ಸಂತಸ- ಸಂಭ್ರಮದಿಂದ ಶಾಲೆಯ ಕಡೆ ಹೆಜ್ಜೆ ಹಾಕಿದ ಮಕ್ಕಳು ಸುರಕ್ಷತಾ ಕ್ರಮಗಳೊಂದಿಗೆ ಆತ್ಮೀಯವಾಗಿ ಸ್ವಾಗತಿಸಿದ ಶಿಕ್ಷಕರು

370

ಹೊಸನಾವಿಕ ನ್ಯೂಸ್
ಹೊನ್ನಾಳಿ: ಕರೋನಾ ಮಹಾಮಾರಿಯಿಂದ ಕಳೆದ ಹತ್ತು ತಿಂಗಳನಿಂದ ಮನೆಯ ಉಳಿದಿದ್ದ ಶಾಲಾ ಮಕ್ಕಳು ೨೦೨೧ರ ಜ.೧ರಂದು ಶಾಲೆ ಕಡೆ ಮುಖ ಮಾಡಿzರೆ. ಸರ್ಕಾರದ ಮಾರ್ಗಸೂಚಿಯಂತೆ ಅವಳಿ ತಾಲೂಕಿನಾದ್ಯಂತ ಶಾಲಾ ಮಕ್ಕಳು ಮಾಸ್ಕ್ ಧರಿಸಿ ಸುರಕ್ಷತಾ ಕ್ರಮಗಳೊಂದಿಗೆ ಸಂತಸದಿಂದ ಶಾಲೆಗೆ ಆಗಮಿಸಿದರು.
ಡಿ.೩೧ರಂದೇ ಶಾಲೆಯ ಕೊಠಡಿ ಹಾಗು ಆವರಣವನ್ನು ಸ್ಯಾನಿಟೈಸರ್ ಮಾಡಿಸಿದ್ದ ಶಾಲಾ ಶಿಕ್ಷಕರುಗಳು, ಮಕ್ಕಳು ಶಾಲೆಗೆ ಬರುವ ವೇಳೆಗೆ ಹಸಿರು ತೋರಣದಿಂದ ಶಾಲೆಯನ್ನು ಅಲಂಕಾರ ಮಾಡಿ ಮಕ್ಕಳನ್ನು ಗುಲಾಬಿ ಕೊಟ್ಟು ಬರ ಮಾಡಿಕೊಂಡರು.
ಶಾಲೆಗೆ ಬಂದ ಮಕ್ಕಳನ್ನು ಸಾಮಾಜಿಕ ಅಂತರದಲ್ಲಿ ನಿಲ್ಲಿಸಿ ಸ್ಯಾನಿಟೈಸರ್ ಹಾಕಿ ನಂತರ ಶಾಲೆಯಲ್ಲೂ ಸಾಮಾಜಿಕ ಅಂತರದ ಕೂರಿಸಿದಿದ್ದು ಕಂಡು ಬಂತು. ಪ್ರತಿ ಕೊಠಡಿಗಳಲ್ಲಿ ೨೪ ಮಕ್ಕಳನ್ನು ಮಾತ್ರ ಕೂರಿಸಿದ್ದರು.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಗಳಿಗೆ ಸೋಮವಾರದಿಂದ ಶನಿವಾರದ ವರೆಗೆ, ೯ನೇ ತರಗತಿ ಮಕ್ಕಳಿಗೆ ಸೋಮವಾರ, ಬುಧವಾರ, ೮ನೇ ತರಗತಿ ಮಕ್ಕಳಿಗೆ ಮಂಗಳವಾರ, ಗುರುವಾರ ಹೀಗೆ ಶಾಲಾ ವೇಳಾಪಟ್ಟಿ ಯನ್ನು ತಯಾರಿಸಿzರೆ. ಅದರಂತೆ ಮಕ್ಕಳು ಶಾಲೆಗೆ ಆಗಮಿಸಿzರೆ.
ಶಾಲೆಗೆ ಬರುವ ಮುನ್ನ ಪಟ್ಟಣದ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕರುಗಳು ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಪೋಷಕರಿಂದ ಅನುಮತಿ ಪತ್ರ ನೀಡಿದರೆ ಮಾತ್ರ ಶಾಲೆಗೆ ಪ್ರವೇಶ ನೀಡಲಾಗುವುದು ಎಂದು ಪೋಷಕರಿಗೆ ಮನವರಿಕೆ ಮಾಡಿಕೊಟ್ಟ ನಂತರ ಪೋಷಕರು ಅನುಮತಿ ಪತ್ರದೊಡನೆ ಮಕ್ಕಳನ್ನು ಶಾಲೆಗೆ ಕಳುಹಿಸಿzರೆ.
ಶಾಸಕರ ಭೇಟಿ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಸ್ಥಳೀಯ ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ಕುಡಚಿ ಶಾಸಕ ಪಿ.ರಾಜಿವ್ ಹೊನ್ನಾಳಿ ಪಟ್ಟಣದ ಟಿ.ಬಿ.ವೃತ್ತದ ಹಿರಿಯ ಪ್ರಾಥಮಿಕ ಪಾಠ ಶಾಲೆ, ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಪಿಯುಸಿ ತರಗತಿಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯಗಳನ್ನು ಪರಿಶೀಲಸಿದ ನಂತರ ಮಕ್ಕಳಿಗೆ ಗುಲಾಬಿ ಹೂ ಕೊಟ್ಟು ಸ್ವಾಗತಿಸಿದರು. ಶಾಲೆ ಮಕ್ಕಳು ಯಾವುದೇ ಆತಂಕ ಇಲ್ಲದೆ ಶಾಲೆಗೆ ಬನ್ನಿ ಆದರೆ ಮಾಸ್ಕ್ ಧರಿಸಿರಿ ಮತ್ತು ಸ್ಯಾನಿಟೈಸರ್ ಬಳಸಿ ಶಾಲೆಯಲ್ಲಿ ಸಾಮಾಜಿಕ ಅಂತರದ ಕುಳಿತುಕೊಳ್ಳಿ ಎಂದುವಿದ್ಯಾರ್ಥಿಗಳಿಗೆ ಬಿಇಒ ರಾಜಿವ್ ಮಾತನಾಡಿ, ವಿದ್ಯಾಗಮ ಯೋಜನಡಿಯಲ್ಲಿ ೬ ಮತ್ತು ೭ನೇ ತರಗತಿಗಳು ಶಾಲೆಯ ಆವರಣದಲ್ಲಿ ನಡೆಯಲಿದೆ. ಪ್ರೌಢ ಶಾಲೆ ವಿಭಾಗದ ವಿದ್ಯಾರ್ಥಿಗಳಿಗೆ ಇಲಾಖೆಯ ವೇಳಾಪಟ್ಟಿಯ ಅನುಸಾರವಾಗಿ ನಡೆಯಲಿದೆ. ಅವಳಿ ತಾಲೂಕಿನಲ್ಲಿ ೨೬ ಸರ್ಕಾರಿ ಪ್ರೌಢಶಾಲೆ, ೧೮ ಅನುದಾನಿತ ಹಾಗೂ ೧೬ ಅನುದಾನ ರಹಿತ ಪ್ರೌಢಶಾಲೆಗಳು ಅಧಿಕೃತವಾಗಿ ಪ್ರಾರಂಭವಾಗಿದೆ. ಮಕ್ಕಳು ಸಹ ಯಾವುದೇ ಅಳುಕಿಲ್ಲದೆ ಖುಷಿಯಿಂದ ಶಾಲೆಗೆ ಆಗಮಿಸಿzರೆ ಎಂದು ಸುದ್ಧಿಗಾರರಿಗೆ ವಿವರಿಸಿದರು.
ಬಿಇಒ ರಾಜಿವ್, ಇಸಿಒ ಮುದ್ದನಗೌಡ, ಸಿದ್ದಪ್ಪ, ಮುಖ್ಯೋಪಾಧ್ಯಾಯ ಯೋಗೇಂದ್ರ, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್ ಹಾಗೂ ಶಿಕ್ಷಕರುಗಳು ಇದ್ದರು.