ಶಾಸಕ ರೇಣುಕಾಚಾರ್ಯರ ಜನಪರ ಕಾಳಜಿ ಮೆಚ್ಚಿ ಗ್ರಾಪಂನ ೮ಕ್ಕೆ ೮ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿದ ಮತದಾರರು: ರಂಗನಾಥ್

523

ಹೊಸನಾವಿಕ ನ್ಯೂಸ್
ಹೊನ್ನಾಳಿ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಸಾಸ್ವೇಹಳ್ಳಿ ಭಾಗದ ಅನೇಕ ಗ್ರಾಮಗಳ ಅಭಿವೃದ್ಧಿಗೆ ಕೋಟ್ಯಾಂತರ ರೂ.ಗಳ ಅನುದಾನ ತಂದು ಗ್ರಾಮಗಳ ಅಭಿವೃಧ್ಧಿ ಮಾಡಿದ್ದ ರಿಂದ ಸಾಸ್ವೇಹಳ್ಳಿ ಹೋಬಳಿಯ ಅನೇಕ ಗ್ರಾ.ಪಂ.ಗಳಲ್ಲಿ ಬಿಜೆಪಿ ಬೆಂಬಲಿತ ಅರ್ಭಯರ್ಥಿಗಳು ಗೆದ್ದಿzರೆ ಎಂದು ತಾಪಂ ಉಪಾಧ್ಯಕ್ಷ ಕುಳಗಟ್ಟೆ ರಂಗನಾಥ್ ತಿಳಿಸಿದರು.
ಹೊಸನಾವಿಕ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕ್ಯಾಸಿನಕೆರೆ ಗ್ರಾ.ಪಂ.ನಲ್ಲಿ ೮ ಕ್ಕೆ ೮ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿzರೆ ಎಂದ ಅವರು, ಕ್ಯಾಸಿನಕೆರೆ ಗ್ರಾಮದಲ್ಲಿ ಆರೋಗ್ಯಕೇಂದ್ರ, ಕುಡಿಯುವ ನೀರು, ಗ್ರಾಮದ ಎಸ್‌ಸಿ ಎಸ್‌ಟಿ ಕಾಲೂನಿಗಳಲ್ಲಿ ಹಾಗೂ ಇನ್ನಿತರ ಕೇರಿಗಳಲ್ಲೂ ಕಾಂಕ್ರಿಟ್ ರಸ್ತೆಗಳನ್ನು ಮಾಡಿಸಿರುವುದರಿಂದ ನಮ್ಮ ಶಾಸಕರ ಜನಪರ ಕಾಳಜಿ ಹಾಗೂ ಅಭಿವೃಧ್ಧಿ ಕಾರ್ಯಗಳನ್ನು ಮೆಚ್ಚಿ ನಮ್ಮ ೮ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟಿzರೆ ಎಂದರು.
ತಾಲೂಕಿನಲ್ಲಿ ಬಹುತೇಕ ಗ್ರಾಪಂ ಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿzರೆ ಎಂದು ಅವರು ತಿಳಿಸಿದರು.
ನೂತನ ಗ್ರಾ.ಪಂ. ಸದಸ್ಯರಾದ ಕೆ.ಜಿ.ಶಿವಮೂರ್ತಿ, ಚಂದ್ರಶೇಖರ್, ಬಿ.ಎಂ. ಕುಮಾರ್, ಕೆ. ಎಚ್. ಮಂಜುನಾಥ್, ಪವಿತ್ರಬಾಯಿ, ಕಾವ್ಯ, ಸುಜಾತ, ಯಶೋಧ ಅವರುಗಳು ಮಾತನಾಡಿ, ಗ್ರಾಮಗಳ ಅಭಿವೃಧ್ಧಿಗಾಗಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಜೊತೆ ಚರ್ಚಿಸಿ, ಇಡೀ ತಾಲೂಕಿನಲ್ಲಿ ಮಾದರಿ ಗ್ರಾಮ ಪಂಚಾಯಿತಿ ಮಾಡುತ್ತೇವೆ ಎಂದು ಒಕ್ಕೊರಲಿನಿಂದ ನುಡಿದರು.
ಬಜೆಪಿ ಜಿ ರೈತ ಮೋಚಾ ಕಾರ್ಯದರ್ಶಿ ಹರ್ಷ ಪಟೇಲ್, ಬಿಜೆಪಿ ಮುಖಂಡರಾದ ಎಚ್.ಪರಮೇಶ್ವರಪ್ಪ,ಬಿ.ನಾಗರಾಜ್, ನಟರಾಜ್, ವೀರೇಶ್, ಅರುಣ್‌ಕುಮಾರ್, ಪ್ರಸನ್ನ, ಬಸಪ್ಪ, ಹಾಲೇಶ್, ರುದ್ರೇಶ್, ಎನ್.ವಿ. ನಾಗರಾಜ್, ಅನುಸುಯ ಮಲ್ಲಿಕಾರ್ಜುನ್, ಹನುಮಂತ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.