ವೈದ್ಯರಲ್ಲಿ ನಾರಾಯಣನ ಕಾಣುವ ಜನತೆಗೆ ಸಂಕಷ್ಟಗಳಿಂದ ಪಾರುಮಾಡುವ ಪರಮೇಶ್ವರನ ಪಠಿಸಲು ಪುರುಸೋತ್ತಿಲ್ಲ: ಡಾ|ಮತ್ತೂರು

501

ಸಾಗರ : ಪ್ರಸ್ತುತ ಸಂದರ್ಭದಲ್ಲಿ ಜಗತ್ತಿನ ಅತಿಹೆಚ್ಚು ಜನರು ಕೊರೋನಾ ಹಿನ್ನೆಲೆಯಲ್ಲಿ ವೈದ್ಯರ ಹತ್ತಿರ ಓಡುವ ಸ್ಥಿತಿ ನಿರ್ಮಾಣವಾಗಿದೆ. ವೈದ್ಯರಲ್ಲಿಯೆ ನಾರಾಯಣನನ್ನು ಕಾಣುತ್ತಿರುವ ಜನರಿಗೆ ನಮ್ಮನ್ನು ಎಲ್ಲ ಸಂಕಷ್ಟಗಳಿಂದ ರಕ್ಷಿಸುವ ಪರಮೇಶ್ವರನನ್ನು ಪಠಿಸಲು ಪುರುಷೊತ್ತು ಇಲ್ಲದಂತೆ ಆಗಿದೆ ಎಂದು ಡಾ. ಸನತ್ ಕುಮಾರ್ ಮತ್ತೂರು ಹೇಳಿದರು.
ಇಲ್ಲಿನ ರಾಘವೇಶ್ವರ ಸಭಾಭವನ ದಲ್ಲಿ ರಾಘವೇಶ್ವರ ಸಭಾಭವನ ಸಮಿತಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಜೋಷಿ ಫೌಂಡೇಶನ್ ಹಾಗೂ ವಿವಿಧ ವಿಪ್ರ ಸಂಘಟನೆಗಳ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥ ವಾಗಿ ಹಮ್ಮಿಕೊಳ್ಳಲಾಗಿದ್ದ ಮಹಾರುದ್ರ ಪಾರಾಯಣದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಅನೇಕ ಸಂದರ್ಭದಲ್ಲಿ ನಮ್ಮ ಅಂತಃಶಕ್ತಿಯ ಪರೀಕ್ಷೆ ನಡೆಯುತ್ತದೆ. ಎಲ್ಲ ಕಾಯಿಲೆಯೂ ಔಷಧಿಯಿಂದ ಕಡಿಮೆ ಆಗುವುದಿಲ್ಲ. ಇಂತಹ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಿ ಸತತವಾಗಿ ರುದ್ರ ಪಾರಾಯಣ ಮಾಡುವುದರಿಂದ ನಮ್ಮ ಸುತ್ತಲೂ ಧಾರ್ಮಿಕ ತರಂಗವೊಂದು ಸೃಷ್ಟಿಯಾ ಗುತ್ತದೆ. ಈ ತರಂಗದೊಳಗೆ ಯಾವುದೇ ವೈರಾಣುಗಳು ಪ್ರವೇಶ ಮಾಡುವು ದಿಲ್ಲ. ಎಂತಹ ಕಾಯಿಲೆ ಬಂದರೂ ಅದನ್ನು ಎದುರಿಸುವ ಆತ್ಮಶಕ್ತಿ ವದ್ದಿಸಿಕೊಳ್ಳಲು ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಕೊರೋನಾ ಸೋಂಕಿನಿಂದ ದೇಶದಲ್ಲಿ ಸಾವಿರಾರು ಜನರು ಸಾಯುತ್ತಿzರೆ. ಕೈತೊಳೆಯಿರಿ, ಮಾಸ್ಕ್ ಧರಿಸಿರಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎನ್ನುವ ಮಾತು ಕೇಳುತ್ತಲೇ ಇದ್ದೇವೆ. ಇನ್ನೆಷ್ಟು ದಿನ ಇದೇ ಪರಿಸ್ಥಿತಿ ಮುಂದುವರೆ ಯುತ್ತದೆಯೋ ಗೊತ್ತಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವ ಜೊತೆಗೆ ಕುಟುಂಬ ಹಾಗೂ ಸಮೂಹವನ್ನು ರಕ್ಷಣೆ ಮಾಡಿಕೊಳ್ಳಬೇಕಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಮ.ಸ.ನಂಜುಂಡಸ್ವಾಮಿ ಮತ್ತು ತಂಡದವರು ರುದ್ರ ಪಾರಾಯಣವನ್ನು ಅತ್ಯಂತ ಶ್ರದ್ಧೆ ಯಿಂದ ನಡೆಸಿಕೊಂಡು ಬರುತ್ತಿzರೆ. ರುದ್ರ ಪಾರಾಯಣದ ಹಿಂದೆ ಸಮೂಹದ ಒಳಿತಿನ ಚಿಂತನೆಯಿದೆ ಎಂದು ಹೇಳಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪ್ರಧಾನ ವಕ್ತಾರ ಮಾ.ಸ. ನಂಜುಂಡಸ್ವಾಮಿ ಮಾತನಾಡಿ, ಕೊರೋನಾದಂತಹ ಸಂದರ್ಭದಲ್ಲಿ ಮನುಷ್ಯ ಸಂಬಂಧಗಳ ನಡುವೆ ಕಂದಕ ಸೃಷ್ಟಿಯಾಗುತ್ತಿದೆ. ಇಂತಹ ಸಂಕೀರ್ಣ ಕಾಲಘಟ್ಟದಲ್ಲಿ ನಾವು ಹೆಚ್ಚು ಜಗ್ರತೆಯಿಂದ ಸಂಬಂಧಗಳನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಬೇಕು. ಕಳೆದ ನಾಲ್ಕು ತಿಂಗಳಿನಿಂದ ವಿಪ್ರ ಸಂಘಟನೆಗಳ ಆಶ್ರಯದಲ್ಲಿ ರುದ್ರ ಪಾರಾಯಣ ನಿರಂತರವಾಗಿ ನಡೆಸಿಕೊಂಡು ಬರಲಾ ಗುತ್ತಿದೆ. ಇದಕ್ಕೆ ಸಹಕಾರ ನೀಡುತ್ತಿರುವ ಎಲ್ಲರಿಗೂ ವಿಪ್ರ ಸಂಘಟನೆಗಳು ಕತಜ್ಞತೆ ಸಲ್ಲಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ವಿಪ್ರ ನೌಕರರ ಕ್ಷೇಮಾಭಿವದ್ದಿ ಸಂಘದ ಅಧ್ಯಕ್ಷ ವೈ.ಮೋಹನ್, ಪ್ರಮುಖರಾದ ರಾಜಶ್ರೀ ಸದಾಶಿವ, ಗಜನನ ಭಟ್ ರೇವಣಕಟ್ಟಾ, ಬದರಿನಾಥ್, ಹು.ಭಾ.ಅಶೋಕ್, ಪ್ರಕಾಶ್ ಭಟ್, ಛಾಯಾಪತಿ, ಮುರಳಿಧರ ಹತ್ವಾರ್, ಜನಾರ್ದನ್ ಉಡುಪ, ನಾರಾಯಣ ಮೂರ್ತಿ, ಎಚ್.ಜಿ.ಸುಬ್ರಹ್ಮಣ್ಯ ಭಟ್ ಇನ್ನಿತರರು ಹಾಜರಿದ್ದರು.