ವಿದ್ಯಾರ್ಥಿಗಳಲ್ಲಿ ಗುರಿ ಮತ್ತು ಪರಿಶ್ರಮ ಇದ್ದಲ್ಲಿ ಪ್ರತಿಫಲ ಕಟ್ಟಿಟ್ಟ ಬುತ್ತಿ : ಡಾ| ಪ್ರೀತಿ ಪೈ

435

ಶಿವಮೊಗ್ಗ: ವಿದ್ಯಾರ್ಥಿಗಳು ಗುರಿ ಮುಟ್ಟುವವರೆಗೆ ಪರಿಶ್ರಮ ಪಡಬೇಕು ಪರಿಶ್ರಮ ಇದ್ದಲ್ಲಿ ಪ್ರತಿಫಲ ನಿಶ್ಚಿತ ಎಂದು ಡಾ. ಪ್ರೀತಿ ಪೈ ಹೇಳಿದರು.
ಅವರು ಇಂದು ವೆಂಕಟೇಶ ನಗರದ ಸ್ವೀಟ್ ಪಿ.ಯು. ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದರೆ ಮುಗಿಯುವುದಿಲ್ಲ, ಶಿಕ್ಷಣ ಪ್ರತಿ ಘಟ್ಟದಲ್ಲೂ ಉತ್ತಮ ಅಂಕ ದೊಂದಿಗೆ ಮುನ್ನೆಡೆದು ಯಶಸ್ವಿಯಾಗಬೇಕು. ಇದಕ್ಕೆ ಪರಿಶ್ರಮ ಅತ್ಯಗತ್ಯ ಎಂದರು.
ಈಗ ವಿದ್ಯಾರ್ಥಿಗಳು ಪರಿಶ್ರಮ ಪಟ್ಟರೆ ಮುಂದೆ ಅನುಕೂಲ. ಇದರಿಂದ ತಾವು ಇಚ್ಚಿಸುವ ಕೆಲಸ ಪಡೆಯಲು ಸಾಧ್ಯವಾಗುವುದು. ಇಂದು ಪ್ರತಿ ಕೆಲಸದಲ್ಲೂ ಒತ್ತಡ ಇದ್ದೇ ಇದೆ, ಆದರೆ ತಮಗೆ ಇಷ್ಟವಾದ ಕೆಲಸ ಸಿಕ್ಕರೆ ಅದರಲ್ಲಿ ಎಷ್ಟು ಒತ್ತಡ ಇದ್ದರೂ ನಾವು ಅದನ್ನು ನಿರಾಯಾಸ ವಾಗಿ ಮಾಡಬಹುದು ಎಂದರು.
ಸ್ವೀಟ್ ಪಿ.ಯು. ಕಾಲೇಜು ಒಂದು ಮಾದರಿ ಕಾಲೇಜು ಆಗಿದ್ದು, ಇಲ್ಲಿ ಸಾಮಾನ್ಯ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೂ ಹೆಚ್ಚು ಅಂಕ ಪಡೆಯುವಂತೆ ತರಬೇತಿ ನೀಡಲಾಗುತ್ತಿದೆ. ಇದೊಂದು ವಿಭಿನ್ನ ಕಾಲೇಜು ಎಂದು ಶ್ಲಾಘಿಸಿದರು.
ಪ್ರಾಂಶುಪಾಲ ಧರ್ಮರಾಜ್ ಎಸ್.ಟಿ.ಮಾತನಾಡಿ, ೨೦೧೦ರಲ್ಲಿ ಪ್ರಾರಂಭವಾದ ಸ್ವೀಟ್ ಪಿ.ಯು. ಕಾಲೇಜು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಈ ವರ್ಷ ಶೇ.೯೮ರಷ್ಟು ಫಲಿತಾಂಶ ಪಡೆದಿದೆ. ಇಲ್ಲಿ ಪಠ್ಯ ಶಿಕ್ಷಣದೊಂದಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ, ವಿಶೇಷ ತರಬೇತಿ ಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದರು.
ಪ್ರತಿವರ್ಷ ಎಸ್‌ಎಸ್‌ಎಲ್‌ಸಿ ಕೈಪಿಡಿಯನ್ನು ಉಚಿತವಾಗಿ ವಿತರಿಸು ತ್ತಿದೆ. ಆರ್ಥಿಕ ನೆರವು ಬಯಸುವ ೧೦ ಮಕ್ಕಳನ್ನು ದತ್ತು ಪಡೆದು ಉಚಿತವಾಗಿ ಪಿಯು ಶಿಕ್ಷಣ ನೀಡಲು ಉದ್ದೇಶಿ ಸಿದ್ದು, ಇದಕ್ಕಾಗಿ ಆ.೧೨ರ ಬೆಳಿಗ್ಗೆ ೧೦.೩೦ಕ್ಕೆ ವಿದ್ಯಾರ್ಥಿಗಳ ಸ್ಕ್ರೀನಿಂಗ್ ಟೆಸ್ಟ್ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ದಿನೇಶ್ ಎಸ್.ಎಂ. ಹಾಗೂ ಡಾ.ಸುರೇಶ್ ಆರ್ ಚವ್ಹಾಣ್ ಉಪಸ್ಥಿತರಿದ್ದರು.