ಶಿವಮೊಗ್ಗದಲ್ಲಿ ೫೬ ಮಂದಿಯ ಹೆಗಲೇರಿದ ಕೊರೋನಾ ೫೦ ಸೋಂಕಿತರು ಗುಣಮುಖ; ಈರ್ವರ ನಿಧನ

534

ಶಿವಮೊಗ್ಗ: ಜು.೨೬ರ ಇಂದು ಜಿಲ್ಲೆಯಲ್ಲಿ ೫೬ ಕೊರೋನ ಪಾಸಿಟಿವ್ ದೃಢಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೧,೩೧೫ಕ್ಕೇರಿದೆ. ಇಂದು ಗುಣಮುಖರಾದವರು ಸಂಖ್ಯೆ ೫೦ ಎಂದು ಜಿ ಹೆಲ್ತ್ ಬುಲಿಟಿನ್ ಪ್ರಕಟಿಸಿದೆ.
ಇಂದಿನ ಹೆಲ್ತ್ ಬುಲಿಟಿನ್‌ನಲ್ಲಿ ಪ್ರಕಟವಾದಂತೆ ಜಿಯಲ್ಲಿ ಈರ್ವ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಕೋವಿಡ್-೧೯ ಸೋಂಕಿನಿಂದ ಸತ್ತವರ ಸಂಖ್ಯೆ ೨೪ಕ್ಕೇರಿದೆ. ಇದುವರೆಗೂ ೨೫,೫೮೬ ಜನರನ್ನ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು ೨೪,೦೬೦ ಜನರಿಗೆ ಕೊರೋನ ನೆಗೆಟಿವ್ ಎಂದು ವರದಿ ಬಂದಿದೆ. ಆದರೆ ೧,೩೧೫ ಜನರಿಗೆ ಸೋಂಕು ಪತ್ತೆಯಾಗಿದೆ. ೨೧೧ ಜನರ ವರದಿ ಇನ್ನೂ ಬರಬೇಕಿದೆ.
ಜಿಲ್ಲೆಯಲ್ಲಿಂದು ಬರೋಬ್ಬರಿ ೫೦ಮಂದಿ ಸೋಂಕಿತರು ಕಿಲ್ಲರ್ ಕೊರೋನಾ ಗೆದ್ದುಬಂದಿದ್ದು ಈ ಮೂಲಕ ಗುಣಮುಖರಾದವರ ಸಂಖ್ಯೆ ೭೨೫ ಕ್ಕೇರಿದೆ. ಆದರೆ ೨೩೭ ಜನ ಸೋಂಕಿನಿಂದ ಬಳಲುತ್ತಿದ್ದು ಇವರುಗಳು ಮೆಗ್ಗಾನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿzರೆ.
೨೬೩ ಮಂದಿ ಸೋಂಕಿತರು ಕೊರೋನ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ೧೯ ಮಂದಿ ಖಾಸಗಿ ಆಸ್ಪತ್ರೆಯಲ್ಲೂ ಉಳಿದ ೪೭ ಜನ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿ zರೆ. ಇವರುಗಳ ಒಟ್ಟು ಸಂಖ್ಯೆ೫೬೬ ಕ್ಕೇರಿದೆ ಎಂದು ತಿಳಿದುಬಂದಿದೆ.
ಈ ೫೬೬ ಸೋಂಕಿತರು ಮತ್ತು ಇದುವರೆಗೂ ಗುಣಮುಖರಾದವರ ಸಂಖ್ಯೆ ೭೨೫ ಸೇರಿದರೆ ೧೨೯೧ ಸೋಂಕಿತರಿದ್ದು ಇದರ ಜೊತೆಗೆ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ೨೪ ಸೇರಿಸಿದರೆ ಒಟ್ಟು ೧೩೧೫ ಕೊರೋನ ಪಾಸಿಟಿವ್ ಸಂಖ್ಯೆ ಎಂದು ಜಿ ಹೆಲ್ತ್ ಬುಲಿಟಿನ್ ತಿಳಿಸುತ್ತದೆ. ಸುಮಾರು ೩೧೦ ಕಂಟೈನ್ಮೆಂಟ್ ಜೋನ್ ಗಳಿದ್ದು, ೫೮ ಜೋನ್‌ಗಳನ್ನು ಡಿನೋಟಿಫೈಡ್ ಮಾಡಲಾಗಿದೆ.
ಇಂದು ದೃಢಪಟ್ಟ ೫೬ ಕೊರೋನ ಪಾಸಿಟಿವ್ ಪ್ರಕರಣಗಳಲ್ಲಿ ಶಿವಮೊಗ್ಗ-೨೬, ಭದ್ರಾವತಿ-೯, ಶಿಕಾರಿಪುರ-೧೨, ಸೊರಬ-೫, ಸಾಗರ-೧, ಹೊಸನಗರ-೧, ತೀರ್ಥಹಳ್ಳಿ ಮತ್ತು ಹೊರ ಜಿಯಿಂದ ಬಂದು ಮೆಗ್ಗಾನ್‌ಗೆ ಸೇರಿದವರಲ್ಲಿ ತಲಾ ಓರ್ವರಲ್ಲಿ ಸೋಂಕುಪತ್ತೆಯಾಗಿದೆ ಎಂದು ಜಿ ಹೆಲ್ತ್ ಬುಲಿಟಿನ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.