ಲಾಕ್‌ಡೌನ್ ಸಡಿಲಿಕೆ ಇಲ್ಲ: ಡಿಸಿ ಸ್ಪಷ್ಟನೆ

545

ಶಿವಮೊಗ್ಗ: ಜಿಲ್ಲೆಯು ಗ್ರೀನ್‌ಝೋನ್‌ನಲ್ಲಿದ್ದರೂ ಕೂಡ ಲಾಕ್‌ಡೌನ್ ಸಡಿಲಿಕೆ ಆಗಿಲ್ಲವೆಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ನಗರದ ಗೋಪಿ ವೃತ್ತದ ಬಳಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೆಲವು ಅಭಿವೃದ್ಧಿ ಕೆಲಸ ಹಾಗೂ ಅಂಗಡಿ ಮುಂಗಟ್ಟುಗಳನ್ನ ತೆರೆಯಲು ಅವಕಾಶ ನೀಡಿದೆ, ಆದರೆ ಇದನ್ನೇ ಸಡಿಲಿಕೆ ಎಂದು ತಿಳಿದು ಸಾರ್ವಜನಿಕರು ರಸ್ತೆಗಿಳಿಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಜಿಲ್ಲಾಡಳಿತವು ಲಾಕ್ ಡೌನ್ ಹಿಂಪಡೆದಿಲ್ಲ ಎಂದು ತಿಳಿಸಿದರು.
ಆರಂಭದಿಂದಲೂ ಶಿವಮೊಗ್ಗ ಜಿಲ್ಲೆ ಗ್ರೀನ್ ಜೋನ್‌ನಲ್ಲಿರಲು ಸಾರ್ವಜನಿಕರ ಸಹಕಾರ ಮುಖ್ಯ ಕಾರಣ. ಕೆಲವು ಗೊಂದಲಗಳ ಕಾರಣದಿಂದ ಜನರು ಲಾಕ್ ಡೌನ್ ಸಡಿಲಗೊಳಿಸಲಾಗಿದೆ ಎಂದು ಭಾವಿಸಿದ್ದಾರೆ. ಆದರೆ ಯಾವುದೇ ಸಡಿಲಿಕೆಗಳಿಲ್ಲ. ಕೆಲವು ಆರ್ಥಿಕ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಅತ್ಯಾವಶ್ಯಕ ವಸ್ತುಗಳನ್ನ ಖರೀದಿಸಲು ಆರಂಭದಿಂದಲೇ ಅವಕಾಶ ನೀಡಲಾಗಿತ್ತು. ಆದರೆ ಕಾರ್ಯ ವ್ಯಾಪ್ತಿ ಸಣ್ಣದರಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಇಂದು ಆ ಕ್ಷೇತ್ರವನ್ನ ಸರ್ಕಾರ ವಿಸ್ತರಿಸುವ ಮೂಲಕ ಸಾರ್ವಜನಿಕರಿಗೆ ಅದರ ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಅದರಂತೆ ಜನರಿಗೆ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಖರೀದಿಯ ಅವಶ್ಯಕತೆ ಇದ್ದರೆ ಮಾತ್ರ ಹೊರಬರಬೇಕು ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದರು.