ಶಿವಮೊಗ್ಗದಲ್ಲಿ ಗ್ಯಾಂಗ್ ರೇಪ್ …

369

ಶಿವಮೊಗ್ಗ: ಕೊರೊನಾ ಸೋಂಕಿತ ತಾಯಿಯ ಕಾಳಜಿಗಾಗಿ ಆಸ್ಪತ್ರೆಯಲ್ಲಿದ್ದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ದುರ್ಘಟನೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ನಡೆದಿದೆ.
ಡಿ.೫ರ ಶನಿವಾರ ರಾತ್ರಿ ಮೆಗ್ಗಾನ್ ಬೋಧನಾ ಆಸ್ಪತ್ರೆ (ಸಿಮ್ಸ್)ನಲ್ಲಿ ಅತ್ಯಾಚಾರ ಪ್ರಕರಣ ನಡೆದಿರುವುದು ವರದಿಯಾಗಿದ್ದು, ಆರೋಪಿಗಳಾದ ವಾರ್ಡ್‌ಬಾಯ್ ಮನೋಜ್, ಆತನ ಸ್ನೇಹಿತರಾದ ಪ್ರಜ್ವಲ್, ವಿನಯ್‌ನನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ಪೋಲೀಸರು ತನಿಖೆ ಮುಂದುವರೆಸಿzರೆ.
ಕೋವಿಡ್-೧೯ ಪೀಡಿತ ತಾಯಿ ಯನ್ನು ನೋಡಿಕೊಳ್ಳುವ ಸಲುವಾಗಿ ಕಳೆದ ಒಂದು ತಿಂಗಳಿಂದ ಸಂತ್ರಸ್ತ ಬಾಲಕಿ ಮೆಗ್ಗಾನ್ ಆಸ್ಪತ್ರೆಯಲ್ಲಿದ್ದಳು. ವಾರ್ಡ್ ಬಾಯ್ ಮನೋಜ್ ಪರಿಚಯವಾಗಿದ್ದು, ಆತ ಹೋಟೆಲ್ ನಿಂದ ಬಾಲಕಿಗೆ ಊಟ, ಉಪಹಾರ ತಂದುಕೊಡುತ್ತಿದ್ದ. ಕೋಮು ಗಲಭೆಯಿಂದಾಗಿ ಶಿವಮೊಗ್ಗ ನಗರ ಮೂರು ದಿನದಿಂದ ಸಂಪೂರ್ಣ ಬಂದ್ ಆಗಿತ್ತು. ಹಾಗಾಗಿ ಶನಿವಾರ ರಾತ್ರಿ ಊಟಕ್ಕೆ ಹೊರಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿzನೆ.
ಆತನನ್ನು ನಂಬಿದ ಬಾಲಕಿ ಜತೆಯಲ್ಲಿ ಹೋಗಿದ್ದು, ದುಷ್ಕೃತ್ಯಕ್ಕೆ ಸಿಲುಕಿzಳೆ. ಆರೋಪಿ ಮನೋಜ್ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ. ಅದಾದ ಬಳಿಕ ಆತನ ಮೂವರು ಸ್ನೇಹಿತರಾದ ಪ್ರಜ್ವಲ್, ವಿನಯ್ ಹಾಗೂ ಮತ್ತೊಬ್ಬ ನಿರಂತರವಾಗಿ ಅತ್ಯಾಚಾರ ಎಸಗಿzರೆ.
ಘಟನೆ ಬೆಳಕಿಗೆ ಬಂದಿದ್ದರಿಂದ ಶಿವಮೊಗ್ಗ ಜಿಯ ಜನತೆ ಬೆಚ್ಚಿಬಿದ್ದಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿzರೆ. ಶಿವಮೊಗ್ಗ ಮಹಿಳಾ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.