ಶ್ರೀಗಳ ಅಗಲಿಕೆ ಭಕ್ತಸಮೂಹಕ್ಕೆ ತುಂಬಲಾರದ ನಷ್ಟ: ದೀಪಾ

430

ಹೊನ್ನಾಳಿ: ರಾಂಪುರ ಬೃಹನ್ಮಠದ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಅಗಲಿಕೆ ಭಕ್ತಸಮೂಹಕ್ಕೆ ತುಂಬಲಾರದ ನಷ್ಟ ಎಂದು ಜಿಪಂ ಅಧ್ಯಕ್ಷೆ ದೀಪಾ ಜಗದೀಶ್ ಅವರು ಹೇಳಿದರು.
ತಾಲೂಕಿನ ಯಕ್ಕನಹಳ್ಳಿ ಗ್ರಾಮದ ಶ್ರೀ ಬಸವೇಶ್ವರಸ್ವಾಮಿ ದೇವಳದ ಆವರಣದಲ್ಲಿ ಹಮ್ಮಿಕೊಂಡ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದ ಅವರು, ಜನತೆಯ ಕಷ್ಟ-ಸುಖಗಳಿಗೆ ಸದಾ ಸ್ಪಂದಿಸುತ್ತಿದ್ದ ಶ್ರೀಗಳ ಅಗಲಿಕೆಯನ್ನು ಅರಗಿಸಿಕೊಳ್ಳುವುದು ಇಂದಿಗೂ ಸಾಧ್ಯವಿಲ್ಲವಾಗಿದೆ. ಅವರು ಇನ್ನೂ ನಮ್ಮ ನಡುವೆ ಇರುವ ಹಾಗೆ ಭಾಸವಾಗುತ್ತಿದೆ ಎಂದರು.
ಜು.೨೦ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಅವರು ಜನಿಸಿದ ದಿನವಾಗಿದೆ. ಎಲ್ಲವೂ ಸರಿಯಾಗಿದ್ದಿದ್ದರೆ ಇಂದು ಅವರ ೫೬ನೇ ಹುಟ್ಟುಹಬ್ಬವನ್ನು ನಾವೆಲ್ಲರೂ ಸಂಭ್ರಮದಿಂದ ಆಚರಿಸಬಹುದಾ ಗಿತ್ತು. ಭೀಮನ ಅಮಾವಾಸ್ಯೆ ಯಾಗಿರುವ ಇಂದು ಬಸವಾಪಟ್ಟಣದ ಗವಿಮಠದಲ್ಲಿ ಅಮಾವಾಸ್ಯೆ ವಿಶೇಷ ಪೂಜೆ-ರುದ್ರಾಭಿಷೇಕವನ್ನು ಸ್ವಾಮೀಜಿ ನಡೆಸುತ್ತಿದ್ದರು. ಅವರಿಗೆ ನಾವು ನಿಜವಾಗಲೂ ಶ್ರದ್ಧಾಂಜಲಿ ಸಲ್ಲಿಸಬೇಕಿದ್ದರೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ. ಧರ್ಮ ಮಾರ್ಗದಲ್ಲಿ ನಡೆದು ಲೋಕಕಲ್ಯಾಣಕ್ಕೆ ನಮ್ಮ ಅಳಿಲು ಸೇವೆ ಸಲ್ಲಿಸೋಣ ಎಂದರು.
ಯಕ್ಕನಹಳ್ಳಿ ಗ್ರಾಮದ ಹಿರಿಯ ರಾದ ಎಸ್.ಎಂ. ನಾಗರಾಜಪ್ಪ, ಮುಖಂಡರಾದ ಸಿ. ಕುಬೇಂದ್ರಪ್ಪ, ಎಂ.ಸಿ. ಕರಿಬಸಪ್ಪ, ಎಚ್.ಎಂ. ಹಾಲೇಶ್, ಎಂ.ಸಿ. ನಾಗಪ್ಪ, ಮೇಘರಾಜ್, ಅಶೋಕ್, ಅಜೇಯ, ಅವಿನಾಶ್, ಯು. ನಾಗರಾಜ್, ಎಸ್. ಎಂ. ಹನುಮಂತಪ್ಪ, ಆಶಾ ಕಾರ್‍ಯಕರ್ತೆ ಯರಾದ ಕೋಮಲ, ಸಾವಿತ್ರಮ್ಮ, ಹಾಲಮ್ಮ ಉಪಸ್ಥಿತರಿದ್ದರು.