ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ / ಸಾಧನ ಸಲಕರಣೆಗಳಿಗೆ ಅರ್ಜಿ

453

ದಾವಣಗೆರೆ :೨೦೨೦-೨೧ನೇ ಸಾಲಿಗೆ ಜಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಶೇ. ೬೦ಕ್ಕಿಂತ ಹೆಚ್ಚು ಅಂಕ ಪಡೆದ ವಿಕಲಚೇತನ ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹಧನ ಯೋಜನೆ ಸಾಧನ ಸಲಕರಣೆ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಪ್ರೋತ್ಸಾಹ ಧನ ಯೋಜನೆ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ರೂ.೩೦೦೦, ಪಿ.ಯು.ಸಿ ವಿದ್ಯಾರ್ಥಿಗಳಿಗೆ ರೂ.೫೦೦೦, ಪದವಿ, ಡಿ.ಎಡ್ ವಿದ್ಯಾರ್ಥಿಗಳಿಗೆ ರೂ.೮೦೦೦, ಬಿ.ಇಡಿ, ಸ್ನಾತಕೋತ್ತರ ಪದವಿ, ಎಂ.ಎ, ಎಂ.ಕಾಂ., ಎಂ.ಎಸ್ಸಿ ಹಾಗೂ ಪದವಿ ನಂತರ ೨ ವರ್ಷಗಳ ಕೋರ್ಸ್ ಮಾಡಿದ ವಿದ್ಯಾರ್ಥಿಗಳಿಗೆ ರೂ.೧೦,೦೦೦ ಹಾಗೂ ಕೃಷಿ ಪದವಿ, ಇಂಜಿನಿಯರಿಂಗ್ ತಾಂತ್ರಿಕ ಪಶುವೈದ್ಯಕೀಯ, ಎಂ.ಇಡಿ ಮಾಡಿದ ವಿದ್ಯಾರ್ಥಿಗಳಿಗೆ ರೂ.೧೨,೦೦೦ ಫ್ರೋತ್ಸಾಹ ಧನ ನೀಡಲಾಗುವುದು.
ಫ್ರೋತ್ಸಾಹ ಧನ ಯೋಜನೆಯಡಿ ಪ್ರಯೋಜನವನ್ನು ಪಡೆಯಲು ವಿಕಲಚೇತನರು ಕಡ್ಡಾಯವಾಗಿ ರಾಷ್ಟ್ರೀಕತ ಬ್ಯಾಂಕುಗಳಲ್ಲಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಿರುವ ಉಳಿತಾಯ ಖಾತೆ ಪುಸ್ತಕದ ಪ್ರತಿ ಹಾಗೂ ಅಂಗವಿಕಲರ ಗುರುತಿನ ಕಾರ್ಡ್ (ಯು.ಡಿ.ಐ.ಸಿ. ಕಾರ್ಡ್), ಆಧಾರ್ ಕಾರ್ಡ್, ಅಂಕಪಟ್ಟಿ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬೇಕು.
ಸಾಧನ ಸಲಕರಣೆ ಯೋಜನೆಯಡಿ ಪ್ರಯೋಜನವನ್ನು ಪಡೆಯಲು ಕಡ್ಡಾಯವಾಗಿ ಅಂಗವಿಕಲರ ಗುರುತಿನ ಕಾರ್ಡ್ (ಯು.ಡಿ.ಐ.ಸಿ. ಕಾರ್ಡ್), ಆಧಾರ ಕಾರ್ಡ್, ಬಿ.ಪಿ.ಎಲ್. ಜತಿ ಆದಾಯ ಪ್ರಮಾಣಪತ್ರ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ನಮೂನೆಗಳನ್ನು eಠಿಠಿm://bಡಿbo.hZ.ಜ್ಚಿ.ಜ್ಞಿ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಹಾಗೂ ಗ್ರಾಪಂ, ತಾಪಂನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಆರ್‌ಡಬ್ಲ್ಯೂ ಮತ್ತು ಎಂಆರ್‌ಡಬ್ಲ್ಯು ರನ್ನು ಸಂಪರ್ಕಿಸಿ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಸಹಾಯವಾಣಿ ಮಾಹಿತಿ ಸಲಹಾ ಕೇಂದ್ರ ಜಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳ ಕಚೆರಿ, ಶಂಕರಲೀಲಾ ಗ್ಯಾಸ್ ಏಜೆನ್ಸಿ ಹತ್ತಿರ, ಎಂ.ಸಿ.ಸಿ. ಬಿ-ಬ್ಲಾಕ್, ದಾವಣಗೆರೆ. ಫೋ: ೦೮೧೯೨- ೨೬೩೯೩೯ ನ್ನು ಸಂಪರ್ಕಿಸಬಹುದೆಂದು ಜಿ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಜಿ.ಎಸ್ ಶಶಿಧರ್ ಪ್ರಕಟಣೆಯಲ್ಲಿ ತಿಳಿಸಿzರೆ.