ಶಿವಮೊಗ್ಗ: ೨ ಸಾವಿರ ಗಡಿ ದಾಟಿದ ಪಾಸಿಟಿವ್ ಕೇಸ್ ಇಂದು ೧೧೨ ಮಂದಿಗೆ ಸೋಂಕು ದೃಢ

478

ಶಿವಮೊಗ್ಗ: ಜಿಯಲ್ಲಿ ಆ.೩ರಂದು ಮತ್ತೆ ಶತಕದ ಗಡಿ ದಾಟಿದ್ದು, ೧೧೨ ಕೊರೋನ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇದರಿಂದಾಗಿ ಜಿಯ ಒಟ್ಟು ಈವರೆಗಿನ ಕೊರೋನ ಪಾಸಿಟಿವ್ ಪ್ರಕರಣ ೨,೦೯೪ ಎಂದು ಜಿ ಹೆಲ್ತ್ ಬುಲಿಟಿನ್ ತಿಳಿಸಿದೆ.
ಜಿಯಲ್ಲಿ ಇದುವರೆಗೂ ೨೮,೯೬೫ ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು, ೨೬,೪೪೦ ಜನರಿಗೆ ನೆಗೆಟಿವ್ ಎಂದು ವರದಿ ಬಂದಿದೆ. ೨,೦೯೪ ಜನರಿಗೆ ಕೊರೋನ ಪಾಸಿಟಿವ್ ಎಂದು ವರದಿ ಬಂದಿದ್ದು ೪೩೧ ಜನರ ವರದಿ ಇನ್ನೂ ಕೈ ಸೇರಬೇಕಿದೆ ಎನ್ನಲಾಗಿದೆ.
ಇಂದು ಸಹ ೩೨ ಜನರು ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿzರೆ. ಇದರಿಂದ ೧,೦೯೫ ಜನರು ಸೋಂಕಿನಿಂದ ಬಿಡುಗಡೆಯಾಗಿzರೆ. ಇಂದು ಸಹ ಮೂವರು ಸೋಂಕಿನಿಂದ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ ೪೩ ಕ್ಕೇರಿದೆ.
೨೪೮ ಜನ ಕೋವಿಡ್-೧೯ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿzರೆ. ೪೯೩ ಜನ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿzರೆ. ೫೫ ಜನ ಖಾಸಗಿ ಆಸ್ಪತ್ರೆಯಲ್ಲಿಯೂ, ೮೨ ಜನ ತಮ್ಮ ಮನೆಯಲ್ಲಿಯೂ ಚಿಕಿತ್ಸೆ ಪಡೆಯುತ್ತಿzರೆ. ಇದರಿಂದಾಗಿ ಜಿಯಲ್ಲಿ ಒಟ್ಟು ಸಕ್ರಿಯವಾಗಿರುವ ಕೊರೋನ ಪಾಸಿಟಿವ್ ಸಂಖ್ಯೆ ೯೫೬.
೩೯೫ ಕಂಟೈನ್ಮೆಂಟ್ ಜೋನ್‌ಗಳು ತಿಳಿದುಬಂದಿದೆ. ೧೦೧ ಜೋನ್‌ಗಳು ಡಿನೋಟಿಫೈಡ್ ಮಾಡಲಾಗಿದೆ.
ಶಿವಮೊಗ್ಗ-೬೧, ಭದ್ರಾವತಿಯಲ್ಲಿ ೨೩, ಶಿಕಾರಪುರದಲ್ಲಿ-೧೩, ಸಾಗರ-೬ ಸೊರಬ -೫ , ಹೊಸನಗರದಲ್ಲಿ ೪ ಪ್ರಕರಣಗಳು ಪತ್ತೆಯಾಗಿವೆ.