ಸಂಕಷ್ಟಿ: ವರಸಿದ್ಧಿವಿನಾಯಕನಿಗೆ ವಿಶೇಷ ಪೂಜೆ

388

ಹೊಸನಾವಿಕ ನ್ಯೂಸ್
ಹೂವಿನಹಡಗಲಿ: ಇಲ್ಲಿನ ಮದಲಗಟ್ಟಿ ವೃತ್ತದಲ್ಲಿರುವ ಶ್ರೀ ವರಸಿದ್ದಿವಿನಾಯಕ ದೇವಸ್ಥಾನದ ವಿಘ್ನೇಶ್ವರನಿಗೆ ಸಂಕಷ್ಠಿ ಚತುರ್ಥಿಯ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿ, ಹೂವುಗಳಿಂದ ಅಲಂಕರಿಸಿದ್ದರು.
೪ಅಡಿಯ ಎತ್ತರದ ಬಲಮುರಿಯ ನಿಂತಿರುವ ವಿಘ್ನೇಶ್ವರ ಮೂರ್ತಿಗೆ ಕಾರ್ತಿಕ ಮಾಸದ ಸಂಕಷ್ಟಿಯ ಪ್ರಯುಕ್ತ ವಿಘ್ನೇಶ್ವರ ಮೂರ್ತಿಗೆ ದೇವಸ್ಥಾನ ಸಮಿತಿಯವರು ವಿಶೇಷ ಅಲಂಕಾರ ಮಾಡಿದ್ದರು. ಬೆಳಗಿನ ಜಾವದಲ್ಲಿ ವಿಘ್ನೇಶ್ವರ ಮೂರ್ತಿಗೆ ರುದ್ರಾಭಿಷೇಕ, ಮಹಾ ಮಂಗಳಾರತಿ ಜರುಗಿತು. ವಿವಿಧ ಪುಷ್ಪ, ಗರಿಕೆಯಿಂದ ಅಲಂಕರಿಸಿ ಪೂಜಿಸಿದ್ದರು.
ಭರತ್ ಕುಮಾರ್ ಚೌವ್ಹಾಣ್ ಅವರು ಪೂಜ ಸೇವೆ ಸಲ್ಲಿದ್ದರು. ಮದಲಗಟ್ಟಿ ಹನುಮಪ್ಪ ದೇವರ ಪಾದಯಾತ್ರಾ ಸೇವಾರ್ಥಿಗಳು ಪೂಜ ಸೇವೆಯಲ್ಲಿ ಪಾಲ್ಗೊಂಡಿದ್ದರು.
ಸಿಗ್ಲಿಯ ಜಗದೀಶ್, ಆರ್. ವೆಂಕಟೇಶ್, ಗುಜ್ಜಲ ಹನುಮಂತಪ್ಪ, ಚಿಂತಿ ಶೇಖ್ರಪ್ಪ, ಶಶಿಧರ ಮೇಟಿ, ಡಿಶ್ ಪ್ರಕಾಶ್, ಬಿ.ಸಿದ್ದೇಶ್ ಇತರರು ಇದ್ದರು. ಗುಜನೂರು ಹಾಲಯ್ಯ ನವರು ಪೌರೋಹಿತ್ಯ ವಹಿಸಿದ್ದರು. ದೇವಸ್ಥಾನವು ಬಣ್ಣ ಬಣ್ಣದ ವಿವಿಧ ಹೂಗಳಿಂದ ಅಲಂಕತವಾಗಿದ್ದು ಕಂಗೊಳಿಸುತ್ತಿತ್ತು.