ಸಂಸ್ಕೃತಿ-ಸಂಸ್ಕಾರದ ಮೂಲಕ ಯುವ ಪೀಳಿಗೆಗೆ ಮಾದರಿಯಾದ ವಿನೂತನ ಕಾರ್ಯಕ್ರಮ: ಶಾಸಕ ರೇಣುಕಾಚಾರ್ಯ ಮೆಚ್ಚುಗೆ

496

ಹೊನ್ನಾಳಿ : ಸಂಸ್ಕೃತಿ ಮತ್ತು ಸಂಸ್ಕಾರ ಕಾರ್ಯಕ್ರಮದಡಿಯಲ್ಲಿ ಶ್ರೀ ಕ್ಷೇತ್ರ ಹಿರೇಕಲ್ಮಠದಲ್ಲಿ ಹೊನ್ನಾಳಿಯ ಯುವ ಹಾಡುಗಾರರು ಹಾಡಿ ಸಂಸ್ಕೃತಿ ಸಂಸ್ಕಾರದ ಅಡಿಯಲ್ಲಿ ಹೊಸ ವರ್ಷದ ಸಂಭ್ರಮವನ್ನು ಯಾವುದೇ ಅವಗಢ ಇಲ್ಲದೆ ಆಚರಿಸಿದರು.
ಡಿ. ೩೧ರಾತ್ರಿ ಹೊಸ ವರ್ಷದ ಆಚರಣೆಯನ್ನು ಇಂದಿನ ಬಹುತೇಕ ಯುವಕರು ಮತ್ತು ಯುವತಿಯರು ಬೈಕು-ಕಾರುಗಳಲ್ಲಿ ಮೋಜು ಮಸ್ತಿ ಮಾಡುತ್ತಾರೆ. ಇಂಥ ಸಂದರ್ಭದಲ್ಲಿ ಅಪಘಾತಗಳು ಸಂಭವಿಸುತ್ತಿದ್ದು ಮತ್ತು ಅಸಭ್ಯದಿಂದ ನಡೆದುಕೊಳ್ಳುವುದು ನಮ್ಮ ಭಾರತದ ಸಂಸ್ಕೃತಿಗೆ ಧಕ್ಕೆ ತರುವಂಥ ಕೆಲಸವಾದ್ದರಿಂದ ಇಂಥ ಕಾರ್ಯಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾವು ಈ ಒಂದು ವಿಶೇಷ ಕಾರ್ಯಕ್ರಮಗಳನ್ನು ಶ್ರೀಮಠದಲ್ಲಿ ಆಯೋಜಿಸಿದ್ದು, ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಒಲವು ತೋರುವಂತೆ ಯುವ ಪೀಳಿಗೆಗೆ ಕೋರಿದ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಅವರು ಮಕ್ಕಳಿಂದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇದೆ ಸಂದರ್ಭದಲ್ಲಿ ಪೂಜ್ಯರಾದ ಡಾ| ಶ್ರೀ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಕಳೆದ ಸುಮಾರು ೯ ತಿಂಗಳ ನಂತರ ನಾವು ಇಂಥ ಒಂದು ಅರ್ಥಪೂರ್ಣ ಕಾರ್ಯಕ್ರಮದಲ್ಲಿ ನಾವೆಲ್ಲ ಒಟ್ಟು ಸೇರಿದ್ದೇವೆ. ಮುಂದಿನ ದಿನಗಳಲ್ಲಿ ಕರೋನಾ ದಂತ ಮಹಾ ಮಾರಿಯನ್ನು ಹೊಡೆದೋಡಿಸುವಂತಹ ಕೆಲಸ ಆಗಬೇಕಿದೆ ಎಂದರು.
ಕೊರೋನಾ ಕುರಿತ ಮುನ್ನೆಚ್ಚರಿಕೆ ಗಳೊಂದಿಗೆ ಇಂತಹ ಕಾರ್ಯಕ್ರಮದ ಅಡಿಯಲ್ಲಿ ಧೈರ್ಯದಿಂದಿದ್ದು ಸಾರ್ವಜನಿಕರಿಗೂ ಧೈರ್ಯ ತುಂಬಿ ಕರೊನ ಕಾಲದಲ್ಲಿ ಜಾಗೃತಿ ಅಭಿಯಾನ ಕಾರ್ಯಕ್ರಮಗಳು ಮತ್ತು ನವೆಂಬರ್ ೧ ರಂದು ಕನ್ನಡದ ಅರಿವಿನ ಅಭಿಯಾನ ಕಾರ್ಯಕ್ರಮವನ್ನು ಮಾಡುವ ಮೂಲಕ ಜನಪ್ರಿಯತೆಯನ್ನು ಗಳಿಸಿದ ಯುವ ಹಾಡುಗಾರರನ್ನು ಸೇರಿಸಿ ಡಿ.೩೧ರಂದು ಮೋಜು ಮಸ್ತಿಯ ಹೊಸ ವರ್ಷವದ ಆಚರಣೆಯನ್ನು ತಡೆದು ಶ್ರೀಮಠದಲ್ಲಿ ಸಂಸ್ಕೃತಿ- ಸಂಸ್ಕಾರ ದತ್ತ ಯುವ ಪೀಳಿಗೆಗೆ ಹಾಡುವ ಮತ್ತು ನೃತ್ಯ ಮಾಡುವ ಮೂಲಕ ಸಂದೇಶವನ್ನು ಕೊಟ್ಟಿರುವ ನಮ್ಮ ಈ ಯುವ ಹಾಡುಗಾರರ ತಂಡಕ್ಕೆ ಮತ್ತು ದೇಶದ ಯುವಪೀಳಿಗೆಗೆ ಸಂದೇಶ ಕೊಡುವ ಮೂಲಕ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಹೊನ್ನಾಳಿಯ ಆರಕ್ಷಕ ಠಾಣೆಯ ಸಿಪಿಐ ದೇವರಾಜ್ ಪಿಎಸ್‌ಐ ಬಸವನಗೌಡ ಬಿರಾದರ್. ಮಠದ ಕಾರ್ಯದರ್ಶಿ ಎಂಪಿಎಂ ಚನ್ನಬಸಯ್ಯ, ಸುರೇಶ್ ಹೊಸಕೇರಿ ಪಟ್ಟಣ ಪಂಚಾಯಿತಿ ಸದಸ್ಯರು, ಶಾಂತ, ವಿದ್ಯಾ ಸಂತೋಷ್, ಕುಮಾರ ಸ್ವಾಮಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೆ ವಿ ಶ್ರೀಧರ್, ಹರ್ಷ ಗುರುಮಠ, ದಾನಪ್ಪ, ರೈತ ಮುಖಂಡ ಬಸವರಾಜಪ್ಪ, ಧ್ವನಿವರ್ಧಕ ರಮೇಶ್ ಮತ್ತು ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.