ಶ್ರೀಸದುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಪೀಠ ಎಲ್ಲ ಜಾತಿ ವರ್ಗಗಳ ಅಪಾರ ಭಕ್ತರ ಶ್ರದ್ಧಾ ಭಕ್ತಿಯ ಕೇಂದ್ರ

9

ಲೇಖನ: ಕವಿತಾ ಶಾಸ್ತ್ರೀಹೊಳೆಮಠ್
ದಾವಣಗೆರೆ ಜಿಯ ಶ್ರೀಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಪೀಠಎಲ್ಲ ಜತಿ ವರ್ಗಗಳ ಅಪಾರ ಭಕ್ತರ ಶ್ರದ್ಧಾ ಭಕ್ತಿಯ ಕೇಂದ್ರ. ಕಷ್ಟಗಳ ಪರಿಹಾರಕ್ಕಾಗಿ ಮೊರೆ ಹೋಗುವ ಭಕ್ತರಲ್ಲಿ, ತಮ್ಮ ಇಷ್ಟಾರ್ಥಗಳನ್ನು ಕಣ್ಣಿಗೆ ಕಾಣುವ ದೇವರು ಈಡೇರಿಸುವನು ಎನ್ನುವ ನಂಬಿಕೆ ಇಲ್ಲಿ ಅಪಾರವಾಗಿದೆ.
ಬೆಟ್ಟದಷ್ಟು ಸಮಸ್ಯೆಗಳನ್ನು ಹೊತ್ತು ಇಲ್ಲಿಗೆ ಬಂದವರು ಇಲ್ಲಿಂದ ಹಿಂತಿರುಗುವಾಗ ನೋವಿನಲ್ಲಿಯೇ ವಾಪಸ್ ಆಗಿದ್ದು ಇಲ್ಲಿ ಇಲ್ಲವೇ ಇಲ್ಲ. ಈ ಕಾರಣಕ್ಕೆ ಭಕ್ತರು ಭೇಟಿ ನೀಡಿ, ಕರ್ತುಗದ್ದುಗೆ ಪೂಜೆ ಸಲ್ಲಿಸಿ ತಮ್ಮ ಬೇಡಿಕೆ ಈಡೇರಿಕೆಯ ಸಂಕಲ್ಪ ಮಾಡಿಕೊಳ್ಳುವುದು ವಾಡಿಕೆ. ಭವರೋಗಗಳಿಗೆ ಮುಕ್ತಿ ಸಿಗುತ್ತದೆ ಎಂಬ ಅಚಲವಾದ ನಂಬಿಕೆ ಭಕ್ತರದ್ದು.
ಹೌದು, ಮಧ್ಯ ಕರ್ನಾಟಕದ ಭಕ್ತಜನರ ಆರಾಧ್ಯ ಗುರುವರ್ಯರೆಂದೇ ಜನಜನಿತವಾಗಿರುವ ದಾವಣಗೆರೆ ಜಿಯ ಹೊನ್ನಾಳಿ ತಾಲೂಕಿನ ರಾಂಪುರ, ಚನ್ನಗಿರಿ ತಾಲೂಕಿನ ಬಸವಾಪಟ್ಟಣ, ಚಿತ್ರದುರ್ಗ ಜಿಯ ಗುಂಡೇರಿ ಹಾಗೂ ಹಾಸನ ಜಿಯ ಅರಸಿಕೆರೆ ತಾಲೂಕಿನ ಹಿರಿಯೂರು ಕ್ಷೇತ್ರದ ಶ್ರೀಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಪೀಠ ಭಕ್ತರ ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ.
ಮಠ ಮಾನ್ಯಗಳೆಂದರೆ ಕೇವಲ ಸರಕಾರದ ಮೂಲಕ ಕೋಟಿ ಗಟ್ಟಲೇ ಅನುದಾನ ಪಡೆದು ಒಂದಿಷ್ಟು ಕಣ್ಣಿಗೆ ರಾಚುವಂತೆ ಶಾಲಾ-ಕಾಲೇಜುಗಳು ತೆರೆದು ಸಭೆ ಸಮಾರಂಭಗಳಿಗೆ ಮಂತ್ರಿ ಮಹೋದಯರನ್ನು ಕರೆದು ಸನ್ಮಾನಿಸುವ ಸಂದರ್ಭದಲ್ಲ ಪುನಃ ಪುನಃ ಕೋಟಿಗಟ್ಟಲೇ ಅನುದಾನ ಪಡೆಯುವುದೇ ಮಠಮಾನ್ಯಗಳ ಉದ್ದೇಶವೆಂದು ಜನಸಾಮಾನ್ಯರಾಡುವ ಮಾತಿಗೆ ವ್ಯತಿರಿಕ್ತವಾಗಿ ಸುಮಾರು ೮೦೦ ವರ್ಷಗಳಿಂದ ಪ್ರವರ್ಧ ಮಾನಕ್ಕೆ ಬಂದಿರುವ ಶ್ರೀಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಮಠವೂ ಈವರೆಗೆ ೬ ಪೀಠಾಧ್ಯಕ್ಷರನ್ನು ಕಂಡಿದ್ದು, ಧರ್ಮಾತೀತವಾಗಿ ಮತ್ತು ಜಾತ್ಯಾತೀತವಾಗಿ. ನಿತ್ಯದಾಸೋಹ ಉಣಬಡಿಸುವ ಮಧ್ಯಕರ್ನಾಟಕದ ಅನ್ನದಾಸೋಹ ಮಠವೆಂಬ ಕೀರ್ತಿಗೆ ಪಾತ್ರವಾಗಿದೆ.
ಶ್ರೀಸದ್ಗುರು ಶಿವಯೋಗಿ ಹಾಲಸ್ವಾಮೀಜಿ ತಪೋನಿರತ ಸಾಧಕರಾಗಿದ್ದು, ಶರಣೆಂದು ವರಬೇಡಿ ಬರುವ ಭಕ್ತರಿಗೆಲ್ಲ ಇಷ್ಟಾರ್ಥ ಸಿದ್ದಿ ಪ್ರಾಪ್ತಿರಸ್ತೋ ಎಂಬುವಂತೆ ಸಂತಾನವಿಲ್ಲದವರಿಗೆ ಸಂತಾನ ಭಾಗ್ಯ, ನಿರುದ್ಯೋಗಿಗಳಿಗೆ ಉದ್ಯೋಗಿಗಳಲಾಗಲು eನ ಭಾಗ್ಯ, ಸಂಕಷ್ಟವೆಂದು ಬಂದವರಿಗೆ ಪರಿಹಾರೋಪಾಯ ಮಾರ್ಗ, ಅವಿವಾಹಿತರಿಗೆ ವಿವಾಹ-ಕಂಕಣ ಭಾಗ್ಯದ ಶುಭಾಶೀರ್ವಾದ ಅನುಗ್ರಹಿಸುವುದು ಹಾಲಸ್ವಾಮೀಜಿ ತಪ್ಸಾದನೆಯ ಶಕ್ತಿಯಾಗಿದೆ.
ಇಷ್ಟೇ ಅಲ್ಲದೇ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ದುಷ್ಟ ಶಕ್ತಿಗಳಿಂದುಂಟಾಗುವ ತಾಪತ್ರಯಗಳನ್ನು ದೂರವಾಗಿಸುವ ಮೂಲಕ ಹತ್ತು ಹಲವಾರು ವಿಧಗಳ ಸಮಸ್ಯೆಗಳಿಗೆಲ್ಲ ಶ್ರೀಗಳು ತಪ್ಸಾದನೆ ಶಕ್ತಿಯ ಮೂಲಕವೇ ಸನ್ಮಾರ್ಗವನ್ನು ತೋರುವವರಾಗಿರುವ ಕಾರಣ, ಒಂದಿಂದು ಪರಿಹಾರದಿಂದ ನೆಮ್ಮದಿಯನ್ನು ಕಂಡು ಕೊಂಡ ಭಕ್ತರು ಪ್ರತಿವರ್ಷ ಹೊನ್ನಾಳಿ ತಾಲೂಕಿನ ರಾಂಪುರ ಕ್ಷೇತ್ರದಲ್ಲಿ ಮಾಘ ಬಹುಳ ತದಿಗೆಯಂದು ನಡೆಯುವ ಮಹಾರಥೋತ್ಸವದಲ್ಲಿ ಅವರವರ ಶಕ್ತ್ಯಾನುಸಾರವಾಗಿ ಒಣ ಕೊಬ್ಬರಿಯನ್ನು ಸುಡುವುದು ಮತ್ತು ಶ್ರೀಗಳ ಸನ್ನಿಧಿಯಲ್ಲಿ ದವಸಧಾನ್ಯ ತೈಲ ಮತ್ತಿತರೆ ಸ್ವರೂಪದ ಭಕ್ತಿಯ ಹರಿಕೆಯನ್ನು ಭಕ್ತಿಯಿಂದ ಸಮರ್ಪಿಸುವುದು ವಿಶೇಷತೆಗಳಲ್ಲಿ ಒಂದಾಗಿದೆ.
ಪ್ರತಿನಿತ್ಯದ ಅವಧಿಯ ಬೆಳಗಿನ ೮.೩೦ರಿಂದ ರಾತ್ರಿಯ ೧೦.೩೦ರವರೆಗೆ ೩೬೫ ದಿವಸಗಳ ಕಾಲವೂ ಶ್ರೀಗಳಲ್ಲಿ ಸಂಕಷ್ಟಗಳ ಪರಿಹಾರ ಕಂಡುಕೊಳ್ಳಲು ಬರುವ ಭಕ್ತರಿಗೆ ಮೊದಲು ದಾಸೋಹ ಪ್ರಸಾದದ ಪ್ರಾಗಂಣಕ್ಕೆ ಸ್ವಾಗತಿಸುವುದು ಇಲ್ಲಿನ ವಿಶೇಷ. ಪ್ರಸಾದ ಸ್ವೀಕರಿಸಿದ ಅನಂತರ ಶ್ರೀಗಳ ಸನ್ನಿಧಿಯಲ್ಲಿ ಪರಿಹಾರ ಮಾರ್ಗದರ್ಶನದ ಪ್ರಸಾದವನ್ನು ಶ್ರೀಗಳು ಉಣಬಡಿಸುವುದು ಇಲ್ಲಿನ ಗುರುವರ್ಯರ ವೈಶಿಷ್ಟ್ಯತೆಯಾಗಿದೆ.
ಸ್ವಂತ ಬದುಕಿನಿಂದ ಸಂತನ ಬದುಕು:
ಕರ್ಮದ ಕರೆಯನ್ನು ಓಗೊಟ್ಟು ಪವಾಡ ಪುರುಷರ ಮಠವೆಂದು ಖ್ಯಾತಿಯನ್ನು ಪಡೆದಿರುವ ಶ್ರೀಸದುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಮೂಲ ಗುರುಗಳಾದ ಒಂದನೆಯ ಹಾಲಸಿದ್ದೇಶ್ವರ ಹಾಲಸ್ವಾಮೀಜಿ ರಾಂಪುರ ಹಾಗೂ ಹಿರಿಯೂರು ಗ್ರಾಮದಲ್ಲಿ ಎರಡನೇಯ ಪವಾಡ ಪುರುಷರು ರಾಂಪುರ ಬೃಹನ್ಮಠ ಬಿಟ್ಟು ಬಸವಾಪಟ್ಟಣದ ಗ್ರಾಮದ ನೈರುತ್ಯ ದಿಕ್ಕಿನಲ್ಲಿರುವ ಬೆಟ್ಟದಲ್ಲಿ ಗವಿಯಲ್ಲಿ ಅನುಷ್ಠಾನಗೈದ ಹಾಲಶಂಕರೇಶ್ವರ ಹಾಲಸ್ವಾಮೀಜಿ ಗವಿಮಠ , ಗುಂಡೇರಿ ಗ್ರಾಮದಲ್ಲಿ ಹಾಲಸೋಮೇಶ್ವರ ಹಾಲಸ್ವಾಮೀಜಿಯವರು ಅನೇಕ ಗ್ರಾಮಗಳಲ್ಲಿ ಸಂಚಾರ ಮಾಡುತ್ತಾ ತಮ್ಮ ಲೀಲೆ(ಪವಾಡ)ಗಳನ್ನು ತೋರಿಸುತ್ತಾ ಭಕ್ತರ ಪರಿಹಾರ ಮಾರ್ಗದರ್ಶನದ ನೀಡಿ ಮಠವನ್ನು ಸ್ಥಾಪಿಸಿದರು.
ಮೂರು -ಒಂಬತ್ತು (೨೭) ತಿಂಗಳಿಗೆ ಜನಿಸಿದವು ಶ್ರೀಹಾಲಸ್ವಾಮೀಜಿಯವರು ಇವರು ಕೂಡ ಅನೇಕ ಗ್ರಾಮಗಳಲ್ಲಿ ಸಂಚಾರ ಮಾಡುತ್ತಾ ತಮ್ಮ ಲಿಲೇ(ಪವಾಡ)ಗಳನ್ನು ತೋರಿಸುತ್ತಾ ಭಕ್ತರ ಪರಿಹಾರ ಮಾರ್ಗದರ್ಶನ ನೀಡಿ ಶ್ರೀ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಹಾಲಸ್ವಾಮೀಜಿಯವರೆಗೆ ಅಧಿಕಾರ ನೀಡಿದರು. ತದನಂತರ ಚನ್ನಬಸವಯ್ಯ (ಪುಟ್ಟ ಸ್ವಾಮಿ )ಯವರು ೪ ವರ್ಷಗಳ ಕಾಲ ಉಸ್ತುವಾರಿ ನೋಡಿಕೊಂಡು. ಶ್ರೀಶೈಲ ಜಗದ್ಗುರು ಕೇದಾರ ಜಗದ್ಗುರು ಹಾಗೂ ಜಗದ್ಗುರು ಕಾಶಿ ಜಗದ್ಗುರುಗಳ ಸಾನಿಧ್ಯದಲ್ಲಿ ೧೯೯೬ ಜನವರಿ ೨೧ ಮತ್ತು ೨೨ರಂದು ಚನ್ನಬಸವಯ್ಯ ಶ್ರೀ ಷ||ಬ್ರ|| ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ನಾಮಕರಣದೊಂದಿಗೆ ಪೀಠಾಧ್ಯಕ್ಷರಾಗಿ ಪಟ್ಟಾಧಿಕಾರ ವಹಿಸಿಕೊಂಡರು.
ದ ಷ||ಬ್ರ|| ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಮಠಕ್ಕೆ ಬಂದ ಭಕ್ತರ ಜೊತೆಗೆ ಅವಿನಾಭಾವ ಸಂಬಂಧವಿಟ್ಟುಕೊಂಡು , ಪ್ರತಿವರ್ಷ ಶ್ರಾವಣ ಮಾಸ , ಕಾರ್ತಿಕ ಮಾಸ , ಅಮಾವಾಸ್ಯೆ , ಹುಣ್ಣಿಮೆಗಳಲ್ಲಿ ಶ್ರೀ ಮಠಗಳಲ್ಲಿ ಕರ್ತುಗದ್ದುಗೆಗೆ ಮಹಾ ರುದ್ರಾಭಿಷೇಕ , ಬಿಲ್ವಾರ್ಚನೆ , ಇಷ್ಟಲಿಂಗಾನುಷ್ಠಾನ ಉದರ ದಾಸೋಹದ ಜೊತೆಗೆ ಪ್ರತಿ ಚರ್ತುದರ್ಶಿಯಂದು eನ ದಾಸೋಹ , ರೈತರಿಗೆ ಸಾವಯವ ಕೃಷಿಯ ಬಗ್ಗೆ ಅರಿವು , ಸಾಮಾನ್ಯ ಜನರಿಗೆ ಕಾನೂನು ಅರಿವು, ಸಮಾಜದಲ್ಲಿನ ಮೂಡ ನಂಬಿಕೆಗಳನ್ನು ತಡೆದು ಹಾಕುವುದು. ವಿವಿಧ ಸಮಾಜದಲ್ಲಿ ಸಾಮರಸ್ಯ ತರುವದು ಮತ್ತು ಬಡವರಿಗಾಗಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ , ಆಯುರ್ವೇದದಲ್ಲಿ ಅಪಾರ eನ ಹೊಂದಿ ಸಾವಿರಾರು ರೋಗಗಳಿಗೆ ಉಚಿತವಾಗಿ ಔಷಧಗಳನ್ನು ನೀಡುತ್ತಿದ್ದರಲ್ಲದೆ ಶಾರೀರಿಕ ರೋಗಗಳ ಜೋತೆಗೆ ಮಾನಸಿಕ ರೋಗಗಳು ಗುಣಪಡಿಸುತ್ತಿದ್ದರು. ಹಲವಾರು ಕುಟುಂಬದಲ್ಲಿ ಕಲಹಗಳಿಗೆ ತಿಲಾಂಜಲಿಯನಿಟ್ಟು ಶಾಂತಿಯನ್ನು ಮರು ಸ್ಥಾಪನೆ , ಸಮಾಜದಲ್ಲಿ ಬದಲಾವಣೆಗಳಾದಂತೆ ಪೂಜ್ಯರು ಮಠದಲ್ಲಿ ಮತ್ತು ಮಠದ ಕಾರ್ಯಕ್ರಮಗಳಲ್ಲಿ ಇತ್ತಿಚಿನ ದಿನಗಳಲ್ಲಿ ಹಲವಾರು ಬದಲಾವಣೆ ತರುವುದರ ಮೂಲಕ ಮೂಡನಂಬಿಕೆಯ ಕಾರಣದಿಂದ ಬಸವಪಟ್ಟಣದಲ್ಲಿ ನಡೆಯುವ ಮುಳ್ಳು ಗದ್ದುಗೆಯ ಉತ್ಸವ ಮಾಡುವುದನ್ನು ೨೦೧೫ರಿಂದ ಕೈಬಿಟ್ಟಿದರು.
ಪೂಜ್ಯರು ಅಧಿಕಾರ ವಹಿಸಿಕೊಂಡ ಬಳಿಕ ಮಠಕ್ಕೆ ಭಕ್ತರ ಸಂಖ್ಯೆಯೂ ಗಣನಿಯವಾಗಿ ಏರಿಕೆ ಕಂಡಿತು. ಮಠದ ಸೌಂದರ್ಯ ಹೆಚ್ಚಿಸಿದರು. ವಿಶಾಲವಾದ ಸಮುದಾಯ ಭವನ, ಯಾತ್ರಿ ನಿವಾಸ ನಿರ್ಮಾಣ ಮಾಡಿದರು. ಮಕ್ಕಳಿಗೆ ಸಂಸ್ಕಾರ ಕೋಡುವ ಸಲುವಾಗಿ ಶಾಲೆಯಗಳನ್ನು ಆರಂಭಿಸಿದರು. ತಮ್ಮ ಮಠಗಳಲ್ಲದೇ ಸುತ್ತ ಮುತ್ತಲಿನ ಜಿಗಳಾದ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಜಿಯಲ್ಲಿ ಬಹಳ ಪ್ರಭಾವಿಗಳಾಗಿದ್ದ ಪೂಜ್ಯರು, ಯಾವುದೆ ಬೇಡಿಕೆಗಳಿಲ್ಲದೆ ಹಲವಾರು ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮಗಳನ್ನು ಅತಿ ಹೆಚ್ಚು ಮಾಡಿದವರಲ್ಲಿ ಮೊದಲಿಗರೆಂದರು ತಪ್ಪಾಗಲಾರದು.
ಜೂನ್ ತಿಂಗಳ ಕೊನೆಯಲ್ಲಿ ಮಹಾಮಾರಿ ಕೋರೋನಾ ಪಾಜಿಟಿವ್ ಸೋಂಕಿತ ವ್ಯಕ್ತಿಯೋರ್ವ ಶ್ರೀಗಳ ಪಾದ ಸ್ಪರ್ಶಿಸಿ ಆಶಿರ್ವಾದ ಪಡೆದುಕೊಂಡಿದ್ದರು. ಸಾಲದ್ದಕ್ಕೆ ಮಠದ ತುಂಬಾ ಓಡಾಡಿ ಎಲ್ಲರನ್ನೂ ಮಾತನಾಡಿಸಿದ್ದರು. ಪೂಜ್ಯರು ಆರೋಗ್ಯದ ಕಡೆ ಲಕ್ಷ ಕಡಿಮೆ ಮಾಡಿದ್ದರು ಎಂದೆನ್ನಿಸುತ್ತದೆ. ತಮ್ಮ ಕಫದ ಸಮಸ್ಯೆಯಿಂದ ಅನಾರೋಗ್ಯ ಉಂಟಾಗಿದೆ ಎಂದುಕೊಂಡಿದ್ದರು. ದಿನದಿಂದ ದಿನಕ್ಕೆ ಆರೋಗ್ಯ ಹದಗೆಡುತ್ತಿರುವಾಗ ಭಕ್ತರು ಬಲವಂತ ಮಾಡಿದ ಕಾರಣ ಜು.೧೧ರಂದು ತಪಾಸಣೆಗಾಗಿ ಆಸ್ಪತ್ರೆಯಲ್ಲಿ ದಾಖಲಾದರು.
ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಗಳ ದೇಹ ವ್ಯೆಂಟಿಲೇಟರ್ ಆಕ್ಸಿಜನ್ ಚಿಕಿತ್ಸೆಗೆ ಹೊಂದಿಕೊಳ್ಳಲಿಲ್ಲ. ಅಂತಿಮವಾಗಿ ಜು.೧೫ರ ಸಂಜೆಯ ಸಮಯಕ್ಕೆ ಅಪಾರಾ ಭಕ್ತ ವೃಂದವನ್ನು ಶೋಕ ಸಾಗರದಲ್ಲಿ ಮುಳಗಿಸಿ ಶಿವ ಸಾಯುಜ್ಯವನ್ನು ಪಡೆದರು. ಶ್ರೀಗಳು ಸದಾಕಾಲ ಭಕ್ತರ ಆರೋಗ್ಯದ ಬಗ್ಗೆ ಯೋಚಿಸುತ್ತಾ, ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಿದ್ದು ಇಷ್ಟಕ್ಕೆಲ್ಲ ಕಾರಣವಾಯಿತೆಂದೆನಿಸುತ್ತದೆ. ಇನ್ನು ನಮಗೆ ಉಳಿದಿರುವುದು ಪೂಜ್ಯ ಸಂತರ ನೆನಪು ಮಾತ್ರ.