ಸಂಕಷ್ಟಕ್ಕೊಳಗಾದವರ ಪಾಲಿಕೆ ನೆರವು

600

ಶಿವಮೊಗ್ಗ: ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮಾರಾಣಾಂತಿಕ ಕೊರೋನ ವೈರಸ್‌ನ ನಿಯಂತ್ರಣ ಕ್ಕಾಗಿ ಹಾಗೂ ನಿರಾಶ್ರಿತ ಕಾರ್ಮಿಕರ ಊಟ, ವಸತಿ, ಆರೋಗ್ಯ ಮುಂತಾದ ತುರ್ತು ಸಮಸ್ಯೆಗಳ ಪರಿಹಾರ ಕ್ರಮವಾಗಿ ಪ್ರತಿ ೭ ವಾರ್ಡುಗಳಿಗೆ ಓರ್ವರಂತೆ ಅಧಿಕಾರಿ ಗಳನ್ನೊಳಗೊಂಡ ತಂಡವನ್ನು ನಿಯೋಜಿಸಲಾಗಿದ್ದು, ಸಂಕಷ್ಟಕ್ಕೊಳ ಗಾದವರು ಈ ಕೆಳಕಂಡವರನ್ನು ಸಂಪರ್ಕಿಸಿ ಸಹಾಯ ಪಡೆದು ಕೊಳ್ಳುವಂತೆ ಮಹಾನಗರಪಾಲಿಕೆಯ ಆಯುಕ್ತ ಚಿದಾನಂದ ಎಸ್.ವಟಾರೆ ಅವರು ತಿಳಿಸಿದ್ದಾರೆ.

ವಾರ್ಡ್ ೧ರಿಂದ ೭ನೇ ವಾರ್ಡ್ ವರೆಗಿನ ಬಾಧಿತರು ಚಾಮರಾಜ್, ಸಹಾಯಕ ಕಾರ್ಯಪಾಲಕ ಅಭಿಯಂತರ ಮೊ.೯೪೪೮೧೨೭೪೫೪, ವಾರ್ಡ್ ೮ರಿಂದ ೧೪ನೇ ವಾರ್ಡಿನ ಬಾಧಿತರು ಶ್ರೀಧರ್ ಜೆ., ಕಾರ್ಯಪಾಲಕ ಅಭಿಯಂತರರು, ಮೊ.೮೭೬೨೨೮೮೬೮೦, ವಾರ್ಡ್ ೧೫ರಿಂದ ೨೧ರವರಗಿನ ಬಾಧಿತರು ಅನಂತಪದ್ಮನಾಭ ಎಂ.ಆರ್. ಕಾರ್ಯಪಾಲಕ ಅಭಿಯಂತರರು ಮೊ.೭೦೨೨೧೧೬೮೦೦, ವಾರ್ಡ್ ೨೨ರಿಂದ ೨೮ರವರೆಗಿನ ಬಾಧಿತರು ಭರಮರೆಡ್ಡಿ ಬಿ.ಎಲ್., ಕಾರ್ಯಪಾಲಕ ಅಭಿಯಂತರರು, ಮೊ.೯೪೪೮೪೨೫೩೦೧ ಹಾಗೂ ವಾರ್ಡ್ ೨೯ರಿಂದ ೩೫ರವರೆಗಿನ ಬಾಧಿತರು ಬಾಲಾಜಿರಾವ್ ಹೆಚ್.ಎಂ. ಉಪ ಆಯುಕ್ತರು, ಕಂದಾಯ ವಿಭಾಗ, ಮೊ. ೯೯೦೧೭೧೬೪೮೮ ಇವರನ್ನು ಸಂಪರ್ಕಿಸಿ ಸಹಾಯ ಪಡೆಯಬಹುದಾಗಿದೆ ಎಂದವರು ತಿಳಿಸಿದ್ದಾರೆ.

ಈಗಾಗಲೇ ಸಂಕಷ್ಟಕ್ಕೊಳಗಾದ, ವಲಸೆ ಬಂದ ಕಾರ್ಮಿಕರು ಹಾಗೂ ನಿರಾಶ್ರಿತರಿಗಾಗಿ ನಗರದ ಆಯ್ದ ಕಡೆ ಗಳಲ್ಲಿ ೨೦ಸ್ಥಳಗಳನ್ನು ಗುರುತಿಸಲಾ ಗಿದ್ದು, ಪ್ರಸ್ತುತ ನಾಲ್ಕು ಸ್ಥಳಗಳಲ್ಲಿ ವಸತಿ ಸೌಲಭ್ಯವನ್ನು ಕಲ್ಪಿಸಿ, ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ನಗರದ ಹೊಳೆ ಬಸ್‌ಸ್ಟಾಪ್‌ನ ಸಮೀಪದಲ್ಲಿರುವ ಬೆಕ್ಕಿನ ಕಲ್ಮಠದಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಕಲಬುರಗಿ ಮತ್ತು ಬೀದರ್‌ನ ೩೦ ಕಾರ್ಮಿಕರಿಗೆ, ಖಾಸಗಿ ಬಸ್ ನಿಲ್ದಾಣದ ಲಾಡ್ಜ್‌ನಲ್ಲಿ ಬಿಕ್ಷಕರು ಹಾಗೂ ವಸತಿಹೀನ ೪೦ಜನರಿಗೆ, ನಗರದ ಓ.ಟಿ.ರಸ್ತೆಯಲ್ಲಿರುವ ದುರ್ಗಾ-ಅಮೃತ ಲಾಡ್ಜ್‌ನಲ್ಲಿ ಉತ್ತರ ಪ್ರದೇಶದಿಂದ ವಲಸೆ ಬಂದಿದ್ದ ೧೭ ಕಾರ್ಮಿಕರಿಗೆ ಹಾಗೂ ಪಾಲಿಕೆ ವತಿಯಿಂದ ನಗರದಲ್ಲಿ ವಸತಿ ರಹಿತ ವಾಗಿರುವವರಿಗಾಗಿ ಮಿಳ್ಳಘಟ್ಟದ ಗುರುನಾಥ ಸಾಮಿಲ್‌ನ ಸಮೀಪದಲ್ಲಿ ೨೭ಜನರಿಗೆ ಊಟೋಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದವರು ತಿಳಿಸಿದ್ದಾರೆ.

ಅಲ್ಲದೇ ನಗರ ವ್ಯಾಪ್ತಿಯ ಹಲವು ಪ್ರದೇಶಗಳ ಹೊರವಲಯದಲ್ಲಿ ಬೀಡು ಬಿಟ್ಟಿರುವ ಕುಶಲಕರ್ಮಿಗಳು, ಕಾರ್ಮಿಕರು ಹಾಗೂ ಊರೊಳಗೆ ವಸತಿ ಸೌಲಭ್ಯ ಹೊಂದಿದ್ದು, ಉದ್ಯೋಗಾವಕಾಶ ದೊರೆಯದೆ ಆಹಾರಕ್ಕಾಗಿ ಪರಿತಪಿಸುತ್ತಿದ್ದ ೫೬೩ ಜನ ಬಾಧಿತರಿಗೆ ಊಟೋಪಹಾರ ಒದಗಿಸಲಾಗುತ್ತಿತ್ತು. ಪ್ರಸ್ತುತ ಸ್ಥಳೀಯ ಬಸವಕೇಂದ್ರದ ಸಹಕಾರದೊಂದಿಗೆ ಮಲವಗೊಪ್ಪದ ಬೈಪಾಸ್‌ನಲ್ಲಿರುವ ಹಕ್ಕಿಪಿಕ್ಕಿ ಜನಾಂಗದ ೫೭ಕುಟುಂಬಗಳ ೧೮೦ ಜನರಿಗೆ ಅಗತ್ಯ ದಿನಸಿ ಆಹಾರಗಳ ಕಿಟನ್ನು ಪೂರೈಸಲಾಗಿದೆ.

ಇಂತಹ ಸಂದಿಗ್ಧ ಸಂದರ್ಭದಲ್ಲಿ ಪಾಲಿಕೆಯ ಈ ಮಹತ್ವದ ಕಾರ್ಯ ದಲ್ಲಿ ಸಾರ್ವಜನಿಕರು ಕೈಜೋಡಿಸು ವಂತೆ ಕೋರಿರುವ ಅವರು, ನಗರದ ದಾನಿಗಳು ಸಿದ್ಧಪಡಿಸಿದ ಆಹಾರದ ಬದಲಾಗಿ ಅಕ್ಕಿ, ಬೇಳೆ ಮತ್ತಿತರ ದಿನಸಿಗಳನ್ನು ಮಹಾನಗರಪಾಲಿಕೆ ಯಲ್ಲಿ ಆರಂಭಿಸಲಾಗಿರುವ ಕೌಂಟರಿನಲ್ಲಿ ನೀಡಿ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.