುತ್ತಿದೆ. ಇಂಥ ಅವಕಾಶವನ್ನು ಯುವಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ನೂತನವಾಗಿ ಆರಂಭವಾದ ಲಿಯೋ ಕ್ಲಬ್‌ಗೆ ಸೇರಿದ ಹದಿನೈದು ಯುವಕ ಯುವತಿಯರಿಗೆ ಸದಸ್ಯತ್ವದ ಪ್ರಮಾಣ ಬೋಧಿಸಿದರು. ನೂತನ ಸದಸ್ಯರನ್ನು ಮೇಜರ್ ಎಂ. ನಾಗರಾಜ್ ಪರಿಚಯಿಸಿದರು.
ಇದೇ ಸಂದರ್ಭದಲ್ಲಿ ಲಯನ್ಸ್ ಸಂಸ್ಥೆಗೆ ಸರಸ್ವತಿ ನಾಗರಾಜ್, ಅಮಿತ್ ಎಂ.ಎನ್., ಮನೋಜ್ ಶೇಟ್ ಹಾಗೂ ಗಿರೀಶ್ ಕೋವಿ ಸೇರ್ಪಡೆಯಾದರು.
ಲಯನ್ಸ್ ಸಂಸ್ಥೆ ಅಧ್ಯಕ್ಷ ಎನ್.ಆರ್.ವಿನಯ್ ಅಧ್ಯಕ್ಷತೆ ವಹಿಸಿದ್ದರು. ಮೇಜರ್ ನಾಗರಾಜ್ ಕುಟುಂಬ ಪ್ರಾಯೋಜಿತ ಸ್ಥಳದ ಚಿತ್ರ ಬಿಡಿಸುವ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಲಯನ್ಸ್ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಹಿರಿಯ ಸದಸ್ಯ ಎಂ.ಬಿ . ಪುಟ್ಟಸ್ವಾಮಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಧ್ಯಾ ಹೆಗಡೆ, ರಂಗೈಯ್ಯ, ಶಿವಕುಮಾರ್, ಎಂ.ಆರ್.ಗಿರೀಶ್, ಪ್ರತಿಮಾ, ಚಂದ್ರಹಾಸ ಶೇಟ್, ಬಿ.ಎಸ್.ಎಸ್.ಮೂರ್ತಿ, ಅಶ್ವಿನಿ ಕುಮಾರ್, ಮಹಾಬಲೇಶ್, ಸಿದ್ದೇಶ್ವರ ಪ್ರಸಾದ್, ಅಮತರಾಜ್, ಈಳಿ ಶ್ರೀಧರ್, ವಿಕ್ಟರ್ ಫರ್ನಾಂಡಿಸ್, ಪ್ರಭಾವತಿ, ಸವಿತ ಮಹಾಬಲೇಶ್, ಬಿ.ಸಿ.ಶಶಿಧರ್, ಗುರುಲಿಂಗಯ್ಯ, ರವೀಶಕುಮಾರ್, ಮಮತಾ ಮತ್ತಿತರರು ಹಾಜರಿದ್ದರು.
ಶಾಂತಾಮೂರ್ತಿ ಪ್ರಾರ್ಥಿಸಿ, ಎಸ್.ಪ್ರಕಾಶ್ ವಂದಿಸಿದರು.