ಶ್ರಾವಣ ಮಾಸ- ಹಬ್ಬಗಳ ಸಂಭ್ರಮ ಕುಟುಂಬಸ್ಥರೊಂದಿಗೆ ಮನೆಯಲ್ಲೇ ಸರಳವಾಗಿ ಸಂಭ್ರಮಿಸೋಣ

491

ಹೊನ್ನಾಳಿ: ಶ್ರಾವಣಮಾ॒ಸ ಪ್ರಾರಂಭವಾಗುತ್ತದೆ. ಸಾಲು ಸಾಲು ಹಬ್ಬಗಳಿವೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಶ್ರಾವಣಮಾಸದ ಹಬ್ಬಗಳಿಗೆ ವಿಶಿಷ್ಟ ಪ್ರಾಶಸ್ತ್ಯವಿದೆ. ಒಂದು ಕಡೆ ಕರೋನ ರಾಕ್ಷಸನ ರಣಕೇಕೆಯ ನಡುವೆಯೇ ಹಬ್ಬಗಳು ಶುರುವಾಗಲಿವೆ. ಈ ಬಾರಿ ಆಡಂಬರವಿಲ್ಲದೆ ತುಂಬಾ ಸರಳವಾಗಿ ಮನೆಯ ಹಬ್ಬಗಳನ್ನು ಆಚರಿಸುವುದು ಅನಿವಾರ್ಯವಾಗಿದೆ.
ಧಾಂ-ಧೂಂ ಎನ್ನದೆ ಮನೆಯಲ್ಲಿ ಏನೀರುವುದೋ ಅದರಿಂದಲೇ ಪೂಜೆಗಳನ್ನು ಮಾಡುವುದು ಉತ್ತಮ.
ನಾಗರಪಂಚಮಿ, ಷಷ್ಠಿಗೆ ನಾಗರಕಟ್ಟೆ ಹುತ್ತಕ್ಕೆ ಹೋಗುವ ಬದಲು ಮನೆಯಲ್ಲಿರುವ ನಾಗಪ್ಪನ ವಿಗ್ರಹಕ್ಕೆ ಹಾಲು ಎರೆದು ಪೂಜೆ ಮಾಡಿ.
ವರಮಹಾಲಕ್ಷ್ಮಿ ಹಬ್ಬಕ್ಕೆ ನೀವೇ ಕುಟುಂಬಸ್ಥರೊಂದಿಗೆ ಆಚರಿಸಿ, ಮನೆಯಲ್ಲಿರುವ ಲಕ್ಷ್ಮಿ ವಿಗ್ರಹಕ್ಕೆ ಅಥವಾ ಫೋಟೋಗೆ ಒಳ್ಳೆಯ ಮನಸ್ಸಿನಿಂದ ಪೂಜೆ ಮಾಡಿ. ಮುತ್ತೈದೆಯರನ್ನು ಕರೆದು ಹರಿಶಿಣ ಕುಂಕುಮ ಕೊಡಬೇಕು ಎನ್ನುವ ಬದಲು ಮಹಾಲಕ್ಷ್ಮಿಗೆ ತಾಂಬೂಲ ಬಳೆಯನ್ನು ನೀಡಿ ಆಶೀರ್ವಾದ ಪಡೆಯಿರಿ.
ಇನ್ನು ಗೌರಿಗ॒ಣೇಶನನ್ನು ಹೊರಗಿನಿಂದ ತಂದು ಪೂಜಿಸುವವರು ಮನೆಯ ಅರಿಶಿಣದ ಗೌರಿಯನ್ನು ಮಾಡಿ ಮನೆಯ ಇರುವ ಗಣಪನಿಗೆ ಪೂಜೆ ಮಾಡಿ ಭಕ್ತಿಯಿಂದ ಭಜಿಸಿ. ಇನ್ನೂ ಬಾಗಿನಕ್ಕಾಗಿ ಮರ, ವಿಳೇದೆಲೆ, ಇನ್ನೊಂದು ಎನ್ನುವ ಬದಲು ಮನೆಯಲ್ಲಿ ಇರುವುದನ್ನೇ ಜೋಡಿಸಿ ಗೌರಿ ದೇವಿಗೆ ಬಾಗಿನವನ್ನು ನೀಡಿ ಗೌರಿ ಗಿಂತ ದೊಡ್ಡ ಮುತ್ತೈದೆ ಇನ್ಯಾರಿರಲು ಸಾಧ್ಯ.
ಇದಕ್ಕಾಗಿ ಹೂ ಹಣ್ಣು -ಹಂಪಲ ,ಮಾವಿನ ತೋರಣ, ಬಾಳೆಕಂಬ ಎಂದೆಲ್ಲ ಹೊರ ಹೋಗುವುದರ ಬದಲು ಮನೆಯಲ್ಲಿರುವ ವಸ್ತುಗಳನ್ನೇ ಬಳಸಿ ನಿರ್ಮಲ ಮನಸ್ಸಿನಿಂದ ಪೂಜಿಸಿದರೆ ಒಳಿತು. ಏಕೆಂದರೆ ಕರೋನಾ ಯಾವ ಯಾವ ರೂಪದಲ್ಲಿ ಪ್ರವೇಶಿಸುವುದು ತಿಳಿಯದು.
ದಯವಿಟ್ಟು ಎಲ್ಲರೂ ಎಚ್ಚರ ವಹಿಸಿ. ಈ ವರ್ಷ ಹೀಗೆ ಸರಳ ರೀತಿಯಲ್ಲಿ ಹಬ್ಬಗಳನ್ನು ಆಚರಿಸಿದರೆ, ಬರುವ ವರ್ಷಗಳಲ್ಲಿ ವಿಜಂಭಣೆಯಿಂದ ಹಬ್ಬಗಳನ್ನು ಮಾಡಬಹುದು. ತಾಯಿ ವರಮಹಾಲಕ್ಷ್ಮಿ ನಮ್ಮ ಭಾರತವನ್ನು ಕರೋನಾ ಮುಕ್ತವಾಗಿಸಲಿ ಎಂದು ವರ ಪ್ರಸಾದವನ್ನು ಬೇಡೋಣ.