ವಿಶೇಷ ಪ್ಯಾಕೇಜ್ ಘೋಷಿಸಿ: ಯುವಕಾಂಗ್ರೆಸ್ ಆಗ್ರಹ

520

ಶಿವಮೊಗ್ಗ: ಕರೋನಾ ಲಾಕ್ ಡೌನ್‌ನಿಂದ ತತ್ತರಿಸಿರುವ ಜನಸಾಮಾನ್ಯರಿಗೆ ವಿಶೇಷ ಪ್ಯಾಕೇಜ ಘೋಷಣೆಗೆ ಆಗ್ರಹಿಸಿ ಯುವ ಕಾಂಗ್ರೆಸ್‌ನಿಂದ ಇಂದು ಡಿಸಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.
ಕರೋನಾ ಮಹಾಮಾರಿ ಲಾಕ್‌ಡೌನ್‌ನಿಂದ ಕೋಟ್ಯಾಂತರ ಕೃಷಿ, ಕಾರ್ಮಿಕರು, ಕುಶಲಕರ್ಮಿ ಗಳು, ಸವಿತಾ ಸಮಾಜದವರು, ಮಡಿವಾಳರು, ಬಡಗಿಗಳು, ಕುಂಬಾರರು, ನೇಕಾರರು, ಚಮ್ಮಾರರು, ಬೀದಿ ಬದಿಯ ವ್ಯಾಪಾರಿಗಳು, ಆಟೋ, ಕ್ಯಾಬ್, ಟ್ರಕ್, ಲಾರಿ ಚಾಲಕರು, ಕ್ಲೀನರ್ ಗಳು,ಅಡುಗೆ ಕೆಲಸದವರು, ಹಮಾಲಿಗಳು, ಸಣ್ಣ ವ್ಯಾಪಾರಸ್ಥರು, ನಿತ್ಯದ ದುಡಿಮೆ ಅವಲಂಬಿಸಿ ಬದುಕು ತ್ತಿದ್ದವರು ಈಗ ದುಡಿಮೆಯಿಲ್ಲದೇ ಅವರ ಕುಟುಂಬಗಳು ತೀವ್ರ ರೀತಿಯ ಸಂಕಷ್ಟಕ್ಕೆ ಗುರಿಯಾಗಿವೆ. ಈ ವರ್ಗಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಅದೇ ರೀತಿ ಶಿವಮೊಗ್ಗ ಜಿಯಲ್ಲೂ ಸಹ ೧೪ ಸಾವಿರಕ್ಕೂ ಅಧಿಕ ಹೆಚ್ಚು ಆಟೊ ಚಾಲಕರು ೧೨ ಸಾವಿರಕ್ಕೂ ಹೆಚ್ಚು ಲಾರಿ ಚಾಲಕರು ಹಾಗೂ ಕ್ಲೀನರ್‌ಗಳು, ಇತರೆ ಎ ಸ್ತರದ ವ್ಯಾಪಾರಸ್ಥರ ಹಾಗೂ ಕಾರ್ಮಿ ಕರ ಸಂಕಷ್ಟಕ್ಕೆ ಸರ್ಕಾರ ಧಾವಿಸಿ ನೆರವು ನೀಡಲು ಆಗ್ರಹಿಸಿದರು.
ಜೊತೆಗೆ ನೋಂದಾಯಿತ ಅಸಂಘಟಿತ ಕಾರ್ಮಿಕರ ಖಾತೆಗೆ ಹಣವನ್ನು ಸರ್ಕಾರ ಜಮಾ ಮಾಡು ತ್ತಿದ್ದು. ಆದರೆ ಕೆಲವೇ ಬೆರಳಿಕೆಯಷ್ಟು ಜನರಿಗೆ ಈ ಯೋಜನೆಯು ತಲುಪುತ್ತಿದ್ದು. ಈ ಬಗ್ಗೆ ಗಮನಿಸುವಂತೆ ಆಗ್ರಹಿಸಿದರು.
ಯುವ ಕಾಂಗ್ರೆಸ್ ನಗರ ಸಮಿತಿ ಅಧ್ಯಕ್ಷ ಎಚ್.ಪಿ. ಗಿರೀಶ್, ಜಿ ಯುವ ಕಾಂಗ್ರೆಸ್ ಅಧ್ಯಕ್ಷ ಎಂ ಪ್ರವೀಣ್ ಕುಮಾರ್ ಪ್ರಮುಖರಾದ ಆರ್. ಕಿರಣ್,ಟಿ.ವಿ. ರಂಜಿತ್, ಚಂದ್ರು ಗೆಡ್ಡೆ ನಿತಿನ್, ಕುಮರೇಶ್ ಸತೀಶ್ ಶ್ರೇಯಸ್ ಗಣೇಶ್, ವೆಂಕಟೇಶ, ಪ್ರಭು ಇನ್ನಿತರರಿದ್ದರು.