ಸಂಪನ್ಮೂಲ ಶಿಕ್ಷಕರ ಸ್ಥಳ ನಿಯುಕ್ತಿಗೆ ಆದ್ಯತೆಗೆ ಆಗ್ರಹಿಸಿ ಶಿಕ್ಷಣ ಸಚಿವರಿಗೆ ಮನವಿ

70

ಶಿವಮೊಗ್ಗ : ರಾಜ್ಯದಾದ್ಯಂತ ಕರ್ತವ್ಯ ನಿರ್ವಹಿಸುತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಕೇಂದ್ರಗಳಲ್ಲಿನ ಪ್ರಾಥಮಿಕ -ಪ್ರೌಢಶಾಲಾ ವಿಭಾಗದ ಸಿ.ಆರ್.ಪಿ. ಹಾಗೂ ಬಿ.ಆರ್.ಪಿ.ಗಳಾಗಿ ಕಾರ್ಯ ನಿರ್ವಹಿಸಿ ಐದು ವರ್ಷಗಳ ಅವಧಿಯನ್ನು ಪೂರೈಸಿರುವ ಸಂಪನ್ಮೂಲ ಶಿಕ್ಷಕರಿಗೆ ಜಿಯಲ್ಲಿ ಖಾಲಿ ಇರುವ ಹುzಗಳಿಗೆ ನಿಯುಕ್ತಿಗೊಳಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಶಿಕ್ಷಕರ ಸಂಘದ ಪದಾಧಿಕಾರಿಗಳೊಂದಿಗೆ ಶಿಕ್ಷಣ ಸಚಿವರನ್ನು ಇಂದು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಶಿಕ್ಷಣ ಇಲಾಖೆಯು ಈ ಸಂಬಂಧ ೨೦೨೨ರ ಜನವರಿ ೧೮ ರಂದು ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಕೈಗೊಳ್ಳಲು ವೇಳಾಪಟ್ಟಿಯನ್ನು ಪ್ರಕಟಿಸಿದೆ. ಆದರೆ ಸುದೀರ್ಘವಾಗಿ ಸೇವೆಯನ್ನು ಶಿಕ್ಷಣ ಇಲಾಖೆಯಲ್ಲಿ ಸಲ್ಲಿಸಿರುವ ಇವರಿಗೆ ಈಗಾಗಲೇ ಹಲವಾರು ಹಂತದ ವರ್ಗಾವಣೆ ಪ್ರಕ್ರಿಯೆಗಳು ನಡೆದಿರುವುದರಿಂದ ಇವರಿಗೆ ತಾಲ್ಲೂಕಿನ ಒಳಗೆ ಯಾವುದೇ ಹುzಗಳು ಸಿಗುವುದು ಕಷ್ಟಸಾಧ್ಯವಾಗಿದೆ. ಅಲ್ಲದೇ ಬಹು ಸಂಖ್ಯೆಯ ಸಂಪನ್ಮೂಲ ಶಿಕ್ಷಕರು ಪತಿ-ಪತ್ನಿ ಪ್ರಕರಣದಡಿಯಲ್ಲಿ ಗುರುತಿಸುವವರಾಗಿzರೆ ಎಂದು ತಿಳಿಸಿರುವ ಅವರು, ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಿರುವಂತೆ ಆಕೆಯ ಪತಿ/ಪತ್ನಿ ಕಾರ್ಯ ನಿರ್ವಹಿಸುತ್ತಿರುವ ತಾಲ್ಲೂಕಿಗೆ ವರ್ಗಾವಣೆ ನೀಡತಕ್ಕದ್ದು ಎಂದಿದೆ ಎಂದಿರುವುದನ್ನು ಸಚಿವರ ಗಮನಕ್ಕೆ ತಂದಿರುವುದಾಗಿ ತಿಳಿಸಿzರೆ.


ಈ ಹಿಂದೆ ಕಡ್ಡಾಯ ಹಾಗೂ ಹೆಚ್ಚುವರಿಯಾಗಿ ಬೇರೆ ತಾಲ್ಲೂಕಿಗೆ ಹೋದಂತಹ ಶಿಕ್ಷಕರುಗಳಿಗೆ ಅದೇ ತಾಲ್ಲೂಕಿಗೆ ಈಗಾಗಲೇ ವರ್ಗಾವಣೆ ಯಲ್ಲಿ ಅವಕಾಶ ನೀಡಿ ಸ್ಥಳ ನಿಯುಕ್ತಿ ಮಾಡಲಾಗಿದೆ. ಇಂತಹ ಅನೇಕ ಕಾರಣಗಳಿಂದಾಗಿ ಕ್ಷೇತ್ರ ಸಂಪನ್ಮೂಲ ಕೇಂದ್ರಗಳಲ್ಲಿ ಸಿ.ಆರ್.ಪಿ. ಹಾಗೂ ಬಿ.ಆರ್.ಪಿ. ಯಾಗಿ ೫ ವರ್ಷಗಳ ಸೇವೆಯನ್ನು ಪೂರೈಸಿರುವವರು ಸ್ವಾಭಾವಿಕ ನ್ಯಾಯತತ್ವದಿಂದ ವಂಚಿತರಾಗು ವುದನ್ನು ಗಮನಿಸಲಾಗಿದ್ದು, ಮಾನವೀಯ ನೆಲೆಯಲ್ಲಿ ಅವರನ್ನು ಪರಿಗಣಿಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದವರು ತಿಳಿಸಿzರೆ.
೨೦೨೨ರ ಜ. ೧೮ರಂದು ನಡೆಯಲಿರುವ ಕೌನ್ಸಿಲಿಂಗ್‌ನಲ್ಲಿ ಆಯಾ ಜಿ ವ್ಯಾಪ್ತಿಯ ತಾಲ್ಲೂಕಿನ ಒಳಗೆ ಅಥವಾ ಹೊರಗೆ ತೆಗೆದುಕೊಳ್ಳುವ ಮುಕ್ತ ಅವಕಾಶ ವನ್ನು ನೀಡುವುದು. ಒಂದು ವೇಳೆ ಕೌನ್ಸಿಲಿಂಗ್ ಸಂದರ್ಭದಲ್ಲಿ ಸ್ಥಳ ಲಭ್ಯವಿಲ್ಲದಿದ್ದ ಪಕ್ಷದಲ್ಲಿ ಸಂಬಂಧಿಸಿದ ಸಿ.ಆರ್.ಪಿ., ಮತ್ತು ಬಿ.ಆರ್.ಪಿ.ಯವರು ತಾತ್ಕಾಲಿಕವಾಗಿ ವರ್ಗಾವಣೆಯನ್ನು ತಿರಸ್ಕರಿಸುವ ಮುಕ್ತ ಅವಕಾಶವನ್ನು ತಂತ್ರಾಂಶದಲ್ಲಿ ಕಲ್ಪಿಸುವಂತೆ ಸಚಿವರಲ್ಲಿ ಕೋರಲಾಗಿದೆ. ಒಂದು ವೇಳೆ ಇಲಾಖೆಯು ವರ್ಗಾವಣೆಯನ್ನು ಮಾಡಲೇಬೇಕಾದ ಅನಿವಾರ್ಯತೆ ಎದುರಾದಲ್ಲಿ ಆಯಾ ತಾಲ್ಲೂಕಿ ನಲ್ಲಿಯೇ ೫ ವರ್ಷಗಳ ಸೇವೆಯನ್ನು ಪೂರೈಸಿರುವ ಆಯಾ ತಾಲ್ಲೂಕು ಗಳಲ್ಲಿನ ಸಿ.ಆರ್.ಪಿ./ಬಿ.ಆರ್.ಪಿ ಗಳ ರಿಕ್ತ ಸ್ಥಾನಗಳಿಗನುಗುಣವಾಗಿ ಅವಶ್ಯವಿರುವ ಹುzಗಳನ್ನು ತೆರೆದು ಕೌನ್ಸಿಲಿಂಗ್ ಮಾಡುವಂತೆ ಅಥವಾ ಫೆ.೨೬ರಂದು ವರ್ಗಾವಣೆ ಪ್ರಕ್ರಿಯೆಗಳು ಮುಗಿಯಲಿದ್ದು, ತದನಂತರ ಮುಖ್ಯ ಶಿಕ್ಷಕರ ಹುzಗಳಿಗೆ ಬಡ್ತಿ ನೀಡಲು ಈಗಾಗಲೇ ಮಾನ್ಯ ಆಯುಕ್ತರು ಆದೇಶ ನೀಡಿದ್ದು, ಬಡ್ತಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಲಭ್ಯವಾಗುವ ಸಹಶಿಕ್ಷಕರ ಹುzಗಳಿಗೆ ಸಿ.ಆರ್.ಪಿ./ಬಿ.ಆರ್.ಪಿ ಗಳನ್ನು ಆಯಾ ತಾಲ್ಲೂಕಿನಲ್ಲಿ ಸ್ಥಳ ನಿಯುಕ್ತಿಗೊಳಿಸುವಂತೆ ಕೋರಲಾಗಿದೆ ಎಂದವರು ತಿಳಿಸಿzರೆ.
ಹಲವಾರು ಸಿ.ಆರ್.ಪಿ./ಬಿ.ಆರ್.ಪಿ. ಗಳು ತಮಗಿಷ್ಟವಾದ ಸ್ಥಳವನ್ನು ಆಯ್ಕೆ ಮಾಡಿಕೊಂಡ ನಂತರ ಉಳಿಯುವ ಸಿ.ಆರ್.ಪಿ./ಬಿ.ಆರ್.ಪಿ.ಗಳಿಗೆ ಈಗಾಗಲೇ ಹೊಸ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದ್ದು, ಹೊಸದಾಗಿ ನೇಮಕವಾದ ಸಿ.ಆರ್.ಪಿ./ಬಿ.ಆರ್.ಪಿ.ಗಳಿಂದ ತೆರವಾಗುವ ಶಿಕ್ಷಕರುಗಳ ಸ್ಥಾನಗಳಿಗೆ ತಾಲ್ಲೂಕಿನ ಒಳಗೆ ಮತ್ತೊಮ್ಮೆ ಕೌನ್ಸಿಲಿಂಗ್ ಮಾಡುವ ಮುಖಾಂತರ ಸ್ಥಳ ನಿಯುಕ್ತಿಗೊಳಿಸಬೇಕು. ಈ ಮಾದರಿಯನ್ನು ಅನುಸರಿಸಿ ಸಂಪನ್ಮೂಲ ಶಿಕ್ಷಕರಿಗೆ ನ್ಯಾಯ ಒದಗಿಸುವಂತೆ ಸಚಿವರಲ್ಲಿ ಮನವಿ ಮಾಡಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ಅವರು ತಿಳಿಸಿzರೆ.
ಈ ಸಂದರ್ಭದಲ್ಲಿ ಸುರೇಶ್ ಸೆಡಶ್ಯಾಳ್, ವೆಂಕಟೇಶ್, ಗಿರಿಗೌಡ, ಸದಾನಂದ, ಶಿವಲಿಂಗಯ್ಯ, ಚಂದ್ರಶೇಖರ್ ಸೇರಿದಂತೆ ನೌಕರರ ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.