ಸಮಸ್ಯೆಗಳಿಗೆ ಆತ್ಮಹತ್ಯೆವೊಂದೇ ಪರಿಹಾರವಲ್ಲ :ಡಾ| ಅರವಿಂದ್

384

ಶಿವಮೊಗ್ಗ : ಸಮಸ್ಯೆಗಳಿಗೆ ಆತ್ಮಹತ್ಯೆ ವೊಂದೇ ಪರಿಹಾರವಲ್ಲ. ಸಮಸ್ಯೆ ಗಳಿಲ್ಲದ ವ್ಯಕ್ತಿಯೇ ಭೂಮಿ ಮೇಲಿಲ್ಲ. ಎಲ್ಲರಿಗೂ ಒಂದಿಲ್ಲೊಂದು ಕೊರತೆ ಗಳಿವೆ. ಅವುಗಳ ಮಧ್ಯೆಯೂ ಮಾನವ ಇಲ್ಲಿ ಈಸಬೇಕು, ಇದ್ದು ಜೈಸಬೇಕು ಎಂದು ಖ್ಯಾತ ಮನೋ ರೋಗ ತಜ್ಞ ಡಾ.ಎಸ್.ಟಿ. ಅರವಿಂದ್ ಹೇಳಿದರು.
ವಿಶ್ವ ಆತ್ಮಹತ್ಯೆ ತಡೆ ಅಂಗವಾಗಿ ನಮ್ಮ ಶಿವಮೊಗ್ಗ ಟಿವಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ದಂತೆ ಈ ವರ್ಷವೂ ನಾವೆಲ್ಲರೂ ಒಟ್ಟುಗೂಡಿ ಕೆಲಸ ಮಾಡಿ ಆತ್ಮಹತ್ಯೆ ತಡೆಯೋಣ’ ಎಂಬ ಘೋಷ ವಾಕ್ಯ ದೊಂದಿಗೆಆತ್ಮಹತ್ಯೆತಡೆ ದಿನಾಚರಣೆ ನಡೆಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಪ್ರಪಂಚದಲ್ಲಿ ವಾರ್ಷಿಕ ೮-೧೦ ಲಕ್ಷಜನಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ೪೦ ಸೆಕೆಂಡಿಗೆ ಒಬ್ಬರು ಆತ್ಮಹತ್ಯೆ ಮಾಡಿಕೊಂಡರೆ, ಪ್ರತಿ ೩ ಸೆಕೆಂಡಿಗೆ ಒಬ್ಬರು ಆತ್ಮಹತ್ಯೆ ಬಗ್ಗೆ ಆಲೋಚಿಸುತ್ತಿದ್ದಾರೆ.
೧೩೫ ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಮಾನಸಿಕ ಸಮಸ್ಯೆ ಬಗ್ಗೆ ನಿರ್ಲಕ್ಷ, ಮನೋವೈದ್ಯರ ಹಾಗೂ ಆಪ್ತ ಸಮಾಲೋಚಕರ ಕೊರತೆ ಇದೆ. ೧೦ ಕೋಟಿಗಿಂತ ಹೆಚ್ಚು ಜನರಿಗೆ ಮಾನಸಿಕ ಸಮಸ್ಯೆಗಳಿದ್ದರೂ ಬಹುತೇಕರು ಚಿಕಿತ್ಸೆಯೇ ಪಡೆಯು ವುದಿಲ್ಲ. ಖಿನ್ನತೆಗೆ ಆಪ್ತ ಸಮಾ ಲೋಚನೆ ಮೂಲಕ ಆತ್ಮಸ್ಥೈರ್ಯ ಹೆಚ್ಚಿಸಬಹುದು. ಮಿದುಳಿನಲ್ಲಿ ಸೆರೊಟೊನಿನ್ ಕೊರತೆ ನೀಗಿಸುವಲ್ಲಿ ಆಂಟಿ ಡಿಪ್ರೆಸೆಂಟ್ ಮಾತ್ರೆ ಮುಖ್ಯ. ಒಬ್ಬ ವ್ಯಕ್ತಿ ತೀವ್ರ ಆತ್ಮಹತ್ಯೆ ಆಲೋಚನೆ ಹೊಂದಿದ್ದಲ್ಲಿ ಆತನಿಗೆ ವಿದ್ಯುತ್ ಕಂಪನ ಚಿಕಿತ್ಸೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಆತ್ಮಹತ್ಯೆ ಆಲೋಚನೆ ಹೊಂದಿರುವ ವ್ಯಕ್ತಿತನ್ನ ಭಾವನೆ ಅನೇಕ ಸಲ ಆಪ್ತರೊಂದಿಗೆ ಹೇಳಿಕೊಂಡಿರುತ್ತಾನೆ. ಅದನ್ನು ಗಂಭೀರವಾಗಿ ಪರಿಗಣಿಸದ ಪ್ರತಿಫಲವಾಗಿ ಜೀವ ಕಳೆದು ಕೊಳ್ಳುತ್ತಾನೆ. ಸಕಾಲಕ್ಕೆ ಚಿಕಿತ್ಸೆ, ಸಲಹೆ ಸಿಕ್ಕರೆ ಜೀವ ಉಳಿಸಬಹುದು. ಆತ್ಮಹತ್ಯೆ ತಡೆ ಕೇವಲ ಮನೋ ವೈದ್ಯರಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕಾಗಿ ಶಿಕ್ಷಕರು, ಪೋಷಕರು, ಮಾಧ್ಯಮ, ಸಂಘ- ಸಂಸ್ಥೆಗಳು ಸಹಕರಿಸಬೇಕು. ಮುಂದುವರಿದ ರಾಷ್ಟ್ರಗಳಲ್ಲಿ ಆತ್ಮಹತ್ಯೆ ಯನ್ನು ಸರಕಾರಗಳು ರಾಷ್ಟ್ರೀಯ ಸಮಸ್ಯೆಯಾಗಿ ಪರಿಗಣಿಸಿ, ಆತ್ಮಹತ್ಯೆ ಸಂಖ್ಯೆಗಳನ್ನು ಗಣನೀಯವಾಗಿ ತಗ್ಗುವಂತೆ ಮಾಡಿದೆ. ಭಾರತ ಕೂಡ ಇದರತ್ತ ಗಮನ ಕೊಡದಿದ್ದರೆ, ಇದೊಂದು ಜಠಿಲ ಸಮಸ್ಯೆಯಾಗಿ ಕಾಡಲಿದೆ ಎಂದರು.
ಈ ಸಂದರ್ಭದಲ್ಲಿ ಟಿವಿ ಮುಖ್ಯಸ್ಥ ವಿ. ಜಗದೀಶ್, ರೋಟರಿ ಜಿ. ವಿಜಯ್‌ಕುಮಾರ್, ಶ್ರೀಕಾಂತ್ ಸೇರಿದಂತೆ ಇನ್ನಿತರರಿದ್ದರು.