ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಕರ್ತವ್ಯ ನಿಷ್ಠೆಯಿಂದ ಶ್ರಮಿಸುವಂತೆ ಶಿಕ್ಷಕರಿಗೆ ಡಿಡಿಪಿಐ ಪರಮೇಶ್ವರಪ್ಪ ಕರೆ

320

ಹೊನ್ನಾಳಿ: ಸರಕಾರಿ ಶಾಲೆಗಳ ಶಿಕ್ಷಕರು ಕೊರೊನಾದಂತಹ ವಿಷಮ ಸಂದರ್ಭದಲ್ಲಿಯೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಕರ್ತವ್ಯ ನಿಷ್ಠೆಯಿಂದ ಶ್ರಮಿಸಬೇಕು ಎಂದು ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಹೇಳಿದರು.
ತಾಲೂಕಿನ ನೇರಲಗುಂಡಿ ಗ್ರಾಮದಲ್ಲಿ ವನಯಾತ್ರಿ ಸಮಾನ ಮನಸ್ಕರ ಸಂಸ್ಥೆ ಹಾಗೂ ಡಯಟ್ ಸಹಯೋಗದಲ್ಲಿ ನಡೆದ ಶಿಕ್ಷಣ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಖಾಸಗಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಉದ್ಯೋಗ ಇಲ್ಲದೇ ಜೀವನೋಪಾಯಕ್ಕಾಗಿ ಬೀದಿ ಬದಿ ವ್ಯಾಪಾರ ಮಾಡುತ್ತಿzರೆ. ಅಂಥ ಸ್ಥಿತಿಯನ್ನು ಗಮನಿಸಿಯಾದರೂ ಸರಕಾರಿ ಶಾಲೆಗಳ ಶಿಕ್ಷಕರು ವಿದ್ಯಾಗಮ ಯೋಜನೆಯಡಿ ಪ್ರಾಮಾಣಿಕ ಸೇವೆ ಸಲ್ಲಿಸುವ ಬದ್ಧತೆ ತೋರಬೇಕು ಎಂದು ಕರೆ ನೀಡಿದರು.
ಸಮಾಜಮುಖಿಯಾಗಿ ಶಿಕ್ಷಕರು ಸೇವೆ ಸಲ್ಲಿಸಿದರೆ ಸರಕಾರಿ ಶಾಲೆಗಳನ್ನು ಸಮುದಾಯದ ಸಹಭಾಗಿತ್ವದ ಅಭಿವೃದ್ಧಿಪಡಿಸಲು ಅವಕಾಶಗಳಿವೆ ಎಂಬುದಕ್ಕೆ ನೇರಲಗುಂಡಿ ಗ್ರಾಮದ ಶಾಲೆಯೇ ನಿದರ್ಶನವಾಗಿದೆ. ಈ ಗ್ರಾಮದ ಶಾಲೆಯನ್ನು ಭೌತಿಕ ಮತ್ತು ಬೌದ್ಧಿಕ ಪ್ರಗತಿಯತ್ತ ವನಯಾತ್ರಿ ತಂಡದವರು ಕೊಂಡೊಯ್ಯುತ್ತಿ ರುವುದು ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಡಯೆಟ್ ಪ್ರಾಂಶುಪಾಲ ಹಾಗೂ ಉಪ ನಿರ್ದೇಶಕ (ಅಭಿವೃದ್ಧಿ ) ಎಚ್.ಕೆ. ಲಿಂಗರಾಜು ಮಾತನಾಡಿ, ಸಮುದಾಯ ಬಿಟ್ಟು ಯಾವುದೂ ಇಲ್ಲ. ಸರಕಾರಿ ಶಾಲೆಗಳಲ್ಲಿ ಕಲಿತು ಜೀವನ ರೂಪಿಸಿಕೊಂಡವರು ನಮ್ಮ ಮಧ್ಯೆ ಇzರೆ. ತಾವು ಓದಿದ ಶಾಲೆಗೆ ನೆರವಾಗಲು ಬಹುತೇಕ ಮಂದಿ ಹಿಂಜರಿಯುವುದಿಲ್ಲ. ಶಿಕ್ಷಕರು ಸಮುದಾಯದ ನೆರವು ಪಡೆದು ಶಾಲೆಗಳ ಜೀರ್ಣೋದ್ಧಾರಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ತರಗನಹಳ್ಳಿ, ಕುಂದೂರು, ಯಕ್ಕನಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ೩೦ಕ್ಕೂ ಅಧಿಕ ಶಾಲೆಗಳ ಶಿಕ್ಷಕರಿಗಾಗಿ ವಿದ್ಯಾಗಮ ಅನುಷ್ಠಾನ ಹಾಗೂ ನಿರೂಪಣೆ ಬಗ್ಗೆ ಡಯೆಟ್ ಉಪನ್ಯಾಸಕರು ಸವಿವರ ಮಾಹಿತಿ ನೀಡಿದರು. ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ವನಯಾತ್ರಿ ಸಂಸ್ಥೆಯ ಅರುಣ್ ಪಟೇಲ್, ಕಷ್ಣಮೂರ್ತಿ, ಸತೀಶ್ ಅರಬಗಟ್ಟೆ, ಬಿಇಓ ಜಿ.ಇ. ರಾಜೀವ್, ಬಿಆರ್‌ಸಿ ಎಚ್.ಎಸ್. ಉಮಾಶಂಕರ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಬಸವರಾಜ್ ಅಂಗಡಿ, ಪತ್ರಕರ್ತ ಕುಂದೂರು ಪರಮೇಶ್, ಎಸ್‌ಡಿಎಂಸಿ ಅಧ್ಯಕ್ಷ ಹಾಲೇಶಪ್ಪ ಸೇರಿದಂತೆ ಡಯೆಟ್ ಉಪನ್ಯಾಸಕರು, ವಿವಿಧ ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು.