ವೈಶಿಷ್ಟ್ಯತೆಗಳ ಮೂಲಕ ಪಂಚಮಸಾಲಿ ಸಮಾಜ ವಿಶೇಷ ಸ್ಥಾನ ಗಳಿಸಿದೆ: ಡಾ| ರಾಜ್‌ಕುಮಾರ್

70

ಹೊನ್ನಾಳಿ: ಸಮಾಜ ಸಂಘಟನೆಗೆ ಎಲ್ಲರೂ ಶ್ರಮಿಸ ಬೇಕು. ತಮ್ಮ ಅಮೂಲ್ಯ ಸಮಯ ದಲ್ಲಿ ಕೆಲ ಹೊತ್ತನ್ನು ಸಮಾಜ ಕ್ಕಾಗಿಯೇ ಮೀಸಲಿಡ ಬೇಕು ಎಂದು ಖ್ಯಾತ ವೈದ್ಯ, ತಾಲೂಕು ಪಂಚಮಸಾಲಿ ಸಮಾಜದ ಗೌರವಾಧ್ಯಕ್ಷ ಡಾ. ಎಚ್.ಪಿ. ರಾಜ್‌ಕುಮಾರ್ ಹೇಳಿದರು.
ಪಟ್ಟಣದ ಪೇಟೆ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಪದಾಧಿಕಾರಿ ಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ನಾಡಿನಲ್ಲಿ ತನ್ನದೇ ಆದ ವೈಶಿಷ್ಟ್ಯತೆ ಮೂಲಕ ಪಂಚಮಸಾಲಿ ಸಮಾಜ ವಿಶೇಷ ಸ್ಥಾನ ಗಳಿಸಿಕೊಂಡಿದೆ. ಸಮಾಜದ ಭವ್ಯ ಪರಂಪರೆಯನ್ನು ಮುಂದು ವರೆಸಿಕೊಂಡು ಹೋಗುವ ಗುರುತರ ಜವಾಬ್ದಾರಿ ಎಲ್ಲರದಾ ಗಿದೆ. ಆ ಹಿನ್ನೆಲೆಯಲ್ಲಿ ಎಲ್ಲರೂ ತಮ್ಮೊಳಗಿನ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಸಮಾಜದ ಹಿತಕ್ಕಾಗಿ ಒಗ್ಗಟ್ಟಿನಿಂದ ದುಡಿಯಬೇಕು ಎಂದು ಕರೆ ನೀಡಿದರು.
ಚುನಾವಣಾಧಿಕಾರಿ ಎಚ್. ಬಸವರಾಜ್(ಕಾಯಿ ಬಸಣ್ಣ), ಚನ್ನಬಸಪ್ಪ ಬೆನಕನಹಳ್ಳಿ, ಕುಂಕೋದ ಸೋಮಣ್ಣ, ಒಡೆಯರಹತ್ತೂರು ಅಶೋಕ್, ಗೌಡರ ಬಸವರಾಜ್, ಎಚ್.ಸಿ. ಮತ್ಯುಂಜಯ ಪಾಟೀಲ್, ಪಟ್ಟಣಶೆಟ್ಟಿ ವಿಜಯ್, ಟೆಲಿಫೋನ್ ವೀರೇಶ್, ಪಂಚಮಸಾಲಿ ಸಮಾಜದ ನಗರ ಘಟಕದ ಅಧ್ಯಕ್ಷ ಹೋಟೆಲ್ ಗಿರೀಶ್ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಆಯ್ಕೆ: ತಾಲೂಕು ಪಂಚಮ ಸಾಲಿ ಸಮಾಜದ ಅಧ್ಯಕ್ಷರಾಗಿ ಬೆನಕನಹಳ್ಳಿ ವೀರಪ್ಪ ಪಟ್ಟಣಶೆಟ್ಟಿ ಆಯ್ಕೆಯಾಗಿದ್ದು, ಇತರ ಪದಾಧಿಕಾರಿಗಳ ವಿವರ ಇಂತಿದೆ:
ಪಲ್ಲವಿ ರಾಜು ಹಿರೇಮಠ, ಸಿದ್ಧೇಶ್ ಹನುಮನಹಳ್ಳಿ, ಹಾಲೇಶ್ ಬಳ್ಳೇಶ್ವರ, ಬಸವರಾಜಪ್ಪ ಹಿರೇಮಠ(ಉಪಾಧ್ಯಕ್ಷರು), ಕುಂಕೋದ ಹಾಲೇಶ್(ಪ್ರಧಾನ ಕಾರ್ಯದರ್ಶಿ), ಚಂದ್ರಶೇಖರ ಚನ್ನಮುಂಭಾಪುರ, ಕೆ.ವಿ. ಪ್ರಸನ್ನ (ಕಾರ್ಯದರ್ಶಿಗಳು), ಪೇಟೆ ಎಚ್.ಡಿ. ಪ್ರಶಾಂತ್ (ಖಜಂಚಿ), ನಾಗೇಶ್ ನಾಡಿಗ್, ಶುಂಠಿ ಗಣೇಶಪ್ಪ, ಶುಂಠಿ ಕರಿಬಸಪ್ಪ, ರಮೇಶ್ ರಾಂಪುರ, ಹರೀಶ್ ರಾಂಪುರ, ಚನ್ನೇಶ ಬಣಕಾರ ಹೊಳೆಹರಳಹಳ್ಳಿ, ಪವಿತ್ರಪ್ಪ, ಗುರುರಾಜ್ ರಾಂಪುರ, ಪ್ರಭುದೇವ ಚಿಕ್ಕಬಾಸೂರು, ಇಡ್ಲಿ ಗಾಡಿ ಶಿವಣ್ಣ, ಸಿದ್ಧಪ್ಪ ನಾಡಿಗ್, ಮಂಜುನಾಥ್ ರಾಂಪುರ, ಮಮತ ಕತ್ತಿಗೆ, ಭಾರತಿ ಮಾರಿಕೊಪ್ಪ (ಸದಸ್ಯರು). ಎಚ್. ಬಸವರಾಜ್(ಕಾಯಿ ಬಸಣ್ಣ), ಪಟ್ಟಣಶೆಟ್ಟಿ ವಿಜಯ ಕುಮಾರ್, ಭಾರತಿ ಕತ್ತಿಗೆ ಅವರನ್ನು ಜಿ ಸಮಿತಿಗೆ ಆಯ್ಕೆ ಮಾಡಲಾಯಿತು.