ಶ್ರೀ ವಿಜಯ ಕಲಾನಿಕೇತನದಿಂದ ಸಹೃದಯ ವೆಬಿನಾರ್ ಮಾಲಿಕೆ

449

ಶಿವಮೊಗ್ಗ :- ಶ್ರೀವಿಜಯ ಕಲಾನಿಕೇತನ ಅರ್ಪಿಸುವ ಸಹೃದಯ ವೆಬಿನಾರ್ ಮಾಲಿಕೆಯನ್ನು ಜು. ೨೨ ರಿಂದ ೨೪ ರ ವರೆಗೆ ಸಂಜೆ ೫ ಗಂಟೆಗೆ ಫೇಸ್‌ಬುಕ್ ಲೈವ್‌ನಲ್ಲಿ ಪ್ರಸಾರವಾಗ ಲಿದ್ದು, ಹೆಸರಾಂತ ಕಲಾವಿದರು ಮತ್ತು ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ. ಖ್ಯಾತ ಸಾಹಿತಿ ವಿಜಯಾ ಶ್ರೀಧರ್ ಅವರು ಕರೋನ ಕತ್ತಲಲ್ಲಿ ಸಾಹಿತ್ಯದ ಬೆಳಕು ಮತ್ತು ವಿದ್ವಾನ್ ಪಿ. ಜನಾರ್ಧನರಾವ್ ಅವರು ಧಿಂಧಿಂ ಕಿಟತಕ ಧಿಂ ಮೃದಂಗ ಯಾನ ಹಾಗೂ ವಿದುಷಿ ವಸುಧಾ ಬಾಲಕೃಷ್ಣ ಅವರಿಂದ ಸಂಗೀತ ಸುಧಾ ಯಾನ ಎಂಬ ವಿಷಯಗಳನ್ನು ಕುರಿತು ವೆಬಿನಾರ್ ನಡೆಯಲಿದೆ.
ಮೂರು ದಿನಗಳ ಮಾತುಕತೆಯನ್ನು ವಸುಮತಿ ಬಾಪಟ್, ಡಾ| ಕೆ.ಎಸ್. ಪವಿತ್ರ ಮತ್ತು ಡಾ| ಕೆ.ಎಸ್.ಚೈತ್ರ ನಡೆಸಿ ಕೊಡಲಿದ್ದಾರೆ. ಅಧ್ಯಕ್ಷ ಡಾ| ಕೆ.ಆರ್. ಶ್ರೀಧರ್ ಅಧ್ಯಕ್ಷತೆ ವಹಿಸಲಿದ್ದಾರೆ. https://www. face book.com/shri vijaya kalani kethana. registeredಲಿಂಕ್ ಮೂಲಕ ನೇರ ಪ್ರಸಾರವನ್ನು ಫೇಸ್‌ಬುಕ್ ಲೈವ್‌ನಲ್ಲಿ ವೀಕ್ಷಿಸುವಂತೆ ಡಾ| ಕೆ.ಎಸ್. ಪವಿತ್ರಾ ಕೋರಿದ್ದಾರೆ.