ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೊನ್ನಾಳಿ ಸರ್ಕಾರಿ ನೌಕರರಿಂದ ಮನವಿ

449

ಹೊನ್ನಾಳಿ: ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಬತ್ಯೆ ಹೆಚ್ಚಳ ದರವನ್ನು ಸ್ಥಗಿತಗೊಳಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಹಾಗೂ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೊಟದ ತಾಲ್ಲೂಕು ಅಧ್ಯಕ್ಷ ಹೆಚ್.ಕೆ. ಸಣ್ಣಪ್ಪ ನೇತೃತ್ವದಲ್ಲಿ ತಹಶೀಲ್ಧಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು.
ಸಂಘದ ಉಪಾಧ್ಯಕ್ಷ ಶಕಿಲ್ ಅಹಮದ್ ಸದಸ್ಯರಾದ ಚಂದ್ರಕಾಂತ್, ಗುರು ಪ್ರಸಾದ್, ತಿಮ್ಮೇಶ್ವರ, ನಾಮದೇವ, ಬಸವರಾಜ್, ಮೇಘರಾಜ್, ಯುವರಾಜ, ಶಿವರಾಜ ಪಾಟೇಲ್, ಆಂಜನೇಯ, ಷಹಜನ್ ರಂಜಿತ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.