ವರನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ

263

ಶಿವಮೊಗ್ಗ: ಕನ್ನಡದ ವರನಟ ಡಾ.ರಾಜ್‌ಕುಮಾರ್ ಅವರ ಜನ್ಮ ದಿನಾಚರಣೆಯನ್ನು ಇಂದು ಕೆಲವು ಸಂಘ ಸಂಸ್ಥೆಗಳು ಲಾಕ್‌ಡೌನ್ ನಡುವೆಯೇ ಆಚರಿಸಿದರು.
ಸ್ನೇಹಮಯಿ ಸಂಘದವರು ಇಂದು ಬೆಳಿಗ್ಗೆ ಸಂಘದ ಕಚೇರಿಯಲ್ಲಿ ೯೨ನೇ ಹುಟ್ಟು ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್.ಚನ್ನಪ್ಪ, ಡಾ.ರಾಜ್ ಎಂದೆಂದೂ ಮರೆಯದ ಮಾಣಿಕ್ಯ ವಾಗಿzರೆ. ದಕ್ಷಿಣ ಭಾರತ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಅವರ ಕಲಾ ಸೇವೆ ಮರೆಯಲಾಗದು. ಕನ್ನಡಕ್ಕಾಗಿ ಹೋರಾಡಿದ ಗೋಕಾಕ್ ಚಳುವಳಿಯನ್ನು ಕನ್ನಡಿಗರು ಎಂದೂ ಮರೆಯುವುದಿಲ್ಲ ಎಂದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ೨ ಚಿನ್ನದ ಪದಕ ಪಡೆದ ಡಿ.ಜಿ. ಪರಶುರಾಮ್ ಇವರನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ರವಿಕುಮಾರ್, ಜಿ.ವಿಜಯ ಕುಮಾರ್, ಸುರೇಶ್ ಕುಮಾರ್, ಲಕ್ಷ್ಮೀಪಥಿ, ಆಂತೋಣಿ, ಅಭಿಷೇಕ್, ರೋಹನ್ ಮುಂತಾದವರು ಈ ಸಂದರ್ಭದಲ್ಲಿದ್ದರು.
ಜಲಾಮುಖಿ ಸಂಘದಿಂದ
ಜನ್ಮ ದಿನಾಚರಣೆ:
ವಿನೋಬನಗರದ ಆಟೋ ಸ್ಟ್ಯಾಂಡ್ ಬಳಿ ಜಲಾಮುಖಿ ರಾಜ್‌ಕುಮಾರ್ ಅಭಿಮಾನಿಗಳ ಸಂಘ ಹಾಗೂ ಆಟೋ ಚಾಲಕರ ಸಂಘದ ವತಿಯಿಂದ ಡಾ.ರಾಜ್ ಕುಮಾರ್ ಅವರ ೯೨ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಮೂರ್ತಿ, ಬಾಬು, ಕೃಷ್ಣಪ್ಪ, ಗೋಪಿನಾಥ್, ಆನಂದ್ ಮುಂತಾದವರಿದ್ದರು.