ಶಿವಮೊಗ್ಗ ವಕ್ಫ್ ಬೋರ್ಡ್ ಗೊಂದಲಕ್ಕೆ ತೆರೆ

419

ಶಿವಮೊಗ್ಗ: ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಅಬ್ದುಲ್ ಘನಿಯವರನ್ನ ಸರ್ಕಾರ ನೇಮಿಸಿ ಆದೇಶಿಸಿದೆ. ಇದರಿಂದ ಜಿ ವಕ್ಫ್ ಮಂಡಳಿಯಲ್ಲಿ ನಿರ್ಮಾಣಗೊಂಡಿದ್ದ ಅಧ್ಯಕ್ಷರ ಸ್ಥಾನದ ಗೊಂದಲಕ್ಕೆ ತೆರೆಬಿದ್ದಿದೆ.
ಅಬ್ದುಲ್ ಘನಿಯವರನ್ನ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ನೇಮಿಸಿ ಆದೇಶಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ವೇಳೆ ನೇಮಕಗೊಂಡಿದ್ದ ರಾಜ್ಯದ ಎ ಜಿ ವಕ್ಫ್ ಬೋರ್ಡ್‌ನ ಅಧ್ಯಕ್ಷರಾಗಿದ್ದವರು ಸರ್ಕಾರದ ಆದೇಶದ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದರು. ನ್ಯಾಯಾಲಯವೂ ಸಹ ಅವಧಿ ಮುಗಿಯುವವರೆಗೆ ಆಯಾ ವಕ್ಫ್ ಬೋರ್ಡ್‌ನ ಹಿಂದಿನ ಅಧ್ಯಕ್ಷರೇ ಮುಂದುವರೆಯಲಿ ಎಂಬ ಆದೇಶವನ್ನ ಎತ್ತಿಹಿಡಿದ ಪರಿಣಾಮ ಶಿವಮೊಗ್ಗ ಜಿ ವಕ್ಫ್ ಬೋರ್ಡ್‌ನ ಅಧ್ಯಕ್ಷ ಸ್ಥಾನಕ್ಕೆ ಯಾರು ಅಧ್ಯಕ್ಷರು ಎಂಬ ಗೊಂದಲಗಳು ಆರಂಭಗೊಂಡವು. ಹಿಂದಿನ ಅಧ್ಯಕ್ಷ ಹಬೀಬುರವರು ತಾವೇ ಅಧ್ಯಕ್ಷರೆಂದು ಹೇಳಿಕೆ ನೀಡಿದ ನಂತರ ಕೆಲವು ದಿನಗಳ ಕಾಲ ಗೊಂದಲಗಳು ಮುಂದುವರೆದಿತ್ತು.
೨೦೧೭ರಲ್ಲಿ ಸಿದ್ದರಾಮಯ್ಯ ಸರ್ಕಾರ ಶಿವಮೊಗ್ಗ ಜಿ ವಕ್ಫ್ ಬೋರ್ಡ್‌ನ ಅಧ್ಯಕ್ಷರೆಂದು ಹಬೀಬುರವರನ್ನ ೩ ವರ್ಷಗಳ ವರೆಗೆ ಅಂದರೆ ಆ.೩೧ ೨೦೨೦ ರವರೆಗೆ ಜಿ ವಕ್ಫ್ ಬೋರ್ಡ್ ಅಧ್ಯಕ್ಷರು ಎಂದು ಆದೇಶಸಿದ್ದರ ಪರಿಣಾಮ ನಾನೇ ವಕ್ಫ್ ಬೋರ್ಡ್ ಅಧ್ಯಕ್ಷನಿರುತ್ತೇನೆ ಎಂದು ಹಬೀಬು ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ನಿಗಮ ಮಂಡಳಿಯ ಅಧ್ಯಕ್ಷರನ್ನ ಬದಲಾಯಿಸುವಂತೆ ಬಿಜೆಪಿ ಸರ್ಕಾರ ಬದಲಿಸಿದ ಪರಿಣಾಮ ಜಿ ವಕ್ಪ್ ಬೋರ್ಡ್‌ನಲ್ಲಿ ಗೊಂದಲ ವುಂಟಾಗಿದೆ. ವಕ್ಫ್ ಬೋರ್ಡ್‌ನಲ್ಲಿ ಈ ರೀತಿ ನಡೆಯುವುದಿಲ್ಲ. ಒಮ್ಮೆ ಅಧ್ಯಕ್ಷರನ್ನ ಆಯ್ಕೆ ಮಾಡಿದರೆ ಅವರು ೩ ವರ್ಷಗಳ ವರೆಗೆ ಮುಂದವರೆ ಯುತ್ತಾರೆ. ಸರ್ಕಾರ ಯಾವುದೇ ಬಂದರು ಮೂರುವರ್ಷಗಳ ವರೆಗೆ ವಕ್ಫ್ ಬೋರ್ಡ್ ಅಧ್ಯಕ್ಷರನ್ನ ಬದಲಿಸಲು ಬರುವುದಿಲ್ಲವೆಂದು ತಿಳಿಸಿದ್ದರು.
ಆ. ೩೧ರಂದು ಹಬೀಬು ರವರು ವಕ್ಫ್ ಬೋರ್ಡ್ ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಆದರೆ ಸರ್ಕಾರಿ ಆದೇಶದಂತೆ ಅಬ್ದುಲ್ ಘನಿಯವರು ಅಧ್ಯಕ್ಷರಾಗಿ ಆಯ್ಕೆ ಯಾಗುತ್ತಾರೆಂದು ಅವರ ಆಪ್ತವಲಯ ಪರಿಗಣಿಸಿತ್ತು. ಆದರೆ ಸರ್ಕಾರದ ಆದೇಶ ಬರುವವರೆಗೂ ಅಬ್ದುಲ್ ಘನಿಗೆ ಅಧ್ಯಕ್ಷ ಸ್ಥಾನಕ್ಕೇರಲು ಕಷ್ಟವಾಗಿತ್ತು. ಆದರೆ ಸರ್ಕಾರ ವಕ್ಫ್ ಮಂಡಳಿಯಿಂದ ಆದೇಶಬಂದಿದೆ. ಅಬ್ದುಲ್ ಘನಿ ಅಧ್ಯಕ್ಷರೆಂದು ಆಯ್ಕೆ ಮಾಡಿದೆ. ಅಬ್ದುಲ್ ಘನಿ ಮತ್ತೊಮ್ಮೆ ಮಂದಹಾಸ ಬೀರಿzರೆ.