ಶುಚಿ-ರುಚಿಯೊಂದಿಗೆ ಸುರಕ್ಷತೆಗೂ ಒತ್ತು ಕೊಟ್ಟ ಹೊನ್ನಾಳಿಯ ಪ್ರತಿಷ್ಠಿತ ಗುರುಕೃಪಾ ಹೊಟೇಲ್

249

(ಹೊಸ ನಾವಿಕ ನ್ಯೂಸ್)
ಹೊನ್ನಾಳಿ: ಕೊರೊನಾ ಎರಡನೇ ಅಲೆ ನಿಯಂತ್ರಿಸುವ ಹಿನ್ನೆಲೆಯಲ್ಲಿ ಜನರ ಓಡಾಟ ತಡೆಯಲು ಏ.೨೧ ರಿಂದ ರಾಜದ್ಯಂತ ಕಟ್ಟುನಿಟ್ಟಿನ ನಿಯಮಗಳನ್ನು ಜರಿಗೊಳಿಸಲಾ ಗಿದ್ದು, ಪ್ರಮುಖ ಜನಸಂದಣಿ ಕೇಂದ್ರಗಳಾಗಿರುವ ಹೋಟೆಲ್‌ಗಳಿಗೆ ಗ್ರಾಹಕರು ತೆರಳುವುದನ್ನು ನಿರ್ಬಂಧಿಸಲಾಗಿದೆ. ಹಾಗಾಗಿ, ೨೨ರಿಂದ ಪಟ್ಟಣದಲ್ಲಿ ಹೋಟೆಲ್‌ಗಳಿಗೆ ಪಾರ್ಸೆಲ್ ನೀಡಲು ಮಾತ್ರ ಅವಕಾಶ ನೀಡಲಾಗಿದ್ದು, ವ್ಯಾಪಾರ ಪ್ರಾರಂಭಿಸಲಾಗಿದೆ.
ಪಟ್ಟಣದ ಟಿಬಿ ವೃತ್ತದ ಹೋಟೆಲ್ ಶ್ರೀ ಗುರುಕೃಪಾದಲ್ಲಿ ಉಪಾಹಾರ, ಊಟ ಪಾರ್ಸೆಲ್ ಮೂಲಕ ನೀಡಲಾಗುತ್ತಿದೆ. ಬಿಸಿಬೇಳೆ ಬಾತ್, ಚಿತ್ರನ್ನ, ಅವಲಕ್ಕಿ, ಮೆಸರನ್ನ ಮತ್ತಿತರ ಖಾದ್ಯಗಳು, ಚಪಾತಿ, ಅನ್ನ-ಸಾಂಬಾರ್ ಇತರ ಪದಾರ್ಥ ಗಳನ್ನೊಳಗೊಂಡ ಊಟ ಪಾರ್ಸೆಲ್ ನೀಡಲಾಗುತ್ತಿದೆ. ಆರೋಗ್ಯ ಸಂರಕ್ಷಣೆಗೆ ಅಗತ್ಯವಾದ ವೇದ ಶುಂಠಿ ಕಾಫಿ, ಕಷಾಯ ಮತ್ತಿತರ ಪೇಯಗಳೂ ಇಲ್ಲಿ ದೊರೆಯುತ್ತಿದ್ದು, ಪಾರ್ಸೆಲ್ ಮೂಲಕ ಗ್ರಾಹಕರಿಗೆ ನೀಡಲಾಗುತ್ತಿದೆ.
ಸ್ಯಾನಿಟೈಸರ್ ಹಾಕಿ ಕೈಗಳನ್ನು ಶುಚಿಗೊಳಿಸಲು, ಮಾಸ್ಕ್‌ಗಳನ್ನು ಧರಿಸಲು ಮಾಲೀಕರಾದ ಪ್ರವೀಣ್ ಕುಮಾರ್ ಶೆಟ್ಟಿ ಮತ್ತು ನಿತೀಶ್ ಕುಮಾರ್ ಶೆಟ್ಟಿ ಗ್ರಾಹಕರಿಗೆ ತಿಳಿಸುತ್ತಾರೆ.