ವೀಕೆಂಡ್ ಕರ್ಫ್ಯೂ: ಸರ್ಕಾರದ ಕರೆಗೆ ಸಾಥ್ ನೀಡಿದ ಪಟ್ಟಣದ ಜನತೆ

275

ಹೊನ್ನಾಳಿ: ಕೊರೋನಾ ವೈರಸ್ ೨ನೇ ಆಲೆ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕ್ರಮಗಳನ್ನು ತೆಗೆದು ಕೊಂಡು ಇದರ ಅನ್ವಯ ಶುಕ್ರವಾರ ರಾತ್ರಿ ೯ ಗಂಟೆಯಿಂದ ಸೋಮವಾರ ಬೆಳಗ್ಗೆ ೬ ಗಂಟೆಯವರೆಗೆ ಜರಿಗೆ ತಂದಿರುವ ವೀಕೆಂಡ್ ಕರ್ಫ್ಯೂ ತಾಲೂಕಿನಲ್ಲಿ ಯಶಸ್ವಿಯಾಗಿ ಇಡೀ ತಾಲೂಕಿನಲ್ಲಿ ಸ್ಮಶಾನ ಮನ ಆವರಿಸಿತ್ತು.
ವಿಕೇಂಡ್ ಕರ್ಫ್ಯೂ ಕಾರಣ ಶುಕ್ರವಾರ ರಾತ್ರಿ ೯ ಗಂಟೆಯಿಂದ ಪೊಲೀಸರು ಪಟ್ಟಣದಲ್ಲಿ ವಾಹನ ಗಳಲ್ಲಿ ಗಸ್ತು ತಿರುಗುತ್ತಾ ಔಷಧಿ, ಅಂಗಡಿ, ಇತರೆ ಅಗತ್ಯ ವಸ್ತುಗಳ ಹೊರತು ಪಡಿಸಿ ಇನ್ನಿತರೆ ಎ ರೀತಿಯ ಅಂಗಡಿಮುಗ್ಗಟ್ಟುಗಳನ್ನು ಮುಚ್ಚುವಂತೆ ಧ್ವನಿವರ್ಧಕದ ಮೂಲಕ ಸಾವಜನಿಕರಿಗೆ ತಿಳಿಸುತ್ತಾ ಅಂಗಡಿಗಳ ಬಾಗಿಲುಗಳನ್ನು ಮುಚ್ಚಿಸಿದರು.
ಇದರ ಪರಿಣಾಮವಾಗಿ ಶನಿವಾರ ಯಶಸ್ವಿ ಕಂಡ ಲಾಕ್‌ಡೌನ್ ಪರಿಸ್ಥಿತಿ ಭಾನುವಾರ ಕೂಡ ಮುಂದುವರೆದಿತ್ತು. ಹೊನ್ನಾಳಿ ಪಟ್ಟಣದಲ್ಲಿ ಯಾವುದೇ ಬಸ್ ಇತರೆ ವಾಹನಗಳ ಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಭಾನುವಾರ ಬೆಳಗ್ಗೆ ಆರಂಭದಲ್ಲಿ ಬೆರಳೆಣಿಕೆಯಷ್ಟು ದೂರದ ಊರುಗಳ ಸಂಚಾರದ ಕೆ.ಎಸ್.ಆರ್.ಟಿ.ಸಿ. ಬಸ್‌ಗಳು ಸಂಚರಿಸಿದ್ದನ್ನು ಬಿಟ್ಟರೆ ಒಂದೇ ಒಂದು ಖಾಸಗಿ ಬಸ್‌ಗಳು ರಸ್ತೆಗೆ ಇಳಿಯದೇ ನಿಂತಿದ್ದವು.
ವಿಕೇಂಡ್ ಕರ್ಪ್ಯೂ ಹಿನ್ನಲೆಯಲ್ಲಿ ಜನರು ತಮ್ಮ ಮನೆಗಳಲ್ಲಿಯೇ ಉಳಿದ ಕಾರಣ ಪ್ರಯಾಣಿಕರಿಲ್ಲದೆ ಎ ಖಾಸಗಿ ಬಸ್‌ಗಳನ್ನು ರಸ್ತೆಗೆ ಇಳಿಸದೇ ಸ್ಥಳೀಯ ಪೆಟ್ರೋಲ್ ಬಂಕ್‌ಗಳ ಅವರಣದಲ್ಲಿ ನಿಲುಗಡೆಗೊಳಿಸಲಾಗಿತ್ತು.
ಆಟೋಗಳು ಕೂಡ ಸಹಜವಾಗಿ ಬಸ್ ನಿಲ್ದಾಣಗಳಿಗೆ ಬರದೆ ತಮ್ಮ ಸಂಚಾರವನ್ನು ಸ್ಥಗಿತಗೊಳಿಸಿದ್ದವು.
ತರಕಾರಿ, ಅಗತ್ಯ ವಸ್ತುಗಳನ್ನು ಖರೀದಿಸಲು ಜನರ ಪರದಾಟ: ವಿಕೇಂಡ್ ಕರ್ಪೂ ಜೊತೆಗೆ ಭಾನುವಾರವಾದ ಕಾರಣ ತರಕಾರಿ ಹಾಗೂ ದಿನಸಿಅಂಗಡಿಗಳು ತೆರೆಯದೇ ಹಲವರು ಬೆಳಗ್ಗೆಯೇ ತರಕಾರಿ ತರಲು ತರಕಾರಿ ಮಾರುಕಟ್ಟೆಗೆ ಬಂದು ತರಕಾರಿ ಸಿಗದೇ ನಾಗರಿಕರು ವಾಪಾಸ್ ತೆರಳುತ್ತಿದ್ದರು.ಇದೇ ರೀತಿ ತಾಲೂಕಿನ ಹೋಬಳಿ ಕೇಂದ್ರಗಳಲ್ಲಿ ಕೂಡ ವಿಕೇಂಡ್ ಕರ್ಪ್ಯೂ ಯಶ್ವಸ್ವಿಯಾಗಿದೆ.