ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ

492

ಬೆಂಗಳೂರು, ಮಾ.೨೪: ಕೋವಿಡ್-೧೯ ಸೋಂಕಿನ ಕಾರಣ ಲಾಕ್‌ಡೌನ್ ಘೋಷಿಸಿದ ಪರಿಣಾಮ ನಷ್ಟ ಅನುಭವಿಸುತ್ತಿರುವ ಬಡವರಿಗೆ ನೆರವಾಗುವ ರೀತಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೋವಿಡ್-೧೯ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಮಾತನಾಡುತ್ತಾ ಬಿ.ಎಸ್. ಯಡಿಯೂರಪ್ಪ ವಿಶೇಷ ಪ್ಯಾಕೇಜ್ ಘೋಷಿಸಿದರು. ಇದರಂತೆ ರಾಜ್ಯದ ೨೧ ಲಕ್ಷ ಕಟ್ಟಡ ಕಾರ್ಮಿಕರಿಗೆ ತಿಂಗಳಿಗೆ ತಲಾ ಒಂದು ಸಾವಿರ ಪರಿಹಾರ ಧನ ನೀಡಲಾಗುವುದು.

ಬಡವರ ಬಂಧು ಯೋಜನೆಯ ಸಾಲಮನ್ನಾ, ಎರಡು ತಿಂಗಳ ಪಡಿತರ ಮುಂಗಡ ನೀಡಲು ಕ್ರಮ, ಸಾಮಾಜಿಕ ಭದ್ರತಾ ಪಿಂಚಣಿ ಮುಂಗಡ, ಎರಡು ತಿಂಗಳ ಮಾನವ ದಿನಗಳ ಬಾಬ್ತು ನೀಡಲಾಗುವುದು ಎಂದು ಘೋಷಿಸಿದರು.

ರಾಜ್ಯದಲ್ಲಿ ಕೋವಿಡ್-೧೯ ಸೋಂಕು ಅಪಾಯಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, ಇಂದು ಸೋಂಕಿತ ಸಂಖ್ಯೆ ೩೭ಕ್ಕೇರಿದೆ. ಸೋಂಕು ಹರಡುವುದನ್ನು ತಡೆಯುವ ಕಾರಣದಿಂದಾಗಿ ರಾಜ್ಯ ಸರಕಾರ ಮಾರ್ಚ್ ೩೧ರವರೆಗೆ ಕರ್ನಾಟಕ ಲಾಕ್‌ಡೌನ್ ಆದೇಶಿಸಿದೆ.