ಲೈನ್ ದುರಸ್ಥಿಗೆಂದು ಕಂಬ ಏರಿದ ಲೈನ್‌ಮನ್‌ಗೆ ವಿದ್ಯುತ್ ಶಾಕ್: ಮೆಗ್ಗಾನ್ ತೀವ್ರ ನಿಗಾ ಘಟಕಕ್ಕೆ ಶಿಫ್ಟ್

393

ಶಿವಮೊಗ್ಗ: ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ದುರಸ್ಥಿಗೆಂದು ವಿದ್ಯುತ್ ಕಂಬವೇರಿ ಶಾಕ್ ಹೊಡೆಸಿಕೊಂಡ ಮೆಸ್ಕಾಂ ನೌಕರ ಪ್ರeಹೀನ ಸ್ಥಿತಿ ತಲುಪಿರುವ ಘಟನೆ ಶಿವಮೊಗ್ಗ ನಗರದ ಮೆಗ್ಗಾನ್ ಬೊಧನಾ ಆಸ್ಪತ್ರೆ ಬಳಿ ನಡೆದಿದೆ.
ಮೆಗ್ಗಾನ್ ಬೋಧನಾ ಆಸ್ಪತ್ರೆ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಮೆಸ್ಕಾಂನ ಕಾಯಂ ನೌಕರ ಉಮಾಶಂಕರ್ (೪೪) ಟ್ರಾನ್ಸ್‌ಫಾರ್ಮರ್ ಪಕ್ಕದ ಜೋಡಿ ಕಂಬವನ್ನೇರಿ ರಿಪೇರಿ ಮಾಡುತ್ತಿದ್ದರು. ಪೂರ್ವ ತಯಾರಿಯಂತೆಯೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ನಿರ್ವಹಣೆ ಮಾಡುವವರಿಗೂ ತಿಳಿಸಲಾಗಿತ್ತು.
ಉಮಾಶಂಕರ್ ಲೈನ್‌ಗೆ ಕೈ ಹಾಕಿದಾಗ ವಿದ್ಯುತ್ ಸಂಪರ್ಕ ಕಡಿತಗೊಂಡಿರದೇ ಆಘಾತ ನೀಡಿದೆ. ಅ ನಿತ್ರಾಣರಾಗಿ ಪ್ರeಹೀನ ಸ್ಥಿತಿಯಲ್ಲಿದ್ದ ಉಮಾಶಂಕರ್‌ರನ್ನ ಅಗ್ನಿಶಾಮಕ ದಳ ಸಿಬ್ಬಂದಿ ಕೆಳಗೆ ಇಳಿಸಿ ಮೆಗ್ಗಾನ್ ಆಸ್ಪತ್ರೆಯ ತೀವ್ರನಿಗಾ ಘಟಕಕ್ಕೆ ಶಿಫ್ಟ್ ಮಾಡಿಸಿzರೆ.
ಉಮಾಶಂಕರ್ ಸದ್ಯ ಜೀವನ್ಮರಣ ಹೋರಾಟ ನಡೆಸುತ್ತಿದ್ದು ಘಟನೆಗೆ ಕಾರಣ ತಿಳಿದುಬಂದಿಲ್ಲ. ಕೆಲವರು ಯಾರೋ ಪವರ್ ಆನ್ ಮಾಡಿz ರೆಂದು ಹೇಳಿದರೆ, ಇನ್ನು ಕೆಲವರು ಜನರೇಟರ್‌ನಿಂದ ಲೈನ್‌ಗೆ ಹರಿದ ವಿದ್ಯುತ್ ಎನ್ನುತ್ತಾರೆ. ಒಟ್ಟಿನಲ್ಲಿ ಮೆಗ್ಗಾನ್ ಆವರಣದಲ್ಲಿ ವಿದ್ಯುತ್ ಅವಘಡಗಳು ಸಾಮಾನ್ಯ ಎನ್ನುವಂತಾಗಿದೆ. ಈ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.