ವಿವಿಧ ಪಕ್ಷಗಳ ಪ್ರಮುಖರು ಶಾಸಕ ಅಶೋಕ್‌ನಾಯ್ಕ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ

376

ಶಿವಮೊಗ್ಗ: ರಾಷ್ಟ್ರದಲ್ಲಿ ಪ್ರಧಾನಿ ಮೋದಿ ಅವರ ಆಡಳಿತ ಹಾಗೂ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪನವರ ಅಭಿವೃದ್ಧಿಪರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿ ತಾಲೂಕಿನ ಕುಂಚೇನಹಳ್ಳಿ ಗ್ರಾಮದಲ್ಲಿ ವಿವಿಧ ಪಕ್ಷಗಳ ಅನೇಕ ಮುಖಂಡರುಗಳು ಗ್ರಾಮಾಂತರ ಶಾಸಕ ಕೆ.ಬಿ. ಅಶೋಕನಾಯ್ಕ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶಾಸಕ ಕೆ. ಬಿ. ಅಶೋಕ್ ನಾಯ್ಕ್ ಅವರು, ಬಿಜೆಪಿ ಪಕ್ಷ ಸೇರ್ಪಡೆ ಪರ್ವ ನಿರಂತರವಾಗಿ ನಡೆಯುತ್ತಲಿದೆ. ಪ್ರಧಾನಿ ನರೇಂದ್ರ ಮೋದಿಜಿರವರ ದಕ್ಷ ನಾಯಕತ್ವ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಭಿವೃದ್ಧಿಪರ ಸಿದ್ಧಾಂತಗಳು ನಾಡಿನ ಜನತೆಯ ಮೆಚ್ಚುಗೆಯನ್ನು ಪಡೆದಿದ್ದು, ದೇಶ ಮತ್ತು ರಾಜ್ಯ ಸುರಕ್ಷಿತವಾಗಿರಿಸಲು ಬಿಜೆಪಿ ಆಡಳಿತದಿಂದ ಮಾತ್ರವೇ ಸಾಧ್ಯ ಎಂದರು.
ಪ್ರಮುಖರಾದ ಬೋಜನಾಯ್ಕ್, ಅಂಚಿ, ವಾಸು,ಶಿವಾಜಿ, ದಶರಥ ಹಾಗೂ ಇತರರು ಉಪಸ್ಥಿತರಿದ್ದರು.