ಸದಾಶಿವ ಆಯೋಗ ವರದಿ ಅನುಷ್ಟಾನಕ್ಕೆ ಆಗ್ರಹ…

474

ಶಿವಮೊಗ್ಗ: ನ್ಯಾ| ಎ.ಜೆ.ಸದಾಶಿವ ಆಯೋಗ ವರದಿ ಅನುಷ್ಟಾನ ಗೊಳಿಸಬೇಕು ಎಂದು ಆಗ್ರಹಿಸಿ ಹಾಗೂ ರಾಜ್ಯಸರ್ಕಾರದ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿಗೆ ತರಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಸುಪ್ರಿಂ ಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪನ್ನು ದಲಿತ ಸಂಘರ್ಷ ಸಮಿತಿ ಸ್ವಾಗತಿಸಿದೆ. ಈ ಹಿಂದಿನ ಕೆಲ ತೀರ್ಪುಗಳು ಒಳ ಮೀಸಲಾತಿ ಬೇಕಿಲ್ಲ ಎಂದು ಹೇಳಿದ್ದವು. ಪರಿಶಿಷ್ಟ ಜಾತಿ/ಪಂಗಡಗಳಲ್ಲಿ ಅತ್ಯಂತ ಹಿಂದುಳಿದ ಜಾತಿಗಳನ್ನು ಒಳ ಮೀಸಲಾತಿ ಮೂಲಕ ಮುಂದಕ್ಕೆ ತರಲು ಸಾಧ್ಯವಿದೆ. ಹೀಗಾಗಿ ಇದೊಂದು ಐತಿಹಾಸಿಕ ತೀರ್ಪು ಆಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಈ ತೀರ್ಪನ್ನು ವಿರೋಧಿಸುವವರು ಪರಿಶಿಷ್ಟರ ವಿರೋಧಿಗಳಾಗಿದ್ದಾರೆ. ಆರ್ಥಿಕ, ಸಾಮಾಜಿಕ, ರಾಜಕೀಯ ವಾಗಿ ಮುಂದೆ ಬರಲು ಸಾಧ್ಯವಾಗು ತ್ತಿಲ್ಲ. ಪರಿಶಿಷ್ಟ ಜಾತಿಯಲ್ಲಿ ಅಸ್ಪೃಶ್ಯ ಜಾತಿಗಳಿಗೆ ಹಾಗೂ ದುರ್ಬಲ ಜಾತಿಗಳಿಗೆ ಒಳಮೀಸಲಾತಿ ನೀಡುವ ಮುಖಾಂತರ ಅವರಿಗೆ ಮೀಸಲಾತಿ ನೀಡುವುದು ಅಗತ್ಯವಾಗಿದೆ. ರಾಜ್ಯ ಸರ್ಕಾರಕ್ಕೆ ಒಳಮೀಸಲಾತಿ ಜಾರಿಗೆ ತರುವ ಅಧಿಕಾರವನ್ನು ನ್ಯಾಯಾಲಯ ನೀಡಿದೆ. ಇದನ್ನು ಬಳಸಿಕೊಂಡು ಮುಂಬರು ವಿಧಾನಸಭಾ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿಗೆ ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ತಿಳಿಸಿದರು.
ಇದರಿಂದ ದುರ್ಬಲ ಜಾತಿಗಳ ಸ್ಥಿತಿ ಅನುಕೂಲವಾಗುತ್ತದೆ. ಇವರು ತೀರಾ ಅಸಮಾನತೆಗೆ ಗುರಿಯಾಗಿದ್ದಾರೆ. ನಿಕೃಷ್ಟ ಸ್ಥಿತಿಯಲ್ಲಿದ್ದಾರೆ. ಎಷ್ಟೋ ಮಂದಿ ಅಸ್ಪೃಶ್ಯರ ಮನೆಗಳಲ್ಲಿ ಇಂದಿಗೂ ನೀರು ಕುಡಿಯುವುದಿಲ್ಲ, ಊಟ ಮಾಡುವು ದಿಲ್ಲ. ಪರಿಶಿಷ್ಟ ಜಾತಿಯಲ್ಲಿಯೇ ಇರುವ ಬಲಿಷ್ಟ ಜಾತಿಗಳು ಎಲ್ಲ ಮೀಸಲಾತಿಯನ್ನು ಕಬಳಿಸುತ್ತಿದ್ದಾರೆ. ಹೀಗಾಗಿ ಒಳ ಮೀಸಲಾತಿ ಜಾರಿಗೆ ಬಂದರೆ ಸಾಮಾಜಿಕ ನ್ಯಾಯ ಸಿಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಚಿನ್ನಯ್ಯ, ಸತ್ಯ, ಗುರುರಾಜ್, ರಾಜ್ ಕುಮಾರ್, ಪ್ರಕಾಶ್, ಈಶ್ವರಪ್ಪ, ಮಣಿ, ಶಿವಶಂಕರ್, ರಂಗನಾಥ್, ಬಸವರಾಜ್, ಕಾಣಿಕ್ಯರಾಜ್ ಸೇರಿದಂತೆ ಹಲವರಿದ್ದರು.