ವಿಮೆಡೋದಿಂದ ಆಂಬುಲೆನ್ಸ್ ಸೇವೆ ಲಭ್ಯ

486

ಶಿವಮೊಗ್ಗ: ಬೆಂಗಳೂರಿನ ವಿಮೆಡೋ ಸಂಸ್ಥೆಯಿಂದ ಶಿವಮೊಗ್ಗದಲ್ಲಿ ಆಂಬುಲೆನ್ಸ್ ಸೇವೆ ಆರಂಭಗೊಂಡಿದೆ ಎಂದು ಸಂಸ್ಥೆ ಮಾರುಕಟ್ಟೆ ವ್ಯವಸ್ಥಾಪಕ ಎಂ.ಕೆ. ದರ್ಶನ್ ತಿಳಿಸಿದರು.
ನಗರದ ಪ್ರೆಸ್‌ಟ್ರಸ್ಟ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರದಲ್ಲಿ ಕಳೆದ ೬ ವರ್ಷಗಳಿಂದ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿ ಸಾವಿರಾರು ಜನರಿಗೆ ತುರ್ತು ಸಮಯ ದಲ್ಲಿ ಆಂಬುಲೆನ್ಸ್ ಸೇವೆ ಒದಗಿಸುವ ಕೆಲಸವನ್ನು ಸಂಸ್ಥೆ ಮಾಡಿದೆ. ಇದೀಗ ಶಿವಮೊಗ್ಗದಲ್ಲೂ ಈ ಸೇವೆ ಒದಗಿಸಲು ಮುಂದಾಗಿದ್ದೇವೆ ಎಂದರು.
ಆರೋಗ್ಯ ಸಮಸ್ಯೆ ಎದುರಿಸುವ ಜನರಿಗೆ ಅತ್ಯಂತ ವ್ಯವಸ್ಥಿತವಾಗಿ ತ್ವರಿತಗತಿಯಲ್ಲಿ ಒದಗಿಸುವ ನೆಟ್‌ವರ್ಕ್ ಹೊಂದಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ೫೦ಕ್ಕೂ ಅಧಿಕ ಆಂಬುಲೆನ್ಸ್ ಗಳ ಸಹಭಾಗಿತ್ವ ಪಡೆದುಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರ ಗಳಲ್ಲಿಯೂ ಈ ಸೇವೆ ಸಿಗುವಂತೆ ನೆಟ್ ವರ್ಕ್ ರೂಪಿಸಲಾಗಿದೆ ಎಂದರು.
ಜಿಲ್ಲೆಯ ಜನರು ತುರ್ತಾಗಿ ಆಂಬುಲೆನ್ಸ್ ಅಗತ್ಯವಿದ್ದಲ್ಲಿ ಸಂಸ್ಥೆಯ ಸಹಾಯವಾಣಿ ಸಂಖ್ಯೆ: ೯೩೪೩೧೮೦೦೦೦ ಕರೆ ಮಾಡಬಹುದು. ಕೂಡಲೇ ನಮ್ಮ ನೆಟ್‌ವರ್ಕ್‌ನಲ್ಲಿರುವ ಸಮೀಪದ ಆಂಬುಲೆನ್ಸ್ ಸೇವೆಯನ್ನು ಒದಗಿಸಲಾಗುತ್ತದೆ. ೫೦ಕ್ಕೂ ಅಧಿಕ ಆಂಬುಲೆನ್ಸ್‌ಗಳಲ್ಲಿ ೧೫ಕ್ಕೂ ಹೆಚ್ಚು ವೆಂಟಿಲೇಟ್ ಸೇವೆ ಸಹ ಒಳಗೊಂಡಿದೆ ಎಂದರು.
ದಿನದ ೨೪ ಗಂಟೆಗಳ ಸೇವೆ ಲಭ್ಯ ವಿದ್ದು, ಸಾರ್ವಜನಿಕರಿಗೆ ಸ್ಪರ್ಧಾತ್ಮಕ ದರ ನಿಗದಿಪಡಿಸಲಾಗಿದೆ. ಸಂಸ್ಥೆ ಆರೋಗ್ಯ ಕ್ಷೇತ್ರದ ಜೊತೆಯಲ್ಲಿ ಇತರೆ ಆರೋಗ್ಯ ಉಪಕರಣಗಳ ಮಾರಾಟ ದಲ್ಲಿಯೂ ತೊಡಗಿಸಿಕೊಂಡಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಹೇಶ್ವರಪ್ಪ ಉಪಸ್ಥಿತರಿದ್ದರು.