ಶಿವಮೊಗ್ಗ: ೩೪೪ ಕೊರೋನ ಪಾಸಿಟಿವ್ ಪ್ರಕರಣ ಪತ್ತೆ

449

ಶಿವಮೆಗ್ಗ: ಸೆ.೩೦ರಂದು ಜಿಯಲ್ಲಿ ೩೪೪ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು ಪಾಸಿಟಿವ್ ಸಂಖ್ಯೆ ೧೫,೧೩೩ ಎಂದು ಜಿ ಹೆಲ್ತ್ ಬುಲಿಟಿನ್ ಪ್ರಕಟಿಸಿದೆ.
ಕಳೆದ ಮೂನ್ಕಾಲ್ಕು ದಿನಗಳಿಂದ ಕೊರೋನ ಪರೀಕ್ಷೆ ಹೆಚ್ಚಾಗುತ್ತಿದ್ದರೂ ಕೊರೋನ ಪಾಸಿಟಿವ್ ಸಂಖ್ಯೆ ಕಡಿಮೆ ಬರುತ್ತಿರುವುದು ಜಿಲ್ಲಾಡಳಿತಕ್ಕೆ ತುಸು ನೆಮ್ಮದಿ ತಂದಿದೆ.
ನಾಲ್ವರು ಸೋಂಕಿತರು ಸಾವುಕಂಡಿದ್ದು, ಇದರಿಂದ ಜಿಯಲ್ಲಿ ಒಟ್ಟು ಸಾವಿನ ಸಂಖ್ಯೆ ೨೯೩ಕ್ಕೇರಿದೆ. ೪,೦೪೦ ಜನರಿಗೆ ಕೊರೋನ ಪರೀಕ್ಷೆ ನಡೆದಿದ್ದು ೩೬೨೭ ಜನರಿಗೆ ನೆಗೆಟಿವ್ ಎಂದು ನೆಮ್ಮದಿಯ ವರದಿ ಬಂದಿದೆ.
ಇಂದು ೩೨೬ ಜನ ಸೋಂಕಿನಿಂದ ಗುಣಮುಖರಾಗಿ ಮೆಗ್ಗಾನ್ ಮತ್ತು ಕೋವಿಡ್ ಕೇರ್ ಸೆಂಟರ್ ನಿಂದ ಬಿಡುಗಡೆಗೊಂಡಿzರೆ.
ಇದರಿಂದ ಒಟ್ಟು ಗುಣಮುಖ ರಾಗಿರುವ ಸಂಖ್ಯೆಯೂ ಸಹ ೧೨೫೯೮ ಕ್ಕೇರಿದೆ. ೧೫೨ ಜನ ಕೊರೋನ ಸೋಂಕಿತರು ಮೆಗ್ಗಾನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ೨೦೦ ಜನ ಕೊರೋನ ಕೇರ್ ಸೆಂಟರ್‌ನಲ್ಲಿ, ೩೦೭ ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ, ೧೨೧೨ ಜನ ಮನೆಯಲ್ಲಿ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿzರೆ. ಆಯುರ್ವೇದಿಕ್ ಕಾಲೇಜಿನ ಆಸ್ಪತ್ರೆಯಲ್ಲಿ ೧೫೨ ಜನ ಚಿಕಿತ್ಸೆ ಪಡೆಯುತ್ತಿದ್ದು ಒಟ್ಟು ಸಕ್ರಿಯಗೊಂಡ ಕೊರೋನ ಪಾಸಿಟಿವ್ ಸಂಖ್ಯೆ ೨೦೨೩ ಎಂದು ಬುಲಿಟಿನ್ ತಿಳಿಸಿದೆ.
ಸೋಂಕಿನ ಹೆಚ್ಚಳದಿಂದಾಗಿ ಕಂಟೈನ್ಮೆಂಟ್ ಜೋನ್‌ಗಳು ಸಹ ಹೆಚ್ಚಾಗಿವೆ. ನಿನ್ನೆಯ ವರೆಗೆ ೬೪೫೨ ಕಂಟೈನ್ಮೆಂಟ್ ಜೋನ್‌ಗಳಿದ್ದ ಜಿಯಲ್ಲಿ ಇಂದು ಸಹ ೬೪೯೦ ರಷ್ಟೇ ಕಂಟೈನ್ಮೆಂಟ್ ಜೋನ್ ಗಳು ಆಗಿವೆ. ನಿನ್ನೆಯ ವರೆಗೆ ೩೪೯೪ ಡಿನೋಟಿಫೈಡ್ ಕಂಟೈನ್ಮೆಂಟ್ ಜೋನ್ ಗಳು ಇಂದು ೩೬೦೮ ರಷ್ಟೇ ಇದೆ ಎಂದು ಬುಲಿಟಿನ್ ಪ್ರಕಟಿಸಿವೆ.
ಶಿವಮೊಗ್ಗ ನಗರ ಮತ್ತು ತಾಲೂಕಿನಲ್ಲಿ- ೧೩೩ ಭದ್ರಾವತಿಯಲ್ಲಿ- ೨೭, ಶಿಕಾರಿಪುರ- ೫೨, ತೀರ್ಥಹಳ್ಳಿ- ೩೩, ಸಾಗರದಲ್ಲಿ ೧೯, ಹೊಸನಗರದಲ್ಲಿ- ೩೧ ಹಾಗೂ ಸೊರಬದಲ್ಲಿ ೪೪ ಪ್ರಕರಣಗಳು ಪತ್ತೆಯಾದರೆ, ಇತರೆ ಜಿಯಿಂದ ಬಂದು ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಮೂವರಿದ್ದಾರೆ ಎಂದು ಹೆಲ್ತ್ ಬುಟಿಲಿಟಿನ್ ಪ್ರಕಟಿಸಿದೆ.