ಲಕ್ಷ ಕೋಟಿ ಘೋಷಣೆ: ಪ್ರಧಾನಿಗೆ ಧನ್ಯವಾದ ಸಲ್ಲಿಸಿದ ಬಿಎಸ್‌ವೈ

448

ಬೆಂಗಳೂರು: ಪ್ರಧಾನಿ ಮೋದಿ ಅವರು ಕೃಷಿ ಮೂಲ ಸೌಕರ್ಯ ಅಭಿವೃದ್ಧಿ ನಿಧಿಯಡಿ ೧ ಲಕ್ಷ ಕೋಟಿ ರೂ. ಅನುದಾನ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕದ ರೈತರ ಪರವಾಗಿ ಧನ್ಯವಾದ ಅರ್ಪಿಸಿzರೆ.
ಸಿಎಂ ಯಡಿಯೂರಪ್ಪ ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸಿzರೆ. ರಾಜ್ಯದ ಸುಮಾರು ೫೨.೫೦ ಲಕ್ಷ ಕೃಷಿ ಕುಟುಂಬಗಳಿಗೆ ಲಾಭದಾಯಕ ವಾಗಿರುವ ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ, ಈ ವರ್ಷದ ಮೂರು ಕಂತುಗಳಲ್ಲಿ ಮೊದಲ ಕಂತಿನ ಮೊತ್ತ ೧,೦೪೯ ಕೋಟಿ ರೂ. ಬಿಡುಗಡೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಕರ್ನಾಟಕದ ರೈತರ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ ಬರೆದುಕೊಂಡಿzರೆ.
೨೦೨೦ ಆಗಸ್ಟ್ ೯ ರಂದು ಕೃಷಿ ಮೂಲಸೌಕರ್ಯ ನಿಧಿಯಿಂದ ಪಿಎಂ ಕಿಸಾಸ್ ಯೋಜನೆ ಅಡಿಯಲ್ಲಿ ಪ್ರಧಾನಿ ಮೋದಿಯವರಿಂದ ಆನ್‌ಲೈವ್ ಮೂಲಕ ರೈತರಿಗೆ ನೆರವು ಬಿಡುಗಡೆ ಮಾಡಿzರೆ. ಈ ಯೋಜನೆ ಅಡಿಯಲ್ಲಿ ದೇಶದ ೮೦೫ ಕೋಟಿ ರೈತರಿಗೆ ೬ನೇ ಕಂತಿನ ೧೭,೦೦೦ ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿzರೆ ಎಂದು ತಿಳಿಸಿzರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಕೃಷಿ ವಲಯದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಬಗ್ಗೆ ರೈತರ ಜೊತೆಗೆ ಸಂವಾದ ನಡೆಸಿದರು. ಸಂವಾದಕ್ಕೂ ಮುನ್ನ ಈ ಯೋಜನೆ ಗಳಿಗೆ ಚಾಲನೆ ನೀಡಲಾಯಿತು.
ಈ ವೇಳೆ ಮುಂದಿನ ಮೂರು ತಿಂಗಳಗಳಲ್ಲಿ ಕಾಮಗಾರಿ ಮುಗಿಯ ಲಿದ್ದು, ನಬಾರ್ಡ್ ಬ್ಯಾಂಕ್‌ನಿಂದ ೩೨ ಲಕ್ಷ ಸಾಲ ಪಡೆಯಲಾಗಿದೆ. ಗೋದಾಮು ಸಿದ್ಧವಾದ ಬಳಿಕ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿ ಉತ್ತಮ ಬೆಲೆ ಸಿಗುವ ವೇಳೆ ಮಾರಾಟ ಮಾಡಬಹುದು ಎಂದು ಪ್ರಧಾನಿ ಮೋದಿ ಅವರಿಗೆ ತಿಳಿಸಿದರು.