ಶಿವಮೊಗ್ಗದ ಕೋಟೆ ದೇವಳದಲ್ಲಿ ದುಶ್ಮನ್ ಶೂಟಿಂಗ್

825

ಶಿವಮೊಗ್ಗ: ಕೋಟೆ ದೇವಸ್ಥಾನದ ಅಂಗಳದಲ್ಲಿ ದುಶ್ಮನ್ ಚಲನ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಸಿನಿಮಾದ ಹೀರೋಯಿನ್ ಅಂಗಡಿ ಯೊಂದರಲ್ಲಿ ಖರೀದಿಸುವ ದೃಶ್ಯ ಚಿತ್ರೀಕರಣ ನಡೆಯುತ್ತಿದೆ.
ಚಿತ್ರೀಕರಣದ ಉದ್ಘಾಟನೆಯನ್ನ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಜಿಪಂ ಸದಸ್ಯ ಕಲಗೋಡು ರತ್ನಾಕರ್ ಕ್ಯಾಮೆರಾ ಆಕ್ಷನ್ ಮತ್ತು ಕಟ್ ಹೇಳಿzರೆ.
ಹೀರೋ ಜೀವನ್ ಕುಮಾರ್ ಮತ್ತು ಹಿರೋಯಿನ್ ಜನನಿ ಒಬ್ಬರಿಗೊಬ್ಬರು ಮುಖಾಮುಖಿ ಆಗುವ ದೃಶ್ಯ ಚಿತ್ರೀಕರಣಗೊಳ್ಳುತ್ತಿದೆ. ೧೫ ದಿನಗಳ ಕಾಲ ಚಿತ್ರೀಕರಣಕ್ಕಾಗಿ ತಂಡ ಶಿವಮೊಗ್ಗದಲ್ಲಿಯೇ ಉಳಿದು ಕೊಳ್ಳಲಿದೆ. ಜೋಗ ಹಾಗೂ ಜಿಯ ಐತಿಹಾಸಿಕ ಸ್ಥಳಗಳಲ್ಲಿ ಚಿತ್ರೀಕರಣ ನಡೆಯುವ ಸಾಧ್ಯತೆ ಇದೆ. ಭರವಸೆ ಮತ್ತು ದಂಡಪಿಂಡ ಚಿತ್ರದ ನಂತರ ನಿರ್ದೇಶಕ ಮುತ್ತು ದುಶ್ಮನ್ ಚಿತ್ರವನ್ನ ಕೈಗೆತ್ತಿಕೊಂಡಿzರೆ. ಹಾಸ್ಯ ಲೋಕದ ದಿಗ್ಗಜರಾದ ರಂಗಾಯಣ ರಘು ಹಾಗೂ ಕೆಂಪೇಗಡ ಚಿತ್ರದ ಪ್ರಮುಖ ಹಾಸ್ಯಕಲಾವಿದರಾಗಿ ನಟಿಸುತ್ತಿzರೆ.