ಶೇ.೮ರಷ್ಟು ವಿದ್ಯಾರ್ಥಿಗಳಲ್ಲಿ ಕಲಿಕೆ ಅಂಗವೈಕಲ್ಯತೆ

308

ಶಿವಮೊಗ್ಗ : ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಕಲಿಕೆ ಅಂಗವೈಕಲ್ಯ ಶೇ.೮ರಷ್ಟು ಇದೆ. ವಿದ್ಯಾರ್ಥಿಗಳಲ್ಲಿ ಮಾಹಿತಿ ಸ್ವೀಕರಿಸುವ ಪ್ರತಿಕ್ರಿಯೆಗೊಳಿ ಸುವ, ವಿಶ್ಲೇಷಣೆ ಅಥವಾ ಸಂಗ್ರಹಿಸುವ ಮೆದುಳಿನ ಸಾಮರ್ಥ್ಯ ಕಡಿಮೆ ಇರುತ್ತದೆ. ಇಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರಾರಂಭಿಕ ಹಂತದಲ್ಲಿ ಇಂತಹ ಕಲಿಕಾ ದೋಷ ಇರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿದರೆ ಸಂಪೂರ್ಣ ಗುಣಮುಖರಾಗುತ್ತಾರೆ ಎಂದು ಮಕ್ಕಳ ಆಪ್ತ ಸಲಹೆಗಾರರಾದ ವೀಣಾಸುರೇಶ್ ತಿಳಿಸಿದರು.
ಇನ್ನರ್‌ವ್ಹೀಲ್ ಕ್ಲಬ್ ಪೂರ್ವ ವತಿ ಯಿಂದ ವಿವಿಧ ಶಾಲಾ ಶಿಕ್ಷಕರಿಗೆ ಏರ್ಪಡಿಸಲಾದ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಕಲಿಕಾ ದೋಷವಿರುವ ಮಕ್ಕಳು ಕೆಲವು ವಿಷಯಗಳಲ್ಲಿ ಅಕ್ಷರಗಳನ್ನು ಹಿಂದೆ ಮುಂದೆ ಬರೆಯುವುದು, ಶಾಲೆಗೆ ಚಕ್ಕರ್ ಹೊಡೆಯುವುದು ಬದುಕಿನಲ್ಲಿ ಆಸಕ್ತಿ ತೋರಿಸದೆ ಇರುವುದು, ಇನ್ನು ಹಲವಾರು ಸಮಸ್ಯೆಗಳನ್ನು ಹೊಂದಿರು ತ್ತಾರೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ (ಡೆಸಿಲೆಕ್ಸಿಯ) ಈ ಸಮಸ್ಯೆ ಹೆಚ್ಚುತ್ತಿರುವುದು ತುಂಬಾ ಆತಂಕಕಾರಿ ಯಾಗಿದೆ. ಆದ್ದರಿಂದ ಮುಖ್ಯವಾಗಿ ಇಂತಹ ಮಕ್ಕಳನ್ನು ಹೇಗೆ ತರಬೇತಿ ಗೊಳಿಸುವುದು ಹಾಗೂ ಅವರಲ್ಲಿ ಕಲಿಕಾ ಸಾಮರ್ಥ್ಯ ಹೇಗೆ ಹೆಚ್ಚಿಸುವುದು ಮತ್ತು ಅಂತಹವರನ್ನು ಹೇಗೆ ಗುರುತಿ ಸುವು ದರ ಬಗ್ಗೆ ಮಾಹಿತಿ ನೀಡಿದರು. ಇನ್ನರ್‌ವ್ಹೀಲ್ ಕ್ಲಬ್‌ನ ಅಧ್ಯಕ್ಷೆ ಪೂರ್ಣಿಮಾ ನರೇಂದ್ರ ಅವರು ಅಧ್ಯಕ್ಷತೆ ವಹಿಸಿದ್ದರು. ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ ಕುಮಾರ್, ವೀಣಾಹರ್ಷ, ಮಮತಾ ಸುಧೀಂದ್ರ, ರಾಜೇಶ್ವರಿ ಪ್ರತಾಪ್, ನೇತ್ರಾವತಿ ಬಸವರಾಜ್, ಜಿ. ವಿಜಯ ಕುಮಾರ್, ಹೆಚ್.ಎಲ್.ರವಿ, ಚಂದ್ರಶೇಖರಯ್ಯ, ಗಣೇಶ್, ಅಣಜಿ ಬಸವರಾಜ್ ಉಪಸ್ಥಿತರಿದ್ದರು.