ವೈದ್ಯಕೀಯ ಕ್ಷೇತ್ರಕ್ಕೆ ಡಾ|ಹುಲ್ಲಮನಿ ಕೊಡುಗೆ ಅಪಾರ: ಡಾ| ಬಿರಾದಾರ್

420

ಶಿವಮೆಗ್ಗ: ವೈದ್ಯಕೀಯ ಸಾಹಿತ್ಯ ಮತ್ತು ಸಾಹಿತ್ಯಕಾರ್ಯ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದವರು ಡಾ.ಮಶ ಹುಲ್ಲಮನಿ ಎಂದು ಶಸ್ತ್ರಚಿಕಿತ್ಸಕ ಡಾ.ಬಿರಾದಾರ್‌ಅಭಿಪ್ರಾಯಪಟ್ಟರು.
ನಗರದ ಗೋಪಿಶೆಟ್ಟಿಕೊಪ್ಪ ದಲ್ಲಿರುವ ಸಾಹಿತ್ಯ ಭವನದಲ್ಲಿ ಜಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ಡಾ.ಮಶ್ ಹುಲ್ಲಮನಿಯವರಿಗೆ ನುಡಿ ನಮನ, ಡಾ.ಜಿ.ಎಸ್. ಶಿವರುದ್ರಪ್ಪ ದತ್ತಿ ಕಾರ್ಯಕ್ರಮ ಹಾಗೂ ಜಿ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರಕ್ಕೆ ಮಶ್ ಹುಲ್ಲಮನಿಯವರ ಕೊಡುಗೆ ಅಪಾರವಾಗಿದ್ದು, ಯಾವುದೇ ಸಾಹಿತ್ಯ ಕಾರ್ಯಕ್ರಮಗಳಿದ್ದರೂ ಅತ್ಯಂತ ಪ್ರೀತಿ ವಿಶ್ವಾಸವಿಂದ ಸಹಕರಿಸಿ ಪ್ರೋತ್ಸಾಹದಿಂದ ತೊಡಗಿಸಿ ಕೊಂಡಿದ್ದರು ಎಂದು ತಿಳಿಸಿದರು.
ನಾಲ್ಕೈದು ದಶಕಗಳ ಓಡನಾಟ ದಲ್ಲಿ ಮಶ್ ಹುಲ್ಲಮನಿಯವರ ಸೇವಾ ಚಟುವಟಿಕೆ, ಸಾಮಾಜಿಕ ಕಳಕಳಿ, ಸಂಘಟನಾ ಕೌಶಲ್ಯ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಸೇವಾ ಸಾಧನೆಗಳನ್ನು ಕಣ್ಣಾರೆ ಕಂಡಿದ್ದೇನೆ. ಸಾಮಾಜಿಕ ಸೇವಾ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತಿದ್ದರು ಎಂದು ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ವಿಜಯಾ ಶ್ರೀಧರ್, ಪ್ರಕೃತಿ ವರ್ಣನೆ ಹಾಗೂ ವೈಚಾರಿಕ ನೆಲೆಗಟ್ಟಿನ ಸಾಹಿತ್ಯವನ್ನು ರಾಷ್ಟ್ರಕವಿ ಕುವೆಂಪು ಹಾಗೂ ಡಾ.ಜಿ.ಎಸ್. ಶಿವರುದ್ರಪ್ಪ ಅವರ ಕೃತಿಗಳಲ್ಲಿ ಕಾಣಬಹುದಾಗಿದೆ. ಗುರು ಶಿಷ್ಯರ ಭಾಂದವ್ಯ ಹೊಂದಿದ್ದ ಇಬ್ಬರು ರಾಷ್ಟ್ರಕವಿಗಳ ಕೃತಿಗಳಲ್ಲಿ ಪ್ರಕೃತಿಯ ಬಗ್ಗೆ ವಿವರಿಸುವ ರೀತಿ ಅದ್ಭುತವಾಗಿರುತ್ತಿತ್ತು ಎಂದು ಹೇಳಿದರು.
ಕೆಲವೊಮ್ಮೆ ಪ್ರಕೃತಿ ಕುರಿತಾದ ಸಾಹಿತ್ಯ ಓದುತ್ತಿದ್ದರೆ ಇದು ಕುವೆಂಪು ಅವರz, ಜಿಎಸ್‌ಎಸ್ ಅವರz ಎಂಬಂತೆ ಭಾಸವಾಗುತ್ತಿತ್ತು. ಇನ್ನೂ ಸ್ವಾಮಿ ವಿವೇಕಾನಂದ ಹಾಗೂ ರಾಮಕೃಷ್ಣ ಪರಮಹಂಸರ ಪ್ರಭಾವವು ಕುವೆಂಪು ಮತ್ತು ಡಾ.ಜಿ.ಎಸ್. ಶಿವರುದ್ರಪ್ಪ ಅವರ ಮೇಲೂ ಬೀರಿತ್ತು ಎಂದು ತಿಳಿಸಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಧ್ಯಕ್ಷ ಡಿ.ಬಿ. ಶಂಕರಪ್ಪ ಮಾತನಾಡಿ, ಮಶ್ ಹುಲ್ಲಮನಿಯವರು ಜಿದ್ಯಂತ ಖ್ಯಾತಿ ಗಳಿಸಿದ್ದರು. ಜಿಗೆ ಆಗಮಿಸುವ ಸಾಹಿತಿಗಳಿಗೆ ಸದಾ ಆತಿಥ್ಯ ವಹಿಸುತ್ತಿದ್ದರು. ಜಿ ಕನ್ನಡ ಸಾಹಿತ್ಯ ಪರಿಷತ್‌ನ ಎಲ್ಲಕಾರ್ಯ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿದ್ದರು ಎಂದು ಸ್ಮರಿಸಿದರು.
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರು ಶಿವಮೊಗ್ಗ ಜಿಯವರು. ಅವರಿಗೆ ಶಿವಮೊಗ್ಗ ಜಿಯಲ್ಲಿ ಸಿಗಬೇಕಾದ ಗೌರವ ಸಿಗಲಿಲ್ಲ ಎನಿಸುತ್ತದೆ. ಜಿ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ತೀರ್ಮಾನದಂತೆ ಇಲ್ಲಿಯ ಸಾಹಿತ್ಯ ಗ್ರಾಮದ ಸಭಾಭವನಕ್ಕೆ ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ ಅವರ ಹೆಸರಿಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಜಿ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳು ಕವನ ವಾಚನದಂತಹ ಅದಕ್ಕೆ ಸಿಗುವ ಪ್ರತಿಕ್ರಿಯೆಗಳನ್ನು ಆಲಿಸಬೇಕು. ವಿಮರ್ಶೆಯಿಂದ ಸಿಗುವ ಸಲಹೆಗಳನ್ನು ಧನಾತ್ಮಕವಾಗಿ ಸ್ವೀಕರಿಸಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮನೋವೈದ್ಯ ಡಾ|ರಿಯಾಜ್ ಭಾಷಾ ಅವರು ಮಶ್ ಹುಲ್ಲಮನಿ ಅವರ ಕುರಿತು ಮಾತನಾಡಿದರು. ತೀರ್ಥಹಳ್ಳಿಯ ತುಂಗಾ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಕೆ.ಅಂಜನಪ್ಪ ದತ್ತಿ ಉಪನ್ಯಾಸ ನೀಡಿದರು.
ಜಿ ಕಸಾಪ ಕಾಂiiದರ್ಶಿ ಎಂ.ಎನ್. ಸುಂದರರಾಜ್, ಕೋಶಾಧ್ಯಕ್ಷೆ ಚಂದ್ರಕಲಾ ಅರಸ್, ತಾಲೂಕು ಕಸಾಪ ಕಾರ್ಯದರ್ಶಿ ಚನ್ನಬಸಪ್ಪ ನ್ಯಾಮತಿ, ಹಸನ್ ಬೆಳ್ಳಿಗನೂಡು, ಜಿ.ಎಸ್.ಅನಂತ, ಸುಮಿತ್ರಮ್ಮ ಮತ್ತಿತರರಿದ್ದರು.